ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಸೋಮವಾರ ಒಟ್ಟು 11,958 ಮಂದಿಗೆ ಸೋಂಕು ದೃಢಪಟ್ಟಿದ್ದು, 340 ಜನರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಒಂದೇ ದಿನ 1,992 ಜನರಿಗೆ ಸೋಂಕು, 199 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 27,07,481ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 24,36,716 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 2,38,824 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರಿನಲ್ಲಿ ಇಂದು ಒಂದೇ ದಿನ 1,992 ಜನರಿಗೆ ಸೋಂಕು ದೃಢಪಟ್ಟಿದ್ದು, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 11,85,118ಕ್ಕೆ ಏರಿಕೆಯಾಗಿದೆ. 11,85,118 ಸೋಂಕಿತರ ಪೈಕಿ 10,62,398 ಜನರು ಗುಣಮುಖರಾಗಿದ್ದಾರೆ. ಕೊರೊನಾ ಸೋಂಕಿಗೆ 199 ಜನರು ಮೃತಪಟ್ಟಿದ್ದಾರೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ ಕೊರೊನಾ ಸೋಂಕಿನಿಂದ 15,074 ಜನರು ಸಾವನ್ನಪ್ಪಿದ್ದಾರೆ. 1,07,645 ಸೋಂಕಿತರು ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಕರ್ನಾಟಕ ರಾಜ್ಯದಲ್ಲಿಂದು ಹೊಸದಾಗಿ 11,958 ಜನರಿಗೆ ಕೊರೊನಾ ದೃಢಪಟ್ಟಿದೆ. ಈ ಪೈಕಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು, ಅಂದರೆ 1992 ಜನರಿಗೆ ಸೋಂಕು ದೃಢಪಟ್ಟಿದೆ. ಶಿವಮೊಗ್ಗ 1224, ಮೈಸೂರು 1213, ಹಾಸನ 1108, ಮಂಡ್ಯ 597, ತುಮಕೂರು 420, ದಕ್ಷಿಣ ಕನ್ನಡ 408, ಉಡುಪಿ 394, ದಾವಣಗೆರೆ 380, ಚಿಕ್ಕಮಗಳೂರು 365, ಉತ್ತರ ಕನ್ನಡ 364, ಬೆಳಗಾವಿ 355, ಧಾರವಾಡ 313, ಕೋಲಾರ 298, ಚಿತ್ರದುರ್ಗ 294, ಬೆಂಗಳೂರು ಗ್ರಾಮಾಂತರ 292, ಚಿಕ್ಕಬಳ್ಳಾಪುರ 282, ಬಳ್ಳಾರಿ 267, ಕೊಡಗು 230, ಚಾಮರಾಜನಗರ 209, ಹಾವೇರಿ 179, ಕೊಪ್ಪಳ 155, ಗದಗ 141, ವಿಜಯಪುರ 137, ಬಾಗಲಕೋಟೆ 112, ಕಲಬುರಗಿ 67, ರಾಯಚೂರು 64, ರಾಮನಗರ 48, ಯಾದಗಿರಿ 37, ಬೀದರ್ ಜಿಲ್ಲೆಯಲ್ಲಿ ಇಂದು 13 ಪ್ರಕರಣಗಳು ವರದಿಯಾಗಿವೆ.
ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ಕರ್ನಾಟಕದಲ್ಲಿ ಇಂದು ಒಂದೇ ದಿನ ಕೊರೊನಾ ಸೋಂಕಿನಿಂದ 340 ಜನರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಅತಿಹೆಚ್ಚು, ಅಂದರೆ 199 ಜನರು ಮೃತಪಟ್ಟಿದ್ದಾರೆ. ಮೈಸೂರು 17, ಬೆಳಗಾವಿ 15, ಹಾಸನ, ಹಾವೇರಿಯಲ್ಲಿ ತಲಾ 10, ಬಳ್ಳಾರಿ, ಶಿವಮೊಗ್ಗದಲ್ಲಿ ತಲಾ 9, ಧಾರವಾಡ 8, ಕೋಲಾರ, ಕೊಪ್ಪಳ ಜಿಲ್ಲೆಯಲ್ಲಿ ತಲಾ 6, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ದಾವಣಗೆರೆಗಳಲ್ಲಿ ತಲಾ 5, ತುಮಕೂರು, ವಿಜಯಪುರದಲ್ಲಿ ತಲಾ 4, ಬಾಗಲಕೋಟೆ, ದಕ್ಷಿಣ ಕನ್ನಡ, ಮಂಡ್ಯ, ರಾಮನಗರ, ರಾಯಚೂರು ಜಿಲ್ಲೆಗಳಲ್ಲಿ ತಲಾ 3, ಚಿಕ್ಕಬಳ್ಳಾಪುರ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 2, ಬೀದರ್, ಚಾಮರಾಜನಗರ, ಚಿತ್ರದುರ್ಗ, ಕಲಬುರಗಿ, ಕೊಡಗು ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 31,920 ಜನರು ಸಾವನ್ನಪ್ಪಿದ್ದಾರೆ.
ಇಂದಿನ 07/06/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/6g2hgmymnF @CMofKarnataka @BSYBJP @mla_sudhakar @drashwathcn @RAshokaBJP @BSBommai @CPBlr @PIBBengaluru @KarnatakaVarthe @PIBBengaluru @BBMPCOMM @BlrCityPolice @blrcitytraffic pic.twitter.com/W7hAv7ZTAb
— K’taka Health Dept (@DHFWKA) June 7, 2021
(Coronavirus Karnataka Numbers 11958 Infected 340 People Death on June 7)
ಇದನ್ನೂ ಓದಿ: ಸೋಲಿನಿಂದಲೂ ಪಾಠ ಕಲಿಯೋಣ: ಬಿಜೆಪಿ ನಾಯಕರಿಗೆ ನರೇಂದ್ರ ಮೋದಿ ಕಿವಿಮಾತು
ಇದನ್ನೂ ಓದಿ: PM Narendra Modi: ದೇಶದ 80 ಕೋಟಿ ಜನರಿಗೆ ದೀಪಾವಳಿಯವರೆಗೂ ಉಚಿತ ಆಹಾರ ಧಾನ್ಯ: ಪ್ರಧಾನಿ ಮೋದಿ ಘೋಷಣೆ
Published On - 8:09 pm, Mon, 7 June 21