ಕಾಬೂಲ್​ನಲ್ಲಿ ಸುರಕ್ಷಿತವಾಗಿದ್ದೇನೆ; ವಾಯ್ಸ್ ಮೆಸೇಜ್ ಮೂಲಕ ಭಾರತಕ್ಕೆ ತಿಳಿಸಿದ ಕನ್ನಡತಿ

| Updated By: sandhya thejappa

Updated on: Aug 21, 2021 | 8:51 AM

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲದ ಸಿಸ್ಟರ್ ಥೆರೆಸಾ ಕ್ರಾಸ್ಟಾ ಎನ್ನುವವರು ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದು, ಅವರೇ ಸ್ವತಃ ವಾಯ್ಸ್ ಮೆಸೇಜ್ ಬಿಡುಗಡೆ ಮಾಡಿದ್ದಾರೆ.

ಕಾಬೂಲ್​ನಲ್ಲಿ ಸುರಕ್ಷಿತವಾಗಿದ್ದೇನೆ; ವಾಯ್ಸ್ ಮೆಸೇಜ್ ಮೂಲಕ ಭಾರತಕ್ಕೆ ತಿಳಿಸಿದ ಕನ್ನಡತಿ
ಸಿಸ್ಟರ್ ಥೆರೆಸಾ ಕ್ರಾಸ್ಟಾ
Follow us on

ಮಂಗಳೂರು: ತಾಲಿಬಾನ್ ಉಗ್ರರು (Taliban) ಈಗಾಗಲೇ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದಿದ್ದು, ಅಲ್ಲಿನ ಜನರಿಗೆ ಕ್ಷಣ ಕ್ಷಣಕ್ಕೂ ಆತಂಕ, ಭಯ ಹೆಚ್ಚಾಗುತ್ತಿದೆ. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಏರ್​ಪೋರ್ಟ್​ನಲ್ಲಿ (Kabul Airport) ಆರು ಜನ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಮೂಲದ ಸಿಸ್ಟರ್ ಥೆರೆಸಾ ಕ್ರಾಸ್ಟಾ ಎನ್ನುವವರು ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದು, ಅವರೇ ಸ್ವತಃ ವಾಯ್ಸ್ ಮೆಸೇಜ್ ಬಿಡುಗಡೆ ಮಾಡಿದ್ದಾರೆ. ಕಾಬೂಲ್​ನಿಂದ ಭಾರತಕ್ಕೆ ವಾಯ್ಸ್ ಮೆಸೇಜ್​ನ ಬಿಡುಗಡೆ ಮಾಡಿರುವ ಸಿಸ್ಟರ್ ಥೆರೆಸಾ, ತಾನು ಸುರಕ್ಷಿತವಾಗಿರುವ ಬಗ್ಗೆ ತಿಳಿಸಿದ್ದಾರೆ.

ಸಿಸ್ಟರ್ ಥೆರೆಸಾ ಕ್ರಾಸ್ಟಾ ಬಿಡುಗಡೆ ಮಾಡಿದ ಆಡಿಯೋದಲ್ಲಿ ಏನಿದೆ?
ಹಲೋ.. ಗುಡ್ ಇವನಿಂಗ್, ನಾನು ಸಿಸ್ಟರ್ ಥೆರೆಸಾ. ಕಾಬೂಲ್ ಕಾನ್ವೆಂಟಿನಲ್ಲಿ ಸುರಕ್ಷಿತವಾಗಿದ್ದೇನೆ. ನಾನು ಕೆಲಸ ಮಾಡುವ ಸಂಸ್ಥೆಯು ಪಿಪಿಕೆ ಇಟಾಲಿಯನಾ. ಅವರು ನನ್ನ ಸುರಕ್ಷತೆಗಾಗಿ ಇಟಾಲಿಯನ್ ಕೌನ್ಸಲೆಂಟ್ ರೋಮ್ ನಿಂದ ಇಟಲಿಗೆ ಹೋಗಲು ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದಾರೆ. ಸದ್ಯಕ್ಕೆ ಕಾಬೂಲ್ ಏರ್​ಪೋರ್ಟ್​ನಲ್ಲಿ ಗೊಂದಲ ಇರುವುದರಿಂದ ಏರ್​ಪೋರ್ಟ್​ ಒಳಗೆ ಪ್ರವೇಶವಿಲ್ಲ. ಆದ್ದರಿಂದ ನಮ್ಮ ಪ್ರಯಾಣವನ್ನು ಮುಂದೂಡಲಾಗಿದೆ. ಏರ್​ಪೋರ್ಟ್​ಗೆ ಪ್ರವೇಶ ನೀಡುವಾಗ ನಮ್ಮನ್ನು ಕರೆದುಕೊಂಡು ಹೋಗುತ್ತಾರೆ. ಇಂಡಿಯನ್ ಎಂಬಸಿಗೆ ನಾನು ರಿಜಿಸ್ಟರ್ ಮಾಡಿರುವುದರಿಂದ ಸುರಕ್ಷತೆಗೆ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದಾರೆ. ನಿಮ್ಮ ಸಹಕಾರಕ್ಕೆ ನನ್ನ ತುಂಬು ಹೃದಯದ ವಂದನೆಗಳು ಎಂದು ಸಿಸ್ಟರ್ ಥೆರೆಸಾ ಕ್ರಾಸ್ಟಾ ತನ್ನ ಆಡಿಯೋದಲ್ಲಿ ತಿಳಿಸಿದ್ದಾರೆ.

ಅಮೆರಿಕನ್ನರ ರಕ್ಷಣೆಗೆ ಹರಸಾಹಸ
ಇನ್ನು ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶವಾದ ಹಿನ್ನೆಲೆ ಕಾಬೂಲ್ನಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಹೆಲಿಕಾಪ್ಟರ್​ಗಳನ್ನು ಬಳಸಿಕೊಂಡು ರಕ್ಷಣಾ ಕಾರ್ಯ ನಡೆಯುತ್ತಿದೆ. ಅಮೆರಿಕನ್ನರು ಏರ್​ಪೋರ್ಟ್​ ಹೊರಗೆ ಸಿಲುಕಿಕೊಂಡಿದ್ದು, ಸುಮಾರು 169 ಅಮೆರಿಕನ್ನರ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ.

ಇದನ್ನೂ ಓದಿ

ಅಮೆರಿಕನ್ನರ ತಂಟೆಗೆ ಬಂದ್ರೆ ತಾಲಿಬಾನಿಗಳನ್ನ ಸುಮ್ನೇ ಬಿಡಲ್ಲ, ನಾವೇನು ಓಡಿ ಹೋಗಲ್ಲ: ಜೋ ಬೈಡನ್

Afghanistan: ಕಾಬೂಲ್ ಏರ್‌ಪೋರ್ಟ್‌ನಲ್ಲಿ ಸಿಲುಕಿರುವ ಆರು ಕನ್ನಡಿಗರು

(A woman from Karnataka told india that she was safe in Kabul airport)

Published On - 8:50 am, Sat, 21 August 21