ಕೊರೊನಾ ನಡುವೆ ರಾಮುಲು ಆಪ್ತ ಸಹಾಯಕನ ಭರ್ಜರಿ ಬರ್ತ್​ ಡೇ ಪಾರ್ಟಿ

ಗದಗ: ಕೊರೊನಾ ಭೀತಿ ನಡುವೆಯೂ ಆರೋಗ್ಯ ಸಚಿವ ಶ್ರೀರಾಮುಲು ಆಪ್ತ ಸಹಾಯಕ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆರೋಗ್ಯ ಸಚಿವರ ಆಪ್ತ ಸಹಾಯಕ SH ಶಿವನಗೌಡ ತನ್ನ ಬರ್ತ್​ಡೇ ನಿಮಿತ್ತ ನಗರದ ಶ್ರೀನಿವಾಸ ಭವನದಲ್ಲಿ ಗುಂಡು-ತುಂಡು ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಸಾಮಾಜಿಕ ಅಂತರ ಮರೆತು ಹಾಗೂ ಮಾಸ್ಕ್ ಧರಿಸದೆ ಸುಮಾರು ಇನ್ನೂರಕ್ಕೂ ಹೆಚ್ಚು ಜನರು ಭಾಗಿಯಾಗಿದ್ರು. ಪಾರ್ಟಿಯಲ್ಲಿ ಭಾಗವಹಿಸಿದ್ದ ಜನ ಎಣ್ಣೆಯ ಮತ್ತಿನಲ್ಲಿ ಕುಣಿದು ಕುಪ್ಪಳಿಸಿದರು. ಈ ಪಾರ್ಟಿ ತಡ ರಾತ್ರಿವರೆಗೂ ನಡೆದಿದ್ದು, ನಿಷೇಧಾಜ್ಞೆ ನಡುವೆ […]

ಕೊರೊನಾ ನಡುವೆ  ರಾಮುಲು ಆಪ್ತ ಸಹಾಯಕನ ಭರ್ಜರಿ ಬರ್ತ್​ ಡೇ ಪಾರ್ಟಿ
KUSHAL V

| Edited By:

Jul 11, 2020 | 2:16 PM

ಗದಗ: ಕೊರೊನಾ ಭೀತಿ ನಡುವೆಯೂ ಆರೋಗ್ಯ ಸಚಿವ ಶ್ರೀರಾಮುಲು ಆಪ್ತ ಸಹಾಯಕ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆರೋಗ್ಯ ಸಚಿವರ ಆಪ್ತ ಸಹಾಯಕ SH ಶಿವನಗೌಡ ತನ್ನ ಬರ್ತ್​ಡೇ ನಿಮಿತ್ತ ನಗರದ ಶ್ರೀನಿವಾಸ ಭವನದಲ್ಲಿ ಗುಂಡು-ತುಂಡು ಪಾರ್ಟಿ ಆಯೋಜನೆ ಮಾಡಿದ್ದರು.

ಈ ಪಾರ್ಟಿಯಲ್ಲಿ ಸಾಮಾಜಿಕ ಅಂತರ ಮರೆತು ಹಾಗೂ ಮಾಸ್ಕ್ ಧರಿಸದೆ ಸುಮಾರು ಇನ್ನೂರಕ್ಕೂ ಹೆಚ್ಚು ಜನರು ಭಾಗಿಯಾಗಿದ್ರು. ಪಾರ್ಟಿಯಲ್ಲಿ ಭಾಗವಹಿಸಿದ್ದ ಜನ ಎಣ್ಣೆಯ ಮತ್ತಿನಲ್ಲಿ ಕುಣಿದು ಕುಪ್ಪಳಿಸಿದರು.

ಈ ಪಾರ್ಟಿ ತಡ ರಾತ್ರಿವರೆಗೂ ನಡೆದಿದ್ದು, ನಿಷೇಧಾಜ್ಞೆ ನಡುವೆ ಸಚಿವ ಶ್ರೀರಾಮುಲು ಆಪ್ತನ ಬೇಜವಾಬ್ದಾರಿ ನಡವಳಿಕೆ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಜೊತೆಗೆ ಮದುವೆ, ಸಭೆ ಸಮಾರಂಭಗಳಿಗೆ ಅನುಮತಿ ದೊರೆಯದ ಈ ಸಮಯದಲ್ಲಿ ಇವರಿಗೆ ಅನುಮತಿ ದೊರೆತಿದ್ದು ಹೇಗೆ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada