ಕಲಬುರಗಿ: ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ಮೊದಲ ಶಂಕಿತ ಬಲಿ!

|

Updated on: Mar 11, 2020 | 1:08 PM

ಕಲಬುರಗಿ: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್​ಗೆ ಶಂಕಿತ ವೃದ್ಧ ಬಲಿಯಾಗಿದ್ದಾನೆ. ದುಬೈನಿಂದ ಕಲಬುರಗಿಗೆ 76 ವರ್ಷದ ವೃದ್ಧ ಮರಳಿದ್ದ. ವೃದ್ಧನಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ಹೀಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೃದ್ಧನ ಥ್ರೋಟ್ ಸ್ವ್ಯಾಬ್‌ ಪರೀಕ್ಷೆ ನಡೆಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ನಿನ್ನೆ ಹೈದರಾಬಾದ್‌ಗೆ ಕರೆದೊಯ್ದಿದ್ದರು. ಆದ್ರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ವೃದ್ಧ ಮೃತಪಟ್ಟಿದ್ದಾನೆ. ಆದ್ರೆ ವೃದ್ಧ ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿಲ್ಲ. ವೃದ್ಧನ ವೈದ್ಯಕೀಯ ವರದಿಗಾಗಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಕಾಯುತ್ತಿದ್ದು, ವರದಿ ಕುರಿತು […]

ಕಲಬುರಗಿ: ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ಮೊದಲ ಶಂಕಿತ ಬಲಿ!
Follow us on

ಕಲಬುರಗಿ: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್​ಗೆ ಶಂಕಿತ ವೃದ್ಧ ಬಲಿಯಾಗಿದ್ದಾನೆ. ದುಬೈನಿಂದ ಕಲಬುರಗಿಗೆ 76 ವರ್ಷದ ವೃದ್ಧ ಮರಳಿದ್ದ. ವೃದ್ಧನಲ್ಲಿ ಕೊರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡಿತ್ತು. ಹೀಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೃದ್ಧನ ಥ್ರೋಟ್ ಸ್ವ್ಯಾಬ್‌ ಪರೀಕ್ಷೆ ನಡೆಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ನಿನ್ನೆ ಹೈದರಾಬಾದ್‌ಗೆ ಕರೆದೊಯ್ದಿದ್ದರು. ಆದ್ರೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ವೃದ್ಧ ಮೃತಪಟ್ಟಿದ್ದಾನೆ.

ಆದ್ರೆ ವೃದ್ಧ ಕೊರೊನಾ ಸೋಂಕಿನಿಂದ ಮೃತಪಟ್ಟಿರುವುದು ದೃಢಪಟ್ಟಿಲ್ಲ. ವೃದ್ಧನ ವೈದ್ಯಕೀಯ ವರದಿಗಾಗಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಕಾಯುತ್ತಿದ್ದು, ವರದಿ ಕುರಿತು ಎಲ್ಲರಲ್ಲೂ ಆತಂಕ ಶುರುವಾಗಿದೆ.

ತಿಂಗಳ ಹಿಂದೆ ಸೌದಿ ಅರೇಬಿಯಾಕ್ಕೆ ವೃದ್ಧ ಹೋಗಿದ್ದ. ಉಮರಾ ತೀರ್ಥ ಕ್ಷೇತ್ರಕ್ಕೆ ತೆರಳಿದ್ದ ವೃದ್ಧ ಫೆ.29ರಂದು ಕಲಬುರಗಿ ನಗರಕ್ಕೆ ವಾಪಸ್ ಆಗಿದ್ದ. ಕಲಬುರಗಿ ನಗರದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡ ಸಹ ಆಗಿದ್ದ.

Published On - 1:07 pm, Wed, 11 March 20