AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂಬಿ ಬಂದವರ ಕೈ ಬಿಡಲ್ಲ ಈ ದೇವಿ.. ಮಕ್ಕಳಿಲ್ಲದವರಿಗೆ ಸಂತಾನಭಾಗ್ಯ ಕೊಡ್ತಾಳೆ ಲಜ್ಜಾಗೌರಿ!

ಧಾರ್ಮಿಕ ಕ್ಷೇತ್ರ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಿದ್ದನಕೊಳ್ಳ ಮಠಕ್ಕೆ ಪ್ರತಿ ಅಮಾವಾಸ್ಯೆ ಹಾಗೂ ಇತರ ವಿಶೇಷ ದಿನಗಳಲ್ಲಿ ಭಕ್ತರು ಬಂದು ಪೂಜೆ, ಪುನಸ್ಕಾರ ಮಾಡುತ್ತಾರೆ. ಬೆಟ್ಟ ಹತ್ತಿ ಬಂದು ಸಂತಾನ ಭಾಗ್ಯ ಕರುಣಿಸು ಎಂದು ಪ್ರಾರ್ಥಿಸುವವರಿಗೆ ದೇವಿ ಸಂತಾನ ಭಾಗ್ಯ ಕರುಣಿಸುತ್ತಾಳೆ.

ನಂಬಿ ಬಂದವರ ಕೈ ಬಿಡಲ್ಲ ಈ ದೇವಿ.. ಮಕ್ಕಳಿಲ್ಲದವರಿಗೆ ಸಂತಾನಭಾಗ್ಯ ಕೊಡ್ತಾಳೆ ಲಜ್ಜಾಗೌರಿ!
ಸಿದ್ದನಕೊಳ್ಳ ಮಠ
ಆಯೇಷಾ ಬಾನು
|

Updated on:Jan 14, 2021 | 3:17 PM

Share

ಬಾಗಲಕೋಟೆ: ಸುತ್ತಲೂ ದಟ್ಟವಾದ ಗುಡ್ಡ ಬೆಟ್ಟ ಹೊಂದಿರುವ ಪ್ರದೇಶ. ಬೆಟ್ಟದ ಮೇಲೆ ಸುಕ್ಷೇತ್ರದ ಶ್ರೀಮಠ. ಬೆಟ್ಟ ಹತ್ತಿ ಬಂದು ಸಂತಾನ ಭಾಗ್ಯ ಕರುಣಿಸು ಎಂದು ಪ್ರಾರ್ಥಿಸುವವರಿಗೆ ದೇವಿ ಸಂತಾನ ಭಾಗ್ಯ ಕರುಣಿಸುತ್ತಾಳೆ.

ಜಿಲ್ಲೆಯ ಇಳಕಲ್ ತಾಲೂಕಿನ ಗುಡ್ಡದ ಮೇಲಿರುವ ಸಿದ್ದನಕೊಳ್ಳ ಮಠ ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿದೆ. ಸಂತಾನ ಭಾಗ್ಯ ನೀಡುವ ಲಜ್ಜೆಗೌರಿ ದೇವಿಯ ತಾಣವಾಗಿದೆ. ಧಾರ್ಮಿಕ ಕ್ಷೇತ್ರ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಿದ್ದನಕೊಳ್ಳ ಮಠಕ್ಕೆ ಪ್ರತಿ ಅಮಾವಾಸ್ಯೆ ಹಾಗೂ ಇತರ ವಿಶೇಷ ದಿನಗಳಲ್ಲಿ ಭಕ್ತರು ಬಂದು ಪೂಜೆ, ಪುನಸ್ಕಾರ ಮಾಡುತ್ತಾರೆ. ರಾಷ್ಟ್ರಕೂಟರು, ಚಾಲುಕ್ಯರ ಕಾಲದಿಂದಲೂ ಈ ಮಠ ಖ್ಯಾತಿ ಪಡೆದುಕೊಂಡಿದ್ದು, ಸಿದ್ದಿ ಪುರುಷರ ನೆಚ್ಚಿನ ತಾಣವಾಗಿದೆ. ಇಲ್ಲಿ ಸಪ್ತಮಾತೆಯರು, ಸಂಗಮನಾಥ ದೇವಾಲಯ ಜೊತೆಗೆ ಸಂತಾನ ಭಾಗ್ಯ ನೀಡುವ ಲಜ್ಜೆ ಗೌರಿ ದೇವಿಯ ಗುಡಿ ಇರುವುದು ವಿಶೇಷವಾಗಿದೆ. ಲಜ್ಜೆ ಗೌರಿಗೆ ಪ್ರತಿ ಅಮಾವಾಸ್ಯೆ ದಿನದಂದು ಪೂಜೆ, ಪುನಸ್ಕಾರ ಮಾಡಿ ಭಕ್ತಿಯಿಂದ ಬೇಡಿಕೊಂಡರೆ ಸಂತಾನ ಭಾಗ್ಯ ಇಲ್ಲದವರಿಗೆ ಮಕ್ಕಳ ಭಾಗ್ಯ ಕರುಣಿಸುತ್ತಾಳೆ ಎಂಬ ನಂಬಿಕೆಯಿದೆ. ಜೊತೆಗೆ ಮಠದ ಶ್ರೀಗಳಾದ ಡಾ.ಶಿವಕುಮಾರ ಸ್ವಾಮೀಜಿಯವರು ಮಕ್ಕಳಾಗುವುದಕ್ಕೆ ಆರ್ಯುವೇದ ಔಷಧ ಸಹ ನೀಡುತ್ತಾರೆ. ಲಜ್ಜಾಗೌರಿ ಕೃಪೆ ಸ್ವಾಮೀಜಿಗಳ ಆಯುರ್ವೇಧ ಔಷಧ ಎರಡರ ಪ್ರಭಾವದಿಂದಾಗಿ ಅನೇಕರಿಗೆ ಸಂತಾನ ಭಾಗ್ಯ ಸಿಕ್ಕ ಉದಾಹರಣೆಗಳಿವೆ.

ಇನ್ನು ಇಲ್ಲಿನ ಲಜ್ಜೆ ಗೌರಿ ಇತಿಹಾಸ ಯುನೆಸ್ಕೋದಲ್ಲಿ ದಾಖಲಾಗಿದೆ. ಈ ಹಿನ್ನೆಲೆ ವಿದೇಶಿಯರು ಇಲ್ಲಿಗೆ ಬಂದು ಲಜ್ಜೆ ಗೌರಿ ಬಗ್ಗೆ ಸಂಶೋಧನೆ ಮಾಡುತ್ತಾರೆ. ಮಹಾರಾಷ್ಟ್ರ, ಗೋವಾ ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಿಂದ ಅಮಾವಾಸ್ಯೆಗೆ ಭಕ್ತರು ಆಗಮಿಸಿ, ಲಜ್ಜೆ ಗೌರಿ ದೇವಿಗೆ ಪೂಜೆ ಸಲ್ಲಿಸುವ ಜೊತೆಗೆ ಇಲ್ಲಿನ ಪವಾಡ ಪುರುಷ ಸಿದ್ದ ಶ್ರೀಗಳ ಗದ್ದುಗೆ ದರ್ಶನ ಮಾಡಿಕೊಂಡು ಹೋಗುತ್ತಾರೆ.

ಈ ದೇವಿಗೆ ಪೂಜೆ ಮಾಡಿ, ಮಕ್ಕಳು ಪಡೆದುಕೊಂಡಿರುವ ಉದಾಹರಣೆಗಳು ಸಾಕಷ್ಟು ಇದೆಯಂತೆ. ಹೀಗಾಗಿ ಪ್ರತಿ ವರ್ಷ ಬೆಟ್ಟದ ಮೇಲಿರುವ ಸಿದ್ದನಕೊಳ್ಳದ ಲಜ್ಜಾಗೌರಿಗೆ ಸಂತಾನ ಭಾಗ್ಯಕ್ಕಾಗಿ ಬೇಡಿಕೊಂಡು ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಲಜ್ಜಾಗೌರಿ ಮೂರ್ತಿಯ ಮೇಲೆ ಚಿಕ್ಕ ಚಿಕ್ಕ ಕಲ್ಲುಗಳನ್ನಿಟ್ಟು ಮನೆಗಳನ್ನು ಕಟ್ಟಿ ಹೋಗುತ್ತಾರೆ. ತಮ್ಮ ಇಷ್ಟಾರ್ಥ ತೀರಿದ ಬಳಿಕ ಆ ಕಲ್ಲಿನ ಚಿಕ್ಕ ಗೂಡನ್ನು ಕೆಡವಿ, ಹರಕೆ ತೀರಿಸುವುದು ಈ ಲಜ್ಜಾಗೌರಿಗೆ ಮಾಡಿಕೊಂಡು ಬಂದಿರುವ ಪೂಜಾ ವಿಧಾನವಾಗಿದೆ.

ಒಟ್ಟಿನಲ್ಲಿ ಐತಿಹಾಸಿಕ ಹಿನ್ನೆಲೆ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ಈ ಸಿದ್ದನಕೊಳ್ಳ ಮಠವು ನಿರಂತರ ದಾಸೋಹ ಮಠ ಎಂದೇ ಹೆಸರುವಾಸಿಯಾಗಿದೆ. ಇದರ ಜೊತೆಗೆ ಭಕ್ತರ ಇಷ್ಟಾರ್ಥ ಪೂರೈಸುವ ಧಾರ್ಮಿಕ ತಾಣವಾಗಿದೆ. ವಿಶೇಷವಾಗಿ ಸಂತಾನ ಭಾಗ್ಯ ಕರುಣಿಸುವ ಲಜ್ಜಾಗೌರಿ ಶಿಲ್ಪಕಲೆಗಳು ಇಲ್ಲಿ ಇರುವುದರಿಂದ ಮಕ್ಕಳಾಗದ ದಂಪತಿ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಇದು ಆಧುನಿಕತೆಯ ಈ ಸಂದರ್ಭದಲ್ಲೂ ಭಕ್ತರ ನಂಬಿಕೆ ಹಾಗೂ ಶ್ರದ್ಧಾಭಕ್ತಿಗೆ ಸಾಕ್ಷಿಯಾಗಿದೆ.

Published On - 3:17 pm, Thu, 14 January 21

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ