Mangaluru News: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 15 ವರ್ಷದ ಹೆಣ್ಣು ಹುಲಿ ಸಾವು

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 15 ವರ್ಷದ ನೇತ್ರಾವತಿ ಎಂಬ ಹೆಸರಿನ ಹೆಣ್ಣು ಹುಲಿ ಮೃತಪಟ್ಟಿದೆ ಎಂದು ಪಿಲಿಕುಳ ಕೇಂದ್ರದ ನಿರ್ದೇಶಕ ಹೆಚ್​. ಜೆ. ಭಂಡಾರಿ ಅವರು ಬುಧವಾರ ತಿಳಿಸಿದ್ದಾರೆ.

Mangaluru News: ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 15 ವರ್ಷದ ಹೆಣ್ಣು ಹುಲಿ ಸಾವು
ಮೃತ ನೇತ್ರಾವತಿ ಹೆಸರಿನ ಹೆಣ್ಣು ಹುಲಿ
Follow us
ಗಂಗಾಧರ​ ಬ. ಸಾಬೋಜಿ
|

Updated on:Jun 07, 2023 | 5:42 PM

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನ (Pilikula Biological Park) ದಲ್ಲಿ 15 ವರ್ಷದ ನೇತ್ರಾವತಿ ಎಂಬ ಹೆಸರಿನ ಹೆಣ್ಣು ಹುಲಿ ಮೃತಪಟ್ಟಿದೆ ಎಂದು ಪಿಲಿಕುಳ ಕೇಂದ್ರದ ನಿರ್ದೇಶಕ ಹೆಚ್​. ಜೆ. ಭಂಡಾರಿ ಅವರು ಬುಧವಾರ ತಿಳಿಸಿದ್ದಾರೆ.  ಅಧಿಕಾರಗಳ ಪ್ರಕಾರ ಜೂ. 4ರಂದು ಆರು ವರ್ಷದ ಗುಂಡು ಹುಲಿ ರೇವಾ ಮತ್ತು ನೇತ್ರಾವತಿ ಮಧ್ಯೆ ನಡೆದ  ಕಾದಾಟದಲ್ಲಿ ಹೆಣ್ಣು ಹುಲಿ ಗಾಯಗೊಂಡಿತ್ತು. ಈ ವೇಳೆ ಗಾಯಗೊಂಡಿದ್ದ ಹುಲಿಗೆ ವೈದ್ಯರು ಚಿಕಿತ್ಸೆ ನೀಡಿದ್ದರು ಎಂದು ಹೇಳಿದ್ದಾರೆ.

2 ಹುಲಿಗಳ ಕಾದಾಟ

ರೇವಾ ಗಂಡು ಹುಲಿಯು ಬೆದೆಗೆ ಬಂದಿರುದರಿಂದ ನೇತ್ರವತಿಯ ಸಂಪರ್ಕಕ್ಕೆ ಬಂದಾಗ ಹೆಣ್ಣು ಹುಲಿಯು ರೇವಾನ ಮೇಲೆರಗಿತ್ತು. ಇಬ್ಬರ ಮಧ್ಯೆ ನಡೆದ ಕಾದಾಟದ ಸ್ಥಳದಲ್ಲಿದ್ದ ಅಧಿಕಾರಿ ಸಿಬ್ಬಂದಿಗಳು ಪರಿಸ್ಥಿಯನ್ನು ಹತೋಟಿಗೆ ತಂದು, ಕೂಡಲೆ ಬೋನ್​​ ಒಳಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: Chikkamagaluru News: ಅಸ್ಸಾಂ ಮೂಲದ ಮಹಿಳೆ ಮೇಲೆ‌ ಹುಲಿ ದಾಳಿ: ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

ಪಿಲಿಕುಲದ ವೈದ್ಯಾಧಿಕಾರಿ, ವೈಜ್ಞಾನಿಕ ಅಧಿಕಾರಿಗಳು ಚಿಕಿತ್ಸೆ ನೀಡಿದ್ದು, ನೇತ್ರಾವತಿ ಸಹಜ ಸ್ಥಿತಿಗೆ ಮರಳುತ್ತಿದ್ದು, ನೀರು ಮತ್ತು ಆಹಾರ ಸೇವಿಸುತಿತ್ತು. ಆದರೆ ಈ ದಿನ ಬೆಳಗ್ಗೆ ವೈದ್ಯಾಧಿಕಾರಿ ಚಿಕಿತ್ಸೆ  ನಿಡುತ್ತಿರುವಾಗಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದೆ ಎಂದರು.

ಹೃದಯಾಘಾತದಿಂದ ಸಾವು ಶಂಕೆ

ದೇಹದಲ್ಲಿ ಮೇಲ ನೋಟತಕ್ಕೆ, ಗಾಯಗಳಿದ್ದು, ಕಾದಾಟದ ತೀವ್ರತೆಯಿಂದ ಹೃದಯಾಘಾತವಾಗಿ ಮೃತಪಟ್ಟಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತರೆ ಅಂತರಿಕ ಗಾಯ ಮತ್ತು ಕಾರಣ ಮರಣೋತ್ತರ ಪರೀಕ್ಷೆಯಿಂದ ತಿಳಿಯಬೇಕಿದೆ ಎಂದು ಹೇಳಿದರು. ರೇವಾನಿಗೆ ಸಣ್ಣಪುಟ್ಟ ಗಾಯಗಳಗಿದ್ದು ಅಪಾಯದಿಂದ ಪಾರಾಗಿದ್ದಾನೆ.

ಇದನ್ನೂ ಓದಿ: Python: ಕಾಫಿ ತೋಟದಲ್ಲಿ ನಾಯಿ ತಿಂದು ಮಲಗಿದ್ದ ಹೆಬ್ಬಾವು, ಅಬ್ಬಬ್ಬಾ ಮೈ ಜುಮ್ ಎನ್ನುವ ರಕ್ಷಣಾ ಕಾರ್ಯಚರಣೆ

ನೇತ್ರಾವತಿ (15) ಮತ್ತು ರೇವಾ (6) ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಜನಿಸಿದ ಹುಲಿಗಳಾಗಿವೆ. ಸದ್ಯ ಪಿಲಿಕುಳದಲ್ಲಿ 8 ಹುಲಿಗಳಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:41 pm, Wed, 7 June 23