ಬೆಳಗಾವಿ: ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಅನಾಹುತವೊಂದು ತಪ್ಪಿದೆ. ಗೋವಿಗೆ ಕಾಳು ತಿನ್ನಿಸುವಾಗ ಏಕಾಏಕಿ ಬೆದರಿ ನುಗ್ಗಿದ ಆಕಳು ಸಚಿವರ ಮೈಮೇಲೆ ಬಂದಿದೆ. ಸಚಿವ ಬಿ.ಸಿ ಪಾಟೀಲ್ ಮತ್ತು ಅವರ ಪಕ್ಕದಲ್ಲಿದ್ದ ಸಚಿವೆ ಶಶಿಕಲಾ ಜೊಲ್ಲೆ ತಕ್ಷಣ ಎಚ್ಚೆತ್ತುಕೊಂಡು ಹಿಂದೆ ಸರಿದಿದ್ದಾರೆ. ಗೋವು ಹಿಡಿಯೋಕೆ ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಪ್ರವೀಣ್ ಶಾ ಮನೆಯಲ್ಲಿದ್ದ ಗೋವಿಗೆ ದವಸ ತಿನ್ನಿಸಲು ಸಚಿವದ್ವಯರು ಮುಂದಾದಾಗ ಈ ಪ್ರಸಂಗ ನಡೆದಿದೆ. ಈ ವೇಳೆ ಆಕಳು ನಾಲ್ಕು ಜನರಿಗೆ ತಿವಿದಿದ್ದು, ಕುರ್ಚಿಗಳು ಒಡೆದು ಹೋಗಿವೆ.
ದವಸ ಹಿಡಿದು ಗೋವಿನ ಮುಂದೆ ಸಚಿವ ಬಿ.ಸಿ ಪಾಟೀಲ್ ಮುಂದೆ ಹೋಗುತ್ತಿದ್ದಂತೆ ಗೋವು ಬೆದರಿದೆ. ಅಲ್ಲಿದ್ದ ನಾಲ್ಕಾರು ಮಂದಿ ಹರಸಾಹಸ ಪಟ್ಟು ಗೋವನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಸಚಿವದ್ವಯರು ಗೋವಿನ ಬೆದರುವಿಕೆಯಿಂದ ದಂಗಾಗಿ ಕೆಲಕಾಲ ವಿಚಲಿತರಾದರು. ಸಚಿವ ಬಿ.ಸಿ ಪಾಟೀಲ್ ಇಂದು ರೈತರೊಂದಿಗೆ ಒಂದು ದಿನ ವಿಶೇಷ ಕಾರ್ಯಕ್ರಮದ ಹಿನ್ನೆಲೆ ಅಕ್ಕೋಳ ಗ್ರಾಮ ಆಗಮಿಸಿದ್ದರು.
ಇದನ್ನೂ ಓದಿ:
ಕೃಷಿ ಸಚಿವ ಬಿ.ಸಿ. ಪಾಟೀಲ್ ಕಾರು ರಸ್ತೆ ಮಧ್ಯೆ… ಕೆಸರಿನಲ್ಲಿ ಸಿಲುಕಿದ ಪ್ರಸಂಗ ಉಡುಪಿ ಬಳಿ ನಡೆದಿದೆ!
ಇದನ್ನೂ ಓದಿ:
Minister BC Patil : ಗದ್ದೆಗೆ ಇಳಿದು ಭತ್ತದ ಪೈರು ನಾಟಿ ಮಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ್
(cow attack on agriculture minister bc patil in nipani taluk belagavi)
Published On - 11:57 am, Tue, 28 September 21