ಯಲಚೇನಹಳ್ಳಿ-ಅಂಜನಾಪುರ ನಡುವಿನ ಮೆಟ್ರೋ ವಿಸ್ತೃತ ಮಾರ್ಗಕ್ಕೆ ಸಿಎಂ BSY ಚಾಲನೆ

ಮೆಟ್ರೋ ಹಸಿರು ಲೈನ್​ಗೆ ಸೇರ್ಪಡೆಯಾಗಲಿರುವ ನೂತನ ವಿಸ್ತೃತ ಮಾರ್ಗಕ್ಕೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಚಾಲನೆ ನೀಡಿದ್ದಾರೆ. 6 ಕಿಲೋ ಮೀಟರ್ ಉದ್ದದ ನೂತನ ಮಾರ್ಗಕ್ಕೆ ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ಸಿಕ್ಕಿದೆ. 

ಯಲಚೇನಹಳ್ಳಿ-ಅಂಜನಾಪುರ ನಡುವಿನ ಮೆಟ್ರೋ ವಿಸ್ತೃತ ಮಾರ್ಗಕ್ಕೆ ಸಿಎಂ BSY ಚಾಲನೆ
ಮೆಟ್ರೋ ವಿಸ್ತೃತ ಮಾರ್ಗಕ್ಕೆ ಹಸಿರು ನಿಶಾನೆ ತೋರಿದ ಯಡಿಯೂರಪ್ಪ
Follow us
TV9 Web
| Updated By: ganapathi bhat

Updated on:Apr 06, 2022 | 9:03 PM

ಬೆಂಗಳೂರು: ಮೆಟ್ರೋ ಹಸಿರು ಲೈನ್​ಗೆ ಸೇರ್ಪಡೆಯಾಗಲಿರುವ ನೂತನ ವಿಸ್ತೃತ ಮಾರ್ಗಕ್ಕೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಚಾಲನೆ ನೀಡಿದ್ದಾರೆ. 6 ಕಿಲೋ ಮೀಟರ್ ಉದ್ದದ ನೂತನ ಮಾರ್ಗಕ್ಕೆ ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ಸಿಕ್ಕಿದೆ.  ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಗವಹಿಸಿ ಹಸಿರು ನಿಶಾನೆ ತೋರಿದ್ದಾರೆ.

ಮೆಟ್ರೋ ಹಸಿರು ಮಾರ್ಗ ತುಮಕೂರು ರಸ್ತೆ ನಾಗಸಂದ್ರದಿಂದ ಕನಕಪುರ ರಸ್ತೆಯ ಯಲಚೇನಹಳ್ಳಿಯವರೆಗೆ ಇತ್ತು. ಈಗ ಈ ಮಾರ್ಗವನ್ನು, ಯಲಚೇನಹಳ್ಳಿಯಿಂದ ಅಂಜನಾಪುರಕ್ಕೆ 6 ಕಿಲೋ ಮೀಟರ್ ವಿಸ್ತರಿಸಲಾಗಿದೆ. ಕನಕಪುರ ರಸ್ತೆಯಲ್ಲಿ 6 ಕಿಲೋ ಮೀಟರ್​ನಷ್ಟು ದೂರ ವಿಸ್ತರಿಸಲಾಗಿದೆ. ಸಚಿವ ಆರ್ ಅಶೋಕ್, ಸದಾನಂದ ಗೌಡ, ಗೋವಿಂದ ಕಾರಜೋಳ, ಭೈರತಿ ಬಸವರಾಜ್, ಎಸ್. ಆರ್. ವಿಶ್ವನಾಥ್, ಪಿ.ಸಿ. ಮೋಹನ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಮೆಟ್ರೋ ಹೊಸ ಮಾರ್ಗದಲ್ಲಿ 5 ನಿಲ್ದಾಣಗಳು ಇರಲಿವೆ. 1. ಕೋಣನಕುಂಟೆ ಕ್ರಾಸ್ 2. ದೊಡ್ಡಕಲ್ಲಸಂದ್ರ 3. ವಾಜರಹಳ್ಳಿ 4. ತಲಘಟ್ಟಪುರ 5. ರೇಷ್ಮೆ ಸಂಸ್ಥೆ (ಅಂಜನಾಪುರ)

ಈಗಾಗಲೇ ಮೂರು ತಿಂಗಳಿನಿಂದ ಪ್ರಾಯೋಗಿಕ ಸಂಚಾರ ನಡೆಸಿರುವ ಮೆಟ್ರೋ ರೈಲು, ಕಳೆದ ತಿಂಗಳು ರೈಲ್ವೇ ಸೇಫ್ಟಿ ಸರ್ಟಿಫಿಕೇಟ್ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ನೂತನ ರೈಲು ಮಾರ್ಗ ಲೋಕಾರ್ಪಣೆಗೊಳ್ಳಲಿದೆ. ಮೆಟ್ರೋ ಪ್ರಯಾಣಿಕರಿಗೆ ಸಂಕ್ರಾಂತಿ ಹಬ್ಬದ ದಿನವೇ ಸಿಹಿ ಸುದ್ದಿ ಸಿಗುವಂತಾಗಿದೆ.

ಮೆಟ್ರೋ ನೂತನ ಮಾರ್ಗಕ್ಕೆ ಚಾಲನೆ ನೀಡಿ, ಮುಖ್ಯಮಂತ್ರಿ ಯಡಿಯೂರಪ್ಪ ಸಂಕ್ರಾಂತಿ ಶುಭಾಶಯ ತಿಳಿಸಿ ಮಾತನಾಡಿದ್ದಾರೆ. ಇನ್ನು 1 ವರ್ಷದಲ್ಲಿ ಬೆಂಗಳೂರಿನ ಚಿತ್ರಣ ಬದಲಾಗಲಿದೆ. ಬೆಂಗಳೂರಿನಲ್ಲಿ ಮೆಟ್ರೋ ಅತ್ಯುತ್ತಮ ಸೇವೆ ಒದಗಿಸುತ್ತಿದೆ. 75 ನೇ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ 75 ಕಿ.ಮೀ ಮೆಟ್ರೋ ಮಾರ್ಗ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ. ಬೆಂಗಳೂರನ್ನು ಮಾದರಿ ನಗರವನ್ನಾಗಿ ಮಾಡಲು ನಾವು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. ಮೆಟ್ರೋ ಎರಡನೇ ಹಂತದ ಆರು ಕಿಲೋ ಮೀಟರ್ ಮಾರ್ಗದ ಉದ್ಘಾಟನೆ ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಕಾರ್ಯಕ್ರಮದಲ್ಲಿ ಬಿಜೆಪಿ ಬಾವುಟ ಈ ನಡುವೆ, ಮೆಟ್ರೋ ಉದ್ಘಾಟನೆ ಚಾಲನೆ ಕಾರ್ಯಕ್ರಮದಲ್ಲಿ ಬಿಜೆಪಿ ಪಕ್ಷದ ಬಾವುಟ ಹಾರಿಸಲಾಗಿತ್ತು. ಸರ್ಕಾರಿ ಕಾರ್ಯಕ್ರಮದ ವೇಳೆ, ಮೆಟ್ರೋ ಪಿಲ್ಲರ್​ಗಳ ಮೇಲೆ ರಾರಾಜಿಸುತ್ತಿರುವ ಬಿಜೆಪಿ ಬಾವುಟ ಬೇಕಿತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಲೋಕಾರ್ಪಣೆಗೆ ಸಿದ್ಧವಾಯ್ತು ಯಲಚೇನಹಳ್ಳಿ-ಅಂಜನಾಪುರ ನಡುವಿನ ನಮ್ಮ ಮೆಟ್ರೋ ವಿಸ್ತೃತ ಮಾರ್ಗ

Published On - 4:49 pm, Thu, 14 January 21

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?