ಸದ್ಯಕ್ಕಿಲ್ಲ ಎಸ್ಮಾ.. ಮುಷ್ಕರ ಬಿಟ್ಟು ಮಾತುಕತೆಗೆ ಬನ್ನಿ ಎಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ

| Updated By: ಸಾಧು ಶ್ರೀನಾಥ್​

Updated on: Dec 12, 2020 | 3:53 PM

ಸಾರಿಗೆ ನೌಕರರಿಗೆ ಜನರ ಕಷ್ಟ ಗೊತ್ತಾಗಿದೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ನಿರ್ಲಕ್ಷ್ಯ ತೋರಿಲ್ಲ..ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಗೃಹಸಚಿವರು ತಿಳಿಸಿದ್ದಾರೆ.

ಸದ್ಯಕ್ಕಿಲ್ಲ ಎಸ್ಮಾ.. ಮುಷ್ಕರ ಬಿಟ್ಟು ಮಾತುಕತೆಗೆ ಬನ್ನಿ ಎಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಎಸ್ಮಾ ಜಾರಿ ಮಾಡಿದರೂ ಸರಿಯೇ, ನಮ್ಮ ಬೇಡಿಕೆ ಈಡೇರಿಸದ ವಿನಃ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಸಾರಿಗೆ ನೌಕರರು ಪಟ್ಟು ಹಿಡಿದು ಕುಳಿತಿದ್ದಾರೆ. ಆದರೆ ಸದ್ಯಕ್ಕಂತೂ ಎಸ್ಮಾ ಜಾರಿ ಮಾಡುವುದಿಲ್ಲ, ಆ ಪರಿಸ್ಥಿತಿ ಎದುರಾಗಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಬೊಮ್ಮಾಯಿ, ಸಾರಿಗೆ ನೌಕರರಿಗೆ ಜನರ ಕಷ್ಟ ಗೊತ್ತಾಗಿದೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ನಿರ್ಲಕ್ಷ್ಯ ತೋರಿಲ್ಲ..ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೂ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಪರಿಹಾರ ಆಗುವ ವಿಶ್ವಾಸ ಇದೆ ಎಂದಿದ್ದಾರೆ.

ಪ್ರತಿಭಟನೆಗೆ ಬಹುತೇಕ ನೌಕರರು ಗೈರಾಗಿದ್ದಾರೆ. ಇನ್ನು ಕೆಲವರು ಕೋಡಿಹಳ್ಳಿ ಚಂದ್ರಶೇಖರ್ ಜತೆ ಹೊಂದಾಣಿಕೆ ಮಾಡಿಕೊಂಡಿರಬಹುದು. ಸಾರ್ವಜನಿಕರ ದೃಷ್ಟಿಯಿಂದ ಎಲ್ಲ ರೀತಿಯ ರಕ್ಷಣೆ ಕೊಡುತ್ತಿದ್ದೇವೆ. ನಷ್ಟದ ಸಂದರ್ಭದಲ್ಲಿ ಕೂಡ ಸಾರಿಗೆ ನೌಕರರು ಸರ್ಕಾರದ ಜತೆಗೆ ಇದ್ದಾರೆ. ಆದರೆ ಈ ಕೊವಿಡ್-19 ಸಂದರ್ಭದಲ್ಲಿ ಬೇಡಿಕೆ ಈಡೇರಿಸುವುದು ಕಷ್ಟ. ಮೊದಲು ಮುಷ್ಕರ ಬಿಟ್ಟು ಮಾತುಕತೆಗೆ ಬರಲಿ ಎಂದು ಹೇಳಿದ್ದಾರೆ.

ಸಾರಿಗೆ ನೌಕರರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಕರೆ: ಮುಷ್ಕರ ಬಿಟ್ಟು ಕೆಲಸಕ್ಕೆ ಮರಳಿದ ನಂತರ ಮಾತುಕತೆ

 

ಇಮ್ಮಿಡಿಯಟ್ ಸಭೆ ಕರೆದು.. ಸಮಸ್ಯೆ ಇತ್ಯರ್ಥ ಮಾಡ್ರಿ.. ಸಚಿವ ಸವದಿಗೆ ಸಿದ್ದರಾಮಯ್ಯ ಮೊಬೈಲ್​ ಕರೆ