ಕೃಷಿ ಕಾಯ್ದೆಗಳ ವಿರುದ್ಧ ಜನವರಿ 20ಕ್ಕೆ ಬೃಹತ್ ಚಳುವಳಿ ನಡೆಸಲಾಗುವುದು : ಡಿ.ಕೆ.ಶಿವಕುಮಾರ್​

ಕಾಂಗ್ರೆಸ್ ಪಕ್ಷ ಯಾವಾಗಲೂ ರೈತರ ಪರವಾಗಿ ನಿಂತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿ ಜನವರಿ 20 ರಂದು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ರಾಜ ಭವನದವರೆಗೆ ಪ್ರತಿಭಟನಾ ಪ್ರತಿಭಟನೆ ನಡೆಸುವ ಜೊತೆಗೆ ರಾಜ ಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ ಎಂದರು.

ಕೃಷಿ ಕಾಯ್ದೆಗಳ ವಿರುದ್ಧ ಜನವರಿ 20ಕ್ಕೆ ಬೃಹತ್ ಚಳುವಳಿ ನಡೆಸಲಾಗುವುದು : ಡಿ.ಕೆ.ಶಿವಕುಮಾರ್​
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
Edited By:

Updated on: Jan 14, 2021 | 5:03 PM

ಬೆಂಗಳೂರು: ಕೃಷಿ ಕಾಯ್ದೆಗಳ ವಿರುದ್ಧ ಇಡೀ ದೇಶದ ರೈತರು ವಿದೇಶಗಳು ನೋಡುವ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದು, ರಾಜ್ಯದ ರೈತರಿಗೆ ಶಕ್ತಿ ತುಂಬಲು ಜನವರಿ 20 ರಂದು ಚಳವಳಿ ನಡೆಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಯಾವಾಗಲೂ ರೈತರ ಪರವಾಗಿ ನಿಂತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆಶಿ ಜನವರಿ 20 ರಂದು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ರಾಜ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವ ಜೊತೆಗೆ ರಾಜ ಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ ಎಂದರು.

ಕೊರೊನಾ ಹಾವಳಿಯಿಂದ ಇಡೀ ವರ್ಷ ಎಲ್ಲಾ ವ್ಯಾಪಾರಸ್ಥರಿಗೆ ತೀರಾ ನಷ್ಟವಾಗಿದೆ. ಈ ನಡುವೆ ಯಾರಿಗೂ ಸಹಾಯ ಆಗದ ರೀತಿಯಲ್ಲಿ ಸರ್ಕಾರ ನಡೆದುಕೊಂಡಿದೆ. ರೈತರು, ವರ್ತಕರ ವಿರುದ್ಧ ಸರ್ಕಾರ ಕೆಲಸ ಮಾಡುತ್ತಿದೆ. ತೆರಿಗೆ ಹೆಚ್ಚಳ, ಗ್ಯಾಸ್ ಬೆಲೆ ಹೆಚ್ಚಳ, ವಿದ್ಯುತ್ ಬೆಲೆ ಹೆಚ್ಚಳ, ರೈತರಿಗೆ ಸಬ್ಸಿಡಿ, ಶಾಲೆ ಶುಲ್ಕ, ಸ್ಕಾಲರ್ಶಿಪ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಹೋರಾಟ ನಡೆಸುತ್ತೇವೆ ಎಂದರು.

ಕಾಂಗ್ರೆಸ್​ ತಯಾರು ಮಾಡಿದ ನಾಯಕರು ನಿಮಗೆ ಶಕ್ತಿ
ಕಾಂಗ್ರೆಸ್ ದೇಶಕ್ಕೆ ಮಾರಕ ಎಂದು ಯಡಿಯೂರಪ್ಪರವರು ಹೇಳಿದ್ದಾರೆ. ಆದರೆ ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ ಎಂದು ಅಭಿಪ್ರಾಯಪಟ್ಟ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ ಎಂದಿದ್ದಾರೆ. ಜೊತೆಗೆ ಅಧಿಕಾರ ಯಡಿಯೂರಪ್ಪರವರದ್ದಾಗಿರಬಹುದು ಆದರೆ ನಿಮಗೆ ಮಾತಾಡುವುದಕ್ಕೆ ಅವಕಾಶ ಕೊಟ್ಟಿರುವುದು ಕಾಂಗ್ರೆಸ್. ನಾವು ತಯಾರು ಮಾಡಿದ ನಾಯಕರು ನಿಮಗೆ ಶಕ್ತಿಯಾಗಿದ್ದಾರೆ. ತಲೆಯಲ್ಲಿ ಭ್ರಮೆ ಇದ್ದರೆ ಅದನ್ನು ತೆಗೆದುಹಾಕಿ. ಸಂಪುಟ ರಚನೆ ಬಗ್ಗೆ ನಿಮ್ಮ ಪಕ್ಷದವರೇ ಬ್ಲಾಕ್ ಮೇಲ್​ ಜನತಾ ಪಾರ್ಟಿ ಎಂದು ಹೇಳಿದ್ದಾರೆ ಎಂದು ರಾಜ್ಯದ ಮುಖ್ಯಮಂತ್ರಿ ವಿರುದ್ಧ ನೇರ ವಾಗ್ದಾಳಿ ಮಾಡಿದ್ದಾರೆ.

ದೇವರು ಇಲ್ಲ ಅನ್ನೋ ಜಾತಿಯಲ್ಲಿ ನಾನು ಹುಟ್ಟಿಲ್ಲ..ದೈವ ನಿರ್ಣಯಕ್ಕೆ ತಲೆಬಾಗುತ್ತೇನೆ ಎಂದ ಮುನಿರತ್ನ

 

Published On - 5:01 pm, Thu, 14 January 21