ತರಬೇತುದಾರನ ಕಣ್ಣೆದುರೇ ಸ್ವಿಮ್ಮಿಂಗ್ ಪೂಲ್ನಲ್ಲೇ ಒದ್ದಾಡಿ ಪ್ರಾಣಬಿಟ್ಟ ಯುವಕ
ಹುಬ್ಬಳ್ಳಿ: ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಲು ಹೋಗಿ ಯುವಕ ಪ್ರಾಣ ಬಿಟ್ಟಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಡೆದಿದೆ. ತರಬೇತುದಾರನ ಮುಂದೆಯೇ ನೀರಿನಲ್ಲಿ ಮುಳುಗಿ ಸಿರಾಜ್ ಅಣ್ಣಿಗೇರಿ (24) ಸಾವಿಗೀಡಾಗಿದ್ದಾನೆ. ಪ್ಲ್ಯಾಶ್ ಸ್ವಿಮ್ಮಿಂಗ್ ಪೂಲ್ನಲ್ಲಿ ಸ್ನೇಹಿತರೊಡನೆ ಈಜಾಡಲು ನಲವಲಗುಂದ ನಿವಾಸಿ ಸಿರಾಜ್ ಅಣ್ಣಿಗೇರಿ ಬಂದಿದ್ದ. ನೀರಿನಲ್ಲಿ ಮುಳುಗುವ ವೇಳೆ ಯುವಕ ಜೋರಾಗಿ ಕೈ ಬಡಿದಿದ್ದಾನೆ. ಯುವಕ ನೀರಿನಲ್ಲಿ ಮುಳುಗುತ್ತಿದ್ರೂ ತರಬೇತುದಾರ ರಕ್ಷಿಸಲು ಹೋಗಲಿಲ್ಲ. ಈ ವೇಳೆ ಸ್ನೇಹಿತರು ಸಹ ಆತನ ಜೊತೆ ಇರಲಿಲ್ಲ. ಹೀಗಾಗಿ ಸಿರಾಜ್ ಸಾವಿನಲ್ಲಿ ಹಲವು ಅನುಮಾನ […]
ಹುಬ್ಬಳ್ಳಿ: ಸ್ವಿಮ್ಮಿಂಗ್ ಪೂಲ್ನಲ್ಲಿ ಈಜಲು ಹೋಗಿ ಯುವಕ ಪ್ರಾಣ ಬಿಟ್ಟಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಡೆದಿದೆ. ತರಬೇತುದಾರನ ಮುಂದೆಯೇ ನೀರಿನಲ್ಲಿ ಮುಳುಗಿ ಸಿರಾಜ್ ಅಣ್ಣಿಗೇರಿ (24) ಸಾವಿಗೀಡಾಗಿದ್ದಾನೆ.
ಪ್ಲ್ಯಾಶ್ ಸ್ವಿಮ್ಮಿಂಗ್ ಪೂಲ್ನಲ್ಲಿ ಸ್ನೇಹಿತರೊಡನೆ ಈಜಾಡಲು ನಲವಲಗುಂದ ನಿವಾಸಿ ಸಿರಾಜ್ ಅಣ್ಣಿಗೇರಿ ಬಂದಿದ್ದ. ನೀರಿನಲ್ಲಿ ಮುಳುಗುವ ವೇಳೆ ಯುವಕ ಜೋರಾಗಿ ಕೈ ಬಡಿದಿದ್ದಾನೆ. ಯುವಕ ನೀರಿನಲ್ಲಿ ಮುಳುಗುತ್ತಿದ್ರೂ ತರಬೇತುದಾರ ರಕ್ಷಿಸಲು ಹೋಗಲಿಲ್ಲ. ಈ ವೇಳೆ ಸ್ನೇಹಿತರು ಸಹ ಆತನ ಜೊತೆ ಇರಲಿಲ್ಲ. ಹೀಗಾಗಿ ಸಿರಾಜ್ ಸಾವಿನಲ್ಲಿ ಹಲವು ಅನುಮಾನ ವ್ಯಕ್ತವಾಗಿವೆ.
ಅಲ್ಲದೆ ಮಾರ್ಚ್ 18ರಂದು ಸಿರಾಜ್ ಅಣ್ಣಿಗೇರಿ ಮದುವೆ ನಿಗದಿಯಾಗಿತ್ತು. ಯುವಕ ನೀರಿನಲ್ಲಿ ಮುಳುಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವಕನ ಸಾಯುವ ಕೊನೆ ಕ್ಷಣದ ವಿಡಿಯೋ ಎದೆ ಝಲ್ ಎನ್ನಿಸುವಂತಿದೆ.
Published On - 9:38 am, Thu, 12 March 20