AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಳೆಯಿಂದ ಇಡೀ ವಾರ ಇಡೀ ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ಕಟ್ಟಾಜ್ಞೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಮ್ಮಾರಿ ಕೊರೊನಾ ಭೀತಿ ಹೆಚ್ಚಾಗಿದ್ದು, 5ಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ತಗುಲಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಸಿಎಂ ಯಡಿಯೂರಪ್ಪ ರೆಡ್ ಅಲರ್ಟ್ ಮೋಡ್​ಗೆ ಬಂದಿದ್ದಾರೆ. ನಾಳೆಯಿಂದ 1 ವಾರ ಮಾಲ್‌ಗಳು, ಚಿತ್ರಮಂದಿರಗಳು, ಪಬ್‌ & ನೈಟ್‌ ಕ್ಲಬ್ಸ್‌, ಮೇಳ, ಸೆಮಿನಾರ್‌ಗಳು, ಕ್ರೀಡಾ ಕಾರ್ಯಕ್ರಮಗಳು, ಮದುವೆ ಸಮಾರಂಭಗಳು, ನಿಶ್ಚಿತಾರ್ಥದ ಸಮಾರಂಭಗಳು ಬಂದ್‌ ಮಾಡಿಬಿಡಿ ಎಂದು ಆದೇಶ ನೀಡಿದ್ದಾರೆ. ದೈನಂದಿನ ಅವಶ್ಯಕಗಳಾಗಿರುವ ಸಾರಿಗೆ, ಹೋಟೆಲ್ಸ್, ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. […]

ನಾಳೆಯಿಂದ ಇಡೀ ವಾರ ಇಡೀ ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ಕಟ್ಟಾಜ್ಞೆ
ಸಾಧು ಶ್ರೀನಾಥ್​
|

Updated on:Mar 13, 2020 | 5:57 PM

Share

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಮ್ಮಾರಿ ಕೊರೊನಾ ಭೀತಿ ಹೆಚ್ಚಾಗಿದ್ದು, 5ಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು ತಗುಲಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಸಿಎಂ ಯಡಿಯೂರಪ್ಪ ರೆಡ್ ಅಲರ್ಟ್ ಮೋಡ್​ಗೆ ಬಂದಿದ್ದಾರೆ.

ನಾಳೆಯಿಂದ 1 ವಾರ ಮಾಲ್‌ಗಳು, ಚಿತ್ರಮಂದಿರಗಳು, ಪಬ್‌ & ನೈಟ್‌ ಕ್ಲಬ್ಸ್‌, ಮೇಳ, ಸೆಮಿನಾರ್‌ಗಳು, ಕ್ರೀಡಾ ಕಾರ್ಯಕ್ರಮಗಳು, ಮದುವೆ ಸಮಾರಂಭಗಳು, ನಿಶ್ಚಿತಾರ್ಥದ ಸಮಾರಂಭಗಳು ಬಂದ್‌ ಮಾಡಿಬಿಡಿ ಎಂದು ಆದೇಶ ನೀಡಿದ್ದಾರೆ. ದೈನಂದಿನ ಅವಶ್ಯಕಗಳಾಗಿರುವ ಸಾರಿಗೆ, ಹೋಟೆಲ್ಸ್, ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಆದರೆ ನಿಗದಿಯಾಗಿರುವ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ. ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಮಾಡಿದ್ದೇವೆ. ಒಂದು ವಾರದ ನಂತರ ಪರಿಸ್ಥಿತಿ ನೋಡಿಕೊಂಡು ಮುಂದೆ ಏನು ಮಾಡಬೇಕು ಎಂದು ತೀರ್ಮಾನ ಮಾಡ್ತೇವೆ ಎಂದಿದ್ದಾರೆ.

Published On - 4:19 pm, Fri, 13 March 20