ಮಂಗಳೂರು: ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ನೈಲಾ ಗ್ರಾಮದ 17 ವರ್ಷದ ಬಾಲಕ 24 ಅಡಿ ಆಳದ ಬಾವಿಯನ್ನು (Well) ತೋಡಿದ್ದಾನೆ. ಹೌದು ಬಾಲಕ ಸ್ರಾಜನ್ ತನ್ನ ಊರಿನ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂಬ ನಿಟ್ಟಿನಲ್ಲಿ ಈ ಮಾರ್ಗವನ್ನು ಅನುಸರಿಸಿದ್ದಾರೆ. ಸ್ರಾಜನ್ನ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೈಲಾ ಗ್ರಾಮದ ಟೈಲರ್ ಲೋಕನಾಥ್ ಮತ್ತು ಬೀಡಿ ಸುತ್ತುವ ಕೆಲಸ ಮಾಡುವ ಮೋಹಿನಿ ಅವರ ಪುತ್ರ ಸ್ರಾಜನ್ ಸರ್ಕಾರಿ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದಾರೆ.
ಗ್ರಾಮದಲ್ಲಿ ನೀರಿನ ಸಮಸ್ಯೆ ಅಧಿಕವಾಗಿದೆ. ಇದನ್ನು ಬಗೆಹರಿಸಬೇಕೆಂದು ಬಾವಿ ತೋಡಲು ಬಯಸಿದ್ದೆ. ಗ್ರಾಮಕ್ಕೆ ಪಂಚಾಯತಿ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ ಆದರೂ ಕೂಡ ನೀರಿನ ಸಮಸ್ಯೆ ಅಧಿಕವಾಗಿದೆ ಎಂದು ಸ್ರಾಜನ್ ಹೇಳಿದರು.
“ಬಾವಿ ತೋಡುವುದು ನನ್ನ ಮನಸ್ಸಿನಲ್ಲಿತ್ತು, ಆದರೆ ನಾನು ಯಶಸ್ವಿಯಾಗುತ್ತೇನೆಯೇ ಎಂದು ನನಗೆ ಖಚಿತವಾಗಿರಲಿಲ್ಲ. ಕೆಲಸ ಕಷ್ಟಕರವಾಗಿತ್ತು, ಆದರೆ ಅದು ಅಸಾಧ್ಯವಲ್ಲ ಎಂದು ನನಗೆ ತಿಳಿದಿತ್ತು. ಎರಡು ವಾರಗಳ ಹಿಂದೆ ಬಾವಿ ತೋಡಲು ಆರಂಭಿಸಬೇಕೆಂದು ಯೋಚಿಸಿದಾಗಸುಮಾರು 15-16 ಅಡಿಯಲ್ಲಿ ನೀರು ಸಿಗಬಹುದು ಎಂದು ಯೋಚಿಸಿದ್ದೆ, ಅದು ನಿಜವಾಯಿತು. ನಾನು ಬಾವಿ ತೋಡುತ್ತಾ 15-16 ಅಡಿ ತಲುಪಿದಾಗ ನೀರು ದೊರೆಯಿತು ಇದರಿಂದ ಅತೀವ ಆನಂದವಾಯಿತು. ನನ್ನ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಎಂದು ನನ್ನ ಮನೆಯವರೂ ಖುಷಿ ಪಟ್ಟರು. ಇದು ನನ್ನನ್ನು ಮತ್ತಷ್ಟು ಅಗೆಯಲು ಪ್ರೇರೇಪಿಸಿತು” ಈ ಹಿನ್ನೆಲೆ ನಾನು 24 ಅಡಿ ಬಾವಿ ತೋಡಿದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Wed, 12 April 23