Crime News: ಹಸುವನ್ನು ಹಿಡಿಯಲು ಹೋಗಿ ಕಣ್ವ ನದಿಗೆ ಬಿದ್ದು ದಂಪತಿ ಸಾವು

ಹಸುವನ್ನು ಹಿಡಿಯಲು ಹೋಗಿ ಆಕಸ್ಮಿಕವಾಗಿ ಕಣ್ವ ನದಿಗೆ ಬಿದ್ದು ದಂಪತಿ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ.

Crime News: ಹಸುವನ್ನು ಹಿಡಿಯಲು ಹೋಗಿ ಕಣ್ವ ನದಿಗೆ ಬಿದ್ದು ದಂಪತಿ ಸಾವು
ಸಾಂಧರ್ಬಿಕ ಚಿತ್ರ
TV9kannada Web Team

| Edited By: Rakesh Nayak Manchi

Sep 29, 2022 | 10:48 PM

ರಾಮನಗರ: ಹಸುವನ್ನು ಹಿಡಿಯಲು ಹೋಗಿ ಆಕಸ್ಮಿಕವಾಗಿ ಕಣ್ವ ನದಿಗೆ ಬಿದ್ದು ದಂಪತಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ವೆಂಕಟೇಶ್‌(55), ಕಾಳಮ್ಮ(50) ಮೃತ ದುರ್ದೈವಿಗಳು. ಹಸುವಿನ ಹಗ್ಗ ಹಿಡಿಯಲು ಹೋಗಿ ಕಾಳಮ್ಮ ನದಿಗೆ ಬಿದ್ದಿದ್ದು, ಇವರನ್ನು ಬದುಕಿಸುವ ನಿಟ್ಟಿನಲ್ಲಿ ಪತಿ ವೆಂಕಟೇಶ್ ಕೂಡ ನೀರಿಗೆ ಹಾರಿದ್ದಾರೆ. ಆದರೆ ಇಬ್ಬರಿಗೂ ನೀರಿನಿಂದ ಮೇಲೆ ಬರಲಾಗದೆ ನಿರುಪಾಲಾಗಿದ್ದಾರೆ. ಚನ್ನಪಟ್ಟಣ ಗ್ರಾಮಾಂತರ ‌ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಕೂಡ್ಲೂರು ಗ್ರಾಮದಲ್ಲಿ ಹಾದು ಹೋಗವು ಕಣ್ವ ನದಿಯಲ್ಲಿಯೇ ರಸ್ತೆ ನಿರ್ಮಾಣ ಮಾಡಲಾಗಿತ್ತು. ಅದರಂತೆ ದಂಪತಿ ತಮ್ಮ ಹಸುವನ್ನು ಮಿಣಿಕೆರೆದೊಡ್ಡಿ ಗ್ರಾಮದಿಂದ ಕೂಡ್ಲೂರು ಗ್ರಾಮಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಹಸು ಮುಂದಕ್ಕೆ ಓಡಿದೆ. ಈ ವೇಳೆ ಕಾಳಮ್ಮ ಹಸುವಿನ ಹಗ್ಗ ಹಿಡಿಯಲು ಹೋದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ವೆಂಕಟೇಶ್ ತನ್ನ ಪತ್ನಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಇಬ್ಬರಿಗೂ ನೀರಿನಿಂದ ಮೇಲೆ ಬರಲಾಗದೆ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಸ್ನಾನಕ್ಕೆ ಹೋಗಿದ್ದಾಗ ನೀರಿನಲ್ಲಿ ಮುಳುಗಿ ಯುವಕ ಸಾವು

ಕಾರವಾರ: ಸ್ನಾನ ಮಾಡಲು ಹಳ್ಳಕ್ಕೆ ಇಳಿದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಸಂತೆಗುಳಿ ಗ್ರಾಮದ ಬಳಿ ನಡೆದಿದೆ. ಹಳೇ ಹುಬ್ಬಳ್ಳಿಯ ಟಿಪ್ಪುನಗರದ ನಿವಾಸಿ ಶಾಬಾಜ್‌ ಮೊಹಮ್ಮದ್ ಹನೀಫ್‌ ತೋಟಗೇರ್‌(19) ಸಾವನ್ನಪ್ಪಿದ ದುರ್ದೈವಿ. ತಂದೆ ಹಾಗೂ ಸ್ನೇಹಿತರ ಜೊತೆ ಸಂತೆಗುಳಿಯಲ್ಲಿ ಪೇಂಟಿಂಗ್ ಕೆಲಸಕ್ಕೆಂದು ಗ್ರಾಮಕ್ಕೆ ಬಂದಿದ್ದ ಹನೀಫ್, ಸ್ನಾನ ಮಾಡಲು ಹಳ್ಳಕ್ಕಿಳಿದಾಗ ಈ ದುರ್ಘಟನೆ ನಡೆದಿದೆ. ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದದಾಖಲಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada