ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 31,531 ಜನರಿಗೆ ಕೊವಿಡ್ ಸೋಂಕು ಪತ್ತೆಯಾಗಿದೆ. 403 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 8,344 ಜನರಿಗೆ ಸೋಂಕು ಪತ್ತೆಯಾಗಿದ್ದು ಗಮನಾರ್ಹ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೆ ಬೆಂಗಳೂರು ಒಂದರಲ್ಲೇ 143 ಜನರು ಕೊವಿಡ್ನಿಂದ ನಿಧನರಾಗಿದ್ದಾರೆ. ಇಂದು ಮೃತಪಟ್ಟವರನ್ನೂ ಸೇರಿಸಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 22,03,462ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಪೈಕಿ 15,81,457 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೊವಿಡ್ನಿಂದ ಮೃತಪಟ್ಟವರ ಸಂಖ್ಯೆ 21,837 ಕ್ಕೆ ಏರಿಕೆಯಾಗಿದೆ.
ಅತ್ಯಂತ ಪ್ರಮುಖವಾಗಿ ಉಲ್ಲೇಖಿಸಲೇಬೇಕಾದ ಸಂಗತಿಯೆಂದರೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 36,475 ಜನರು ಕೊವಿಡ್ ಮುಕ್ತರಾಗಿ ಆಸ್ಪತ್ರೆಗಳಿಂದ ಮನೆಗೆ ಹಿಂತಿರುಗಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು?
ಬಾಗಲಕೋಟೆ 431, ಬಳ್ಳಾರಿ 1,729, ಬೆಳಗಾವಿ 1,762, ಬೆಂಗಳೂರು ಗ್ರಾಮಾಂತರ 1,082, ಬೆಂಗಳೂರು ನಗರ 8,344, ಬೀದರ್ 129, ಚಾಮರಾಜನಗರ 440, ಚಿಕ್ಕಬಳ್ಳಾಪುರ 55, ಚಿಕ್ಕಮಗಳೂರು 963, ಚಿತ್ರದುರ್ಗ 640, ದಕ್ಷಿಣ ಕನ್ನಡ 957, ದಾವಣಗೆರೆ 1155, ಧಾರವಾಡ 937, ಗದಗ 453, ಹಾಸನ 1,182, ಹಾವೇರಿ 184, ಕಲಬುರಗಿ 645, ಕೊಡಗು 191, ಕೋಲಾರ 569, ಕೊಪ್ಪಳ 617, ಮಂಡ್ಯ 709, ಮೈಸೂರು 1,811, ರಾಯಚೂರು 464, ರಾಮನಗರ 403, ಶಿವಮೊಗ್ಗ 643, ತುಮಕೂರು 2,138, ಉಡುಪಿ 745, ಉತ್ತರ ಕನ್ನಡ 1,087, ವಿಜಯಪುರ 330, ಯಾದಗಿರಿ ಜಿಲ್ಲೆಯಲ್ಲಿ 233 ಕೊರೊನಾ ಪ್ರಕರಣ ಪತ್ತೆಯಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಜನರು ನಿಧನ?
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 403 ಜನರ ಸಾವನ್ನಪ್ಪಿದ್ದಾರೆ. ಹಾಗಾದರೆ ಯಾವ ಜಿಲ್ಲೆಯಲ್ಲಿ ಎಷ್ಟು ಜನರು ನಿಧನರಾಗಿದ್ದಾರೆ ಎಂಬ ವಿವರ ಇಲ್ಲಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 143 ಜನರು, ಬಳ್ಳಾರಿ ಜಿಲ್ಲೆ 26, ಉತ್ತರ ಕನ್ನಡ ಜಿಲ್ಲೆಯಲ್ಲಿ 24, ಹಾಸನ ಜಿಲ್ಲೆ 18, ಬೆಂಗಳೂರು ಗ್ರಾಮಾಂತರ ಜಿಲ್ಲೆ 17, ಮಂಡ್ಯ ಜಿಲ್ಲೆ 15, ಶಿವಮೊಗ್ಗ ಜಿಲ್ಲೆ 14, ಹಾವೇರಿ, ತುಮಕೂರು,ಕೊಪ್ಪಳ ಜಿಲ್ಲೆ 11, ಕಲಬುರಗಿ ಜಿಲ್ಲೆ 10, ವಿಜಯಪುರ, ಧಾರವಾಡ ಜಿಲ್ಲೆ 9, ಚಾಮರಾಜನಗರ, ಕೊಡಗು, ಮೈಸೂರು ಜಿಲ್ಲೆ 8, ದಕ್ಷಿಣ ಕನ್ನಡ ಜಿಲ್ಲೆ 7, ಚಿಕ್ಕಬಳ್ಳಾಪುರ, ಬೀದರ್, ಕೋಲಾರ ಜಿಲ್ಲೆ 6, ರಾಮನಗರ, ಉಡುಪಿ ಜಿಲ್ಲೆ ಐವರು, ಬೆಳಗಾವಿ, ಚಿತ್ರದುರ್ಗ, ಗದಗ, ರಾಯಚೂರು, ಯಾದಗಿರಿ ಜಿಲ್ಲೆ ನಾಲ್ವರು, ಚಿಕ್ಕಮಗಳೂರು ಜಿಲ್ಲೆ ಮೂವರು, ಬಾಗಲಕೋಟೆ ಜಿಲ್ಲೆ ಇಬ್ಬರು, ದಾವಣಗೆರೆ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಭುವನ್ ಪೊನ್ನಣ್ಣ ನಿಜವಾದ ಬಿಗ್ ಬಾಸ್; ಕೊವಿಡ್ ಸಂಕಷ್ಟದಲ್ಲಿ ಮಾಡಿದ ಸಹಾಯ ನೆನೆದು ಭಾವುಕರಾದ ಹಿರಿಯ ನಟ
ಗ್ರಾಮೀಣ ಪ್ರದೇಶಗಳಿಗೆ ಪ್ರತ್ಯೇಕ ಕೊವಿಡ್ ಗೈಡ್ಲೈನ್ಸ್; ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ
( Covid 19 Karnataka Update 8344 new cases in Bangalore and 23197 new covid cases in all other districts of Karnataka today)
Published On - 7:58 pm, Sun, 16 May 21