AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಕೊರೊನಾ ಭೀತಿ: ಆಸ್ಪತ್ರೆ ನಿರ್ವಹಣೆಗೆ ಮುಂದಾದ ಸುಧಾಮೂರ್ತಿ

ಬೆಂಗಳೂರು: ಸಾಮಾಜಿಕ ಕಾರ್ಯಗಳಲ್ಲಿ ಸದಾ ತೊಡಗಿಸಿಕೊಂಡಿರುವ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ನೆರವು ನೀಡಲು ಮುಂದಾಗಿದ್ದಾರೆ. ಈ ಸಂಬಂಧ ಸಚಿವ ಸುರೇಶ್‌ ಕುಮಾರ್ ಫೇಸ್‌ಬುಕ್ ಪೋಸ್ಟ್​ ಮಾಡಿದ್ದಾರೆ. ನಿನ್ನೆ ಬೆಳಗ್ಗೆ ನನಗೆ ಇನ್ಫೋಸಿಸ್ ಫೌಂಡೇಷನ್​ನಿಂದ ಕರೆ ಬಂದಿತ್ತು.‌ ಸುಧಾಮೂರ್ತಿ ಅವರು ಮಾತನಾಡಿ ದೇಶ-ವಿದೇಶಗಳಲ್ಲಿ ಆತಂಕ ತಂದಿರುವ ಕೊರೊನಾ ವೈರಸ್ ವ್ಯಾಪಕವಾಗಿ ಹರಡದಂತೆ ನಮ್ಮ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು. ಒಂದು ಆಸ್ಪತ್ರೆಯನ್ನು ತಮಗೆ ವಹಿಸಿದರೆ ಅದನ್ನು […]

ರಾಜ್ಯದಲ್ಲಿ ಕೊರೊನಾ ಭೀತಿ: ಆಸ್ಪತ್ರೆ ನಿರ್ವಹಣೆಗೆ ಮುಂದಾದ ಸುಧಾಮೂರ್ತಿ
ಸಾಧು ಶ್ರೀನಾಥ್​
|

Updated on:Mar 13, 2020 | 9:11 AM

Share

ಬೆಂಗಳೂರು: ಸಾಮಾಜಿಕ ಕಾರ್ಯಗಳಲ್ಲಿ ಸದಾ ತೊಡಗಿಸಿಕೊಂಡಿರುವ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ನೆರವು ನೀಡಲು ಮುಂದಾಗಿದ್ದಾರೆ. ಈ ಸಂಬಂಧ ಸಚಿವ ಸುರೇಶ್‌ ಕುಮಾರ್ ಫೇಸ್‌ಬುಕ್ ಪೋಸ್ಟ್​ ಮಾಡಿದ್ದಾರೆ.

ನಿನ್ನೆ ಬೆಳಗ್ಗೆ ನನಗೆ ಇನ್ಫೋಸಿಸ್ ಫೌಂಡೇಷನ್​ನಿಂದ ಕರೆ ಬಂದಿತ್ತು.‌ ಸುಧಾಮೂರ್ತಿ ಅವರು ಮಾತನಾಡಿ ದೇಶ-ವಿದೇಶಗಳಲ್ಲಿ ಆತಂಕ ತಂದಿರುವ ಕೊರೊನಾ ವೈರಸ್ ವ್ಯಾಪಕವಾಗಿ ಹರಡದಂತೆ ನಮ್ಮ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.

ಒಂದು ಆಸ್ಪತ್ರೆಯನ್ನು ತಮಗೆ ವಹಿಸಿದರೆ ಅದನ್ನು ಚಿಕಿತ್ಸೆಗಾಗಿ ತಮ್ಮ ಸಂಸ್ಥೆಯ ವೆಚ್ಚದಲ್ಲಿ ಪೂರ್ಣಪ್ರಮಾಣದಲ್ಲಿ ಸಜ್ಜುಗೊಳಿಸುವುದಾಗಿ, ಅಗತ್ಯ ಉಪಕರಣಗಳನ್ನೂ ಒದಗಿಸುವುದಾಗಿ ಹೇಳಿದರು. ಅಷ್ಟೇ ಅಲ್ಲ, ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೂ ತಮ್ಮ ಈ ಪಾತ್ರದ ಕುರಿತು ಚರ್ಚಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದಾರೆ. ಸದ್ಯದಲ್ಲಿಯೇ ಈ ಕುರಿತು ಉನ್ನತಮಟ್ಟದ ಸಭೆ ನಡೆಯಲಿದೆ.‌

ಮಕ್ಕಳ ಹಿತವನ್ನು‌ ಗಮನದಲ್ಲಿಟ್ಟುಕೊಂಡು ಶಾಲೆಗಳಿಗೆ ರಜೆ ಘೋಷಿಸಿರುವ ಕ್ರಮ ವಿವರಿಸಿದೆ. ಇಷ್ಟು ಬೇಗ ಕ್ರಮ ತೆಗೆದುಕೊಂಡಿರುವ ಬಗ್ಗೆ ಸುಧಾಮೂರ್ತಿ ಅವರು ಸಂತಸ ವ್ಯಕ್ತಪಡಿಸಿದರು‌‌. ಈ ಹೃದಯವಂತಿಕೆ ನನ್ನ ಹೃದಯ ತುಂಬಿತು.‌ ನಿಜವಾದ ಮಾತೃಕಾಳಜಿ ಈ ಮಹಾತಾಯಿಯದು ಎಂದು ಸುರೇಶ್‌ ಕುಮಾರ್ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

Published On - 9:10 am, Fri, 13 March 20

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ