ರಾಜ್ಯದ 5 ಜಿಲ್ಲೆಗಳಲ್ಲಿಂದು ಕೊವಿಡ್ ವ್ಯಾಕ್ಸಿನ್ ಡ್ರೈ ರನ್ ನಡೆಯಲ್ಲಿದ್ದು, ಮೊದಲಿಗೆ ಬೆಂಗಳೂರು, ಕಲ್ಬುರ್ಗಿ, ಮೈಸೂರು, ಬೆಳಗಾವಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಡ್ರೈ ರನ್ ನಡೆಸಲು ತೀರ್ಮಾನಿಸಲಾಗಿದೆ. ಪ್ರತಿ ಜಿಲ್ಲೆಯ 3 ಕೇಂದ್ರಗಳಲ್ಲಿ ಲಸಿಕೆ ಡ್ರೈ ರನ್ ನಡೆಸಲಾಗುತ್ತದೆ. ಪ್ರತಿ ಆರೋಗ್ಯ ಕೇಂದ್ರದಲ್ಲಿ 5 ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು, ನಿಯೋಜಿತ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
ಹೇಗಿರಲಿದೆ ಲಸಿಕೆ ನೀಡುವ ಪ್ರಕ್ರಿಯೆ?
ಆರೋಗ್ಯ ಕೇಂದ್ರದಲ್ಲಿರುವ ಕೊರೊನಾ ವಾರಿಯರ್ಸ್‌ಗಳನ್ನು ಫಲಾನುಭವಿಗಳಾಗಿ ಆಯ್ಕೆ ಮಾಡಲಾಗಿದೆ. ಇಂದು ಮುಂಜಾನೆ ಹತ್ತು ಗಂಟೆಯಿಂದ ಹನ್ನೆರಡು ಗಂಟೆವರಗೆ ಮೂರು ಕೇಂದ್ರಗಳಲ್ಲಿ ಏಕಕಾಲಕ್ಕೆ ಡ್ರೈ ರನ್ ನಡೆಯಲಿದೆ. ಆಯ್ಕೆಯಾದ ಫಲಾನುಭವಿಗಳು ತಮ್ಮ ಹೆಸರು ನೋಂದಣಿ ಮಾಡುವಾಗ ಯಾವ ದಾಖಲಾತಿ ನೀಡಿದ್ದಾರೋ ಆ ದಾಖಲಾತಿಯನ್ನ ವ್ಯಾಕ್ಸಿನ್ ಪಡೆಯಲು ಬರುವಾಗ ತರಲು ಸೂಚಿಸಲಾಗಿದೆ. ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಓಟರ್ ಐಡಿ ತರಲು ಹೇಳಿದ್ದಾರೆ.
ಪ್ರತಿ ಕೇಂದ್ರದಲ್ಲಿ ಐದು ಜನ ಸಿಬ್ಬಂದಿ ನಿಯೋಜಿಸಲಾಗುತ್ತದೆ. ನಿಯೋಜಿತ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಆಯ್ಕೆಯಾದ ಫಲಾನುಭವಿ ನಿಗದಿ ಪಡಿಸಿದ ಕೇಂದ್ರಕ್ಕೆ ಬರ್ತಾನೆ. ಬಳಿಕ ಕೇಂದ್ರಕ್ಕೆ ಬಂದ ಫಲಾನುಭವಿಯ ದಾಖಲಾತಿ ಪರಿಶೀಲನೆ ನಡೆಯುತ್ತದೆ. ನಿಜವಾದ ಫಲಾನುಭವಿ ಹೌದೋ ಅಲ್ಲವೋ ಅನ್ನೋದನ್ನು ಕನ್ಪರ್ಮ್ ಮಾಡಿಕೊಳ್ಳಲಾಗುತ್ತದೆ. ಕನ್ಪರ್ಮ್ ಆದ ಮೇಲೆ ವೈಟಿಂಗ್ ರೂಮ್ನಲ್ಲಿ ಕೂರಿಸಲಾಗುತ್ತದೆ. ವೈಟಿಂಗ್ ರೂಮ್ನಲ್ಲಿ ಓರ್ವ ಸಿಬ್ಬಂದಿ ಫಲಾನುಭವಿಗೆ ವ್ಯಾಕ್ಸಿನ್ ಬಗ್ಗೆ ಮಾಹಿತಿ ನೀಡುತ್ತಾನೆ.
ವೈಟಿಂಗ್ ರೂಮ್ನಲ್ಲಿರುವ ಓರ್ವ ಫಲಾನುಭವಿಯನ್ನು ವ್ಯಾಕ್ಸಿನ್ ರೂಮ್ಗೆ ಕರೆದುಕೊಂಡು ಹೋಗಲಾಗುತ್ತದೆ. ವ್ಯಾಕ್ಸಿನ್ ರೂಮ್ನಲ್ಲಿರುವ ಸಿಬ್ಬಂದಿ ಫಲಾನುಭವಿಗೆ ವ್ಯಾಕ್ಸಿನ್ ನೀಡ್ತಾನೆ. ವ್ಯಾಕ್ಸಿನ್ ಪಡೆದ ಫಲಾನುಭವಿಯನ್ನು ನಿಗಾ ಕೋಣೆಗೆ ಕರೆದುಕೊಂಡು ಹೋಗಲಾಗುತ್ತದೆ. ವ್ಯಾಕ್ಸಿನ್ ಪಡೆದ ಫಲಾನುಭವಿ ನಿಗಾ ಕೋಣೆಯಲ್ಲಿ ಮೂವತ್ತು ನಿಮಿಷ ಇರಬೇಕಾಗುತ್ತದೆ. ಮೂವತ್ತು ನಿಮಿಷದಲ್ಲಿ ಯಾವುದೇ ಸಮಸ್ಯೆ ಕಂಡು ಬರದೇ ಇದ್ರೆ ಆತನನ್ನು ಮನೆಗೆ ಕಳುಹಿಸಲಾಗುತ್ತದೆ.
Published On - 8:03 am, Sat, 2 January 21