ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ, ಸದ್ಯಕ್ಕೆ ಶಾಂತಿಯ ವಾತಾವರಣ
ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿನ್ನೆ ನಡೆದ ಪ್ರತಿಭಟನೆ ಬೆಂಕಿ ಜ್ವಾಲೆಯಂತೆ ಹಬ್ಬಿತ್ತು. ಪರಿಸ್ಥಿತಿ ನಿಯಂತ್ರಿಸಲು ಖಾಕಿ ಪಡೆ ಫೈರಿಂಗ್ ಮಾಡಿತ್ತು. ಇದಕ್ಕೆ ಇಬ್ಬರು ಮೃತಪಟ್ಟಿದ್ದರು. ಅಲ್ಲದೆ ಮಂಗಳೂರು ಮಾಜಿ ಮೇಯರ್ ಅಶ್ರಫ್ ಸೇರಿ ಐವರಿಗೆ ಗುಂಡು ತಗುಲಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ನಿನ್ನೆ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಯಾಗಿತ್ತು. ನಗರದಲ್ಲಿ ಸದ್ಯಕ್ಕೆ ಶಾಂತಿಯ ವಾತಾವರಣವಿದೆ. ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ನಗರದ ಕೆಲವೆಡೆ […]
ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಿನ್ನೆ ನಡೆದ ಪ್ರತಿಭಟನೆ ಬೆಂಕಿ ಜ್ವಾಲೆಯಂತೆ ಹಬ್ಬಿತ್ತು. ಪರಿಸ್ಥಿತಿ ನಿಯಂತ್ರಿಸಲು ಖಾಕಿ ಪಡೆ ಫೈರಿಂಗ್ ಮಾಡಿತ್ತು. ಇದಕ್ಕೆ ಇಬ್ಬರು ಮೃತಪಟ್ಟಿದ್ದರು. ಅಲ್ಲದೆ ಮಂಗಳೂರು ಮಾಜಿ ಮೇಯರ್ ಅಶ್ರಫ್ ಸೇರಿ ಐವರಿಗೆ ಗುಂಡು ತಗುಲಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
ಉದ್ವಿಗ್ನ ಪರಿಸ್ಥಿತಿ ನಿಯಂತ್ರಿಸಲು ನಿನ್ನೆ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಯಾಗಿತ್ತು. ನಗರದಲ್ಲಿ ಸದ್ಯಕ್ಕೆ ಶಾಂತಿಯ ವಾತಾವರಣವಿದೆ. ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ನಗರದ ಕೆಲವೆಡೆ ಹೋಟೆಲ್‌ಗಳು ಓಪನ್ ಆಗಿವೆ. ಕರ್ಫ್ಯೂ ಜಾರಿ ಹಿನ್ನೆಲೆ ನಗರದಲ್ಲಿ ಬಸ್ ಸೇವೆ ಇಲ್ಲ.
ಜ್ಯೋತಿ ಸರ್ಕಲ್, ಬಂಟ್ ಹಾಸ್ಟೆಲ್, ಕಂಕನಾಡಿ, ಎಂಜಿ ರಸ್ತೆ, ಸ್ಟೇಟ್ ಬ್ಯಾಂಕ್ ರಸ್ತೆಗಳಲ್ಲಿ ವಾಹನಗಳ ಸಂಚಾರ ವಿರಳವಾಗಿದೆ. ಬೇರೆಡೆಯಿಂದ ಬಂದ ಪ್ರಯಾಣಿಕರಿಗೆ ಪೊಲೀಸರು ಸಹಾಯ ಮಾಡುತ್ತಿದ್ದಾರೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಶಾಂತಿ ಕಾಪಾಡುವಂತೆ ಮೈಕ್ ಮೂಲಕ ಪೊಲೀಸರು ಮನವಿ ಮಾಡುತ್ತಿದ್ದಾರೆ.
Published On - 8:47 am, Fri, 20 December 19