ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಶಿಶು ಬದಲಿಸಿದ ಆರೋಪ; ಆಸ್ಪತ್ರೆಯ ವಿರುದ್ಧ ದೂರು ದಾಖಲು

| Updated By: preethi shettigar

Updated on: Oct 15, 2021 | 1:57 PM

ಆಸ್ಪತ್ರೆಯ ದಾಖಲೆಗಳಲ್ಲೂ ಹೆಣ್ಣು ಮಗು ಎಂದೇ ಉಲ್ಲೇಖವಾಗಿದೆ. ಆದರೆ ಅಕ್ಟೋಬರ್ 14ರಂದು ಡಿಸ್ಚಾರ್ಜ್ ಆದಾಗ ಗಂಡು ಮಗು ನೀಡಿದ್ದಾರೆ ಎಂದು ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಠಾಣೆಗೆ ದಂಪತಿ ದೂರು ನೀಡಿದ್ದಾರೆ.

ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಶಿಶು ಬದಲಿಸಿದ ಆರೋಪ; ಆಸ್ಪತ್ರೆಯ ವಿರುದ್ಧ ದೂರು ದಾಖಲು
ಸಾಂದರ್ಭಿಕ ಚಿತ್ರ
Follow us on

ದಕ್ಷಿಣ ಕನ್ನಡ: ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಶಿಶು ಬದಲಿಸಿದ ಆರೋಪ ಕೇಳಿ ಬಂದಿದೆ. ಮಂಗಳೂರಿನ ಲೇಡಿಗೋಷನ್ ಹೆರಿಗೆ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ದಾಖಲೆಗಳಲ್ಲಿ ಹೆಣ್ಣು ಮಗು ತೋರಿಸಿ ಗಂಡು ಮಗು ನೀಡಿದ್ದಾರೆ ಎಂದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಮೂಲದ ಮುಸ್ತಫಾ ದಂಪತಿ ಹೆರಿಗೆ ಆಸ್ಪತ್ರೆಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸೆಪ್ಟೆಂಬರ್ 27ರಂದು ಹೆರಿಗೆಯಾಗಿ ಹೆಣ್ಣು ಮಗು ಎಂಬ ಮಾಹಿತಿ ನೀಡಿದ್ದರು. ಮಗುವಿಗೆ ತೀವ್ರ ಅನಾರೋಗ್ಯ ಹಿನ್ನೆಲೆ ಎನ್ಐಸಿಯುಗೆ ದಾಖಲು ಮಾಡಿದ್ದರು. ಆಸ್ಪತ್ರೆಯ ದಾಖಲೆಗಳಲ್ಲೂ ಹೆಣ್ಣು ಮಗು ಎಂದೇ ಉಲ್ಲೇಖವಾಗಿದೆ. ಆದರೆ ಅಕ್ಟೋಬರ್ 14ರಂದು ಡಿಸ್ಚಾರ್ಜ್ ಆದಾಗ ಗಂಡು ಮಗು ನೀಡಿದ್ದಾರೆ ಎಂದು ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಠಾಣೆಗೆ ದಂಪತಿ ದೂರು ನೀಡಿದ್ದಾರೆ.

ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ
ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಉಪನ್ಯಾಸಕನನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಅಲಿಯಾಸ್ ನಾಗರಾಜ್ ಬಂಧಿತ ಆರೋಪಿ. ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಆಮಿಷ ಒಡ್ಡಿದ್ದ ನಾಗರಾಜ್ 6 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ.

ನಕಲಿ ಲೆಟರ್‌ಹೆಡ್‌ನಲ್ಲಿ ಆಫರ್ ಲೆಟರ್‌ ಕೂಡ ಕೊಟ್ಟಿದ್ದು, ದಾಖಲೆ ಪರಿಶೀಲನೆಗೆ ಹೋದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ಶಿಕ್ಷಣ ಇಲಾಖೆಯಿಂದಲೇ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ನಾಗರಾಜ್​ನನ್ನು ಬಂಧಿಸಿದ್ದಾರೆ.

ಮೈಸೂರಿನಲ್ಲಿ ಡಿಟಿಪಿ ಸೆಂಟರ್ ಒಂದರಲ್ಲಿ ಟೈಪಿಸ್ಟ್ ಕೆಲಸ ಮಾಡುತ್ತಿದ್ದ ಯುವತಿಗೆ ಮೈಸೂರಿನ ಖಾಸಗಿ ಕಾಲೇಜೊಂದರ ಉಪನ್ಯಾಸಕನಾಗಿರುವ ಸುರೇಶ್ ವಂಚಿಸಿದ್ದಾನೆ. ಶಿಕ್ಷಣ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕಿ ಕೆಲಸ ಕೊಡಿಸುತ್ತೆನೆ ಎಂದು ವಂಚಿಸಲಾಗಿದೆ.

ಇದನ್ನೂ ಓದಿ:
ಮಗು ಜನಿಸಿದ ವಿಚಾರವನ್ನೇ ಎರಡು ವರ್ಷ ಮುಚ್ಚಿಟ್ಟಿದ್ದ ಖ್ಯಾತ ನಟಿ; ಇದರ ಹಿಂದಿತ್ತು ಈ ದುರುದ್ದೇಶ?

ಲಸಿಕೆ ಪಡೆದ ಬಳಿಕ ಮೂರು ತಿಂಗಳ ಮಗು ಸಾವು; ಆರೋಗ್ಯ ಅಧಿಕಾರಿಗಳ ಎಡವಟ್ಟು ಕಾರಣ ಎಂದು ಗ್ರಾಮಸ್ಥರ ಆರೋಪ, ಪ್ರತಿಭಟನೆ

Published On - 1:50 pm, Fri, 15 October 21