ರಾಜಧಾನಿ ಸಹವಾಸ ಬೇಡವೇ ಬೇಡ ಎಂದ ಜನರು, ಬೆಂಗಳೂರಿಗೆ ಬರಲು ಹಿಂದೇಟು

| Updated By:

Updated on: Jul 11, 2020 | 1:57 PM

ಬೆಂಗಳೂರು: ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗ್ತಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ಸಹವಾಸ ಬೇಡವೇ ಬೇಡ ಅಂತಾ ಬೇರೆ ಜಿಲ್ಲೆಯ ಜನರು ಇತ್ತ ಮುಖಮಾಡುತ್ತಿಲ್ಲವಂತೆ. ನಗರಕ್ಕೆ ಜನ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಬೆಂಗಳೂರಿನತ್ತ ಬರುವವರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಬೆಂಗಳೂರಿಗೆ ಬೇರೆ ಬೇರೆ ಜಿಲ್ಲೆಗಳಿಂದ ಬರುತ್ತಿರುವ ಸರ್ಕಾರಿ ಬಸ್​ಗಳ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ಉದಾಹರಣೆಗೆ, ನಿತ್ಯ ದಾವಣಗೆರೆಯಿಂದ ಬೆಂಗಳೂರಿಗೆ ಸುಮಾರು 25 KSRTC ಬಸ್​ಗಳು ಸಂಚರಿಸುತ್ತಿದ್ದವು. ಆದರೆ, ಇದೀಗ ಕೇವಲ 10 […]

ರಾಜಧಾನಿ ಸಹವಾಸ ಬೇಡವೇ ಬೇಡ ಎಂದ ಜನರು, ಬೆಂಗಳೂರಿಗೆ ಬರಲು ಹಿಂದೇಟು
Follow us on

ಬೆಂಗಳೂರು: ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ವಿಪರೀತವಾಗಿ ಹೆಚ್ಚಳವಾಗ್ತಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ಸಹವಾಸ ಬೇಡವೇ ಬೇಡ ಅಂತಾ ಬೇರೆ ಜಿಲ್ಲೆಯ ಜನರು ಇತ್ತ ಮುಖಮಾಡುತ್ತಿಲ್ಲವಂತೆ. ನಗರಕ್ಕೆ ಜನ ಬರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಬೆಂಗಳೂರಿನತ್ತ ಬರುವವರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ.

ಇದಕ್ಕೆ ಸಾಕ್ಷಿಯೆಂಬಂತೆ ಬೆಂಗಳೂರಿಗೆ ಬೇರೆ ಬೇರೆ ಜಿಲ್ಲೆಗಳಿಂದ ಬರುತ್ತಿರುವ ಸರ್ಕಾರಿ ಬಸ್​ಗಳ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ಉದಾಹರಣೆಗೆ, ನಿತ್ಯ ದಾವಣಗೆರೆಯಿಂದ ಬೆಂಗಳೂರಿಗೆ ಸುಮಾರು 25 KSRTC ಬಸ್​ಗಳು ಸಂಚರಿಸುತ್ತಿದ್ದವು. ಆದರೆ, ಇದೀಗ ಕೇವಲ 10 KSRTC ಬಸ್​ಗಳ ಮಾತ್ರ ಸಂಚಾರ ನಡೆಸುತ್ತಿವೆ. ಹೀಗಾಗಿ, ನಿತ್ಯ 4 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದ ಸಂಸ್ಥೆಯು ಇದೀಗ ಕೇವಲ 2 ಲಕ್ಷ ರೂಪಾಯಿ ಆದಾಯ ಪಡೆಯುತ್ತಿದೆ.

ಇನ್ನು, ಹುಬ್ಬಳ್ಳಿಯಿಂದಲೂ ಬೆಂಗಳೂರಿಗೆ ತೆರಳುವರರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ಅನ್​ಲಾಕ್ ಬಳಿಕ ಪ್ರತಿ ದಿನ ಹುಬ್ಬಳ್ಳಿಯಿಂದ ಬೆಂಗಳೂರಿಗೆ 10-15 ಬಸ್​ಗಳು ತೆರಳುತ್ತಿದ್ದವು. ಆದ್ರೆ ಕಳೆದೊಂದ ವಾರದಿಂದ ಪ್ರಾಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದ್ದು ಸದ್ಯಕ್ಕೆ 3 ರಿಂದ 4 ಬಸ್​ಗಳು ಮಾತ್ರ ಸಂಚರಿಸುತ್ತಿವೆ. ಇದರಿಂದ ಪ್ರತಿದಿನ 2 ರಿಂದ 3 ಲಕ್ಷ ಆದಾಯ ಬರುತ್ತಿದ್ದ ವಾಯುವ್ಯ ಸಾರಿಗೆ ಸಂಸ್ಥೆಗೆ ಇದೀಗ 50 ರಿಂದ 70 ಸಾವಿರ ಆದಾಯ ಮಾತ್ರ ಬರುತ್ತಿದೆ ಎಂದು ತಿಳದುಬಂದಿದೆ. ಜೊತೆಗೆ, ಇಂಥ ಪರಿಸ್ಥಿತಿ ಇತರೆ ಜಿಲ್ಲೆಗಳಲ್ಲೂ ವರದಿಯಾಗಿದೆ.

ಈ ಮಧ್ಯೆ, ಬೆಳಗಾವಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಹೋಗುವವರ ಸಂಖ್ಯೆ ಸಹ ಕಡಿಮೆಯಾಗಿದೆ. ಈ ಹಿಂದೆ ಬೆಂಗಳೂರು ಮತ್ತು ಬೆಳಗಾವಿಯ ಮಧ್ಯೆ ನಿತ್ಯವೂ ಮೂರು ವಿಮಾನಗಳು ಹಾರಾಟ ನಡೆಸುತ್ತಿದ್ದವು. ಆದರೆ, ಇದೀಗ ಎರಡು ದಿನಕ್ಕೊಮ್ಮೆ ಮೂರು ಬದಲಿಗೆ ಎರಡು ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿವೆ. ಕೆಲವೊಮ್ಮೆ ಪ್ರಯಾಣಿಕರ ಕೊರತೆಯಿಂದ ಫ್ಲೈಟ್​ ಕ್ಯಾನ್ಸಲ್ ಕೂಡ ಆಗುತ್ತಿವೆ ಎಂದು ತಿಳಿದುಬಂದಿದೆ.

Published On - 10:26 am, Sat, 11 July 20