ಕೊರೊನಾಗೆ ಸಾರಾಯಿ ರಾಮಬಾಣವಂತೆ… ಪರಿಷತ್​ನಲ್ಲಿ ಮರಿತಿಬ್ಬೇಗೌಡ ಹೇಳಿದ್ದು

ಬೆಂಗಳೂರು: ಪರಿಷತ್​ನಲ್ಲಿ ಕೊರೊನಾಗೆ ಬ್ರಾಂದಿ ಔಷಧಿ ಎನ್ನೋ ಹಾಸ್ಯಭರಿತ ಚರ್ಚೆ ಉಂಟಾಗಿತ್ತು. ಮರಿತಿಬ್ಬೇಗೌಡ ಕೊರೊನಾಗೆ ಸಾರಾಯಿ ರಾಮಬಾಣ ಎಂದಿದ್ದಾರೆ. ಇವತ್ತು ಕೊರೊನಾ ವೈರಸ್ ಎಲ್ಲೆಡೆ ಬಂದಿದೆ. ಮುಕ್ಕೋಟಿ ದೇವತೆಗಳು ಎಲ್ಲಿ ಹೋದ್ರು ಪೂಜಾರಿ ಅವ್ರೇ? ಎಂದು ಮುಜರಾಯಿ ಸಚಿವ ಸಿಟಿ ರವಿಗೆ ಮರಿತಿಬ್ಬೇಗೌಡ ಪ್ರಶ್ನೆ ಮಾಡಿದ್ದಾರೆ. ದೇವಸ್ಥಾನಗಳನ್ನು ಮುಚ್ಚಿ ಅಂತ ಹೇಳ್ತಿದ್ದಾರೆ. ದೇವರುಗಳಿಂದ ಕೊರೊನಾ ಕಡಿಮೆ ಮಾಡಲು ಆಗ್ತಿಲ್ಲ. ಈ ಸಣ್ಣ ವೈರಸ್​ಗೆ ಔಷಧಿ‌ ಕಂಡು ಹಿಡಿಯಲು ಆಗ್ತಿಲ್ಲ. ಆದ್ರೆ ಈ ವೈರಸ್ ಸಾಯಿಸಲು ಬ್ರಾಂದಿ ಇಂದ […]

ಕೊರೊನಾಗೆ ಸಾರಾಯಿ ರಾಮಬಾಣವಂತೆ... ಪರಿಷತ್​ನಲ್ಲಿ  ಮರಿತಿಬ್ಬೇಗೌಡ ಹೇಳಿದ್ದು
sadhu srinath

|

Mar 12, 2020 | 3:59 PM

ಬೆಂಗಳೂರು: ಪರಿಷತ್​ನಲ್ಲಿ ಕೊರೊನಾಗೆ ಬ್ರಾಂದಿ ಔಷಧಿ ಎನ್ನೋ ಹಾಸ್ಯಭರಿತ ಚರ್ಚೆ ಉಂಟಾಗಿತ್ತು. ಮರಿತಿಬ್ಬೇಗೌಡ ಕೊರೊನಾಗೆ ಸಾರಾಯಿ ರಾಮಬಾಣ ಎಂದಿದ್ದಾರೆ. ಇವತ್ತು ಕೊರೊನಾ ವೈರಸ್ ಎಲ್ಲೆಡೆ ಬಂದಿದೆ. ಮುಕ್ಕೋಟಿ ದೇವತೆಗಳು ಎಲ್ಲಿ ಹೋದ್ರು ಪೂಜಾರಿ ಅವ್ರೇ? ಎಂದು ಮುಜರಾಯಿ ಸಚಿವ ಸಿಟಿ ರವಿಗೆ ಮರಿತಿಬ್ಬೇಗೌಡ ಪ್ರಶ್ನೆ ಮಾಡಿದ್ದಾರೆ.

ದೇವಸ್ಥಾನಗಳನ್ನು ಮುಚ್ಚಿ ಅಂತ ಹೇಳ್ತಿದ್ದಾರೆ. ದೇವರುಗಳಿಂದ ಕೊರೊನಾ ಕಡಿಮೆ ಮಾಡಲು ಆಗ್ತಿಲ್ಲ. ಈ ಸಣ್ಣ ವೈರಸ್​ಗೆ ಔಷಧಿ‌ ಕಂಡು ಹಿಡಿಯಲು ಆಗ್ತಿಲ್ಲ. ಆದ್ರೆ ಈ ವೈರಸ್ ಸಾಯಿಸಲು ಬ್ರಾಂದಿ ಇಂದ ಸಾಧ್ಯ ಅಂತಿದ್ದಾರೆ. ಗಾಂಧಿಯಿಂದ ಅಲ್ಲ ಬ್ರಾಂದಿಯಿಂದ ವೈರಸ್ ಸಾಯಿಸಲಾಗ್ತಿದೆ ಎಂದು ಇಂದು ಪರಿಷತ್​ನಲ್ಲಿ ಮರಿತಿಬ್ಬೇಗೌಡ ವಾದಿಸಿದ್ದು, ಇವರ ಮಾತಿಗೆ ಇಡೀ ಸದನ ನಗೆಯಲ್ಲಿ ತೆಲಾಡಿದೆ.

ಮಧ್ಯ ಪ್ರವೇಶ ಮಾಡಿದ ಗೋವಿಂದರಾಜು ಅಬಕಾರಿ ಮಂತ್ರಿಗಳಿಗೆ ಬ್ರಾಂದಿ ಹೆಚ್ಚು ಸೇಲ್ ಆಗಿ ಒಳ್ಳೆ ರೆವಿನ್ಯೂ ಬರುತ್ತೆ ಬಿಡಿ ಎಂದರು. ಹಿಂದೆ ಪ್ಲೇಗ್ ಬಂದಾಗ ಪ್ಲೇಗಮ್ಮ ದೇವಸ್ಥಾನ ಪ್ರಾರಂಭ ಆಗಿತ್ತು. ಇವತ್ತು ಕೊವಿಂದಮ್ಮ ದೇವಾಲಯ ಬಂದ್ರೆ ಆಶ್ಚರ್ಯ ಇಲ್ಲ. ತೀರ್ಥವಾಗಿ ಬ್ರಾಂದಿ ಕೊಡ್ತಾರೆ ಎಂದು ಮರಿತಿಬ್ಬೇಗೌಡರು ಮಾತು ಮುಂದುವರೆಸಿದರು.

ಬ್ರಾಂದಿ ಔಷಧಿ ಆಗಿರೋದ್ರಿಂದ ಇಲಾಖೆಗೆ ಜಾಸ್ತಿ ಆದಾಯ ಬರುತ್ತೆ. ದೇವಾಲಯ ಮುಚ್ಚಲು ಹೇಳ್ತಿದ್ದಾರೆ. ಆದ್ರೆ ಯಾರು ವೈನ್ ಶಾಪ್ ಮುಚ್ಚಬೇಕು ಅಂತ ಹೇಳ್ತಿಲ್ಲ. ಸ್ವಲ್ಪ ದಿನ ಈ ಕೊರೊನಾ ಉಳಿಸಿಕೊಳ್ಳಿ. ಅಬಕಾರಿ ಇಲಾಖೆಗೆ ಹಣ ಹೆಚ್ಚು ಬರುತ್ತೆ ಎಂದರು. ಅದಕ್ಕೆ ಕೇವಲ ಬ್ರಾಂದಿ ಮಾತ್ರನಾ? ಅದರ ಜೊತೆಗೆ ಏನು ಇಲ್ಲವೇ ಎಂದ ಸಚಿವ ಸಿ.ಟಿ.ರವಿ ಹೇಳಿದ್ರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada