ಮಗು ಜನಿಸಿದ ವಿಚಾರವನ್ನೇ ಎರಡು ವರ್ಷ ಮುಚ್ಚಿಟ್ಟಿದ್ದ ಖ್ಯಾತ ನಟಿ; ಇದರ ಹಿಂದಿತ್ತು ಈ ದುರುದ್ದೇಶ?

2001ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಶ್ರಿಯಾ ಶರಣ್​ ಈ ರೀತಿಯ ಘೋಷಣೆ ಒಂದನ್ನು ಮಾಡಿದ್ದಾರೆ. ಶ್ರಿಯಾಗೆ 2020ರ ಲಾಕ್​ಡೌನ್​ ಸಂದರ್ಭದಲ್ಲಿಯೇ ಮಗು ಜನಿಸಿತ್ತು. ಆದರೆ, ಈ ವಿಚಾರವನ್ನು ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ.

ಮಗು ಜನಿಸಿದ ವಿಚಾರವನ್ನೇ ಎರಡು ವರ್ಷ ಮುಚ್ಚಿಟ್ಟಿದ್ದ ಖ್ಯಾತ ನಟಿ; ಇದರ ಹಿಂದಿತ್ತು ಈ ದುರುದ್ದೇಶ?
ಶ್ರಿಯಾ
Follow us
ರಾಜೇಶ್ ದುಗ್ಗುಮನೆ
|

Updated on: Oct 11, 2021 | 8:32 PM

ಚಿತ್ರರಂಗಕ್ಕೆ ಕಾಲಿಟ್ಟ ಸಾಕಷ್ಟು ಹೀರೋಯಿನ್​ಗಳು ತಮ್ಮ ಗ್ಲಾಮರ್​ ಕಡಿಮೆ ಆಗದಂತೆ ನೋಡಿಕೊಳ್ಳಲು ಎಲ್ಲ ರೀತಿಯಲ್ಲೂ ಪ್ರಯತ್ನಿಸುತ್ತಾರೆ. ಇದಕ್ಕೆ ಧಕ್ಕೆ ಆಗದಂತೆ ನೋಡಿಕೊಳ್ಳಲು ಏನು ಮಾಡೋಕೂ ರೆಡಿ ಇರುತ್ತಾರೆ ಕೆಲವರು. ಮದುವೆ ಹಾಗೂ ಮಕ್ಕಳನ್ನು ಪಡೆಯಲು ವಿಳಂಬ ಮಾಡೋಕೂ ಗ್ಲಾಮರ್​ ಕಡಿಮೆ ಆಗಬಹುದು ಎನ್ನುವುದು ಪ್ರಮುಖ ಕಾರಣ. ಚಿತ್ರರಂಗದಲ್ಲಿ ಆಫರ್​ ಕಡಿಮೆ ಆಗಬಾರದು ಎನ್ನುವ ಕಾರಣಕ್ಕೆ ಕೆಲವರು ಮದುವೆ ಆಗಿದ್ದನ್ನೇ ಮುಚ್ಚಿಟ್ಟ ಉದಾಹರಣೆ ಇದೆ. ದಕ್ಷಿಣ ಭಾರತದ ಖ್ಯಾತ ನಟಿ ಮಗುವಾದ ವಿಚಾರವನ್ನು ಮುಚ್ಚಿಟ್ಟಿದ್ದರು. ಈ ಬಗ್ಗೆ ಈಗ ಘೋಷಣೆ ಮಾಡಿದ್ದಾರೆ.

2001ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಶ್ರಿಯಾ ಶರಣ್​ ಈ ರೀತಿಯ ಘೋಷಣೆ ಒಂದನ್ನು ಮಾಡಿದ್ದಾರೆ. ಶ್ರಿಯಾಗೆ 2020ರ ಲಾಕ್​ಡೌನ್​ ಸಂದರ್ಭದಲ್ಲಿಯೇ ಮಗು ಜನಿಸಿತ್ತು. ಆದರೆ, ಈ ವಿಚಾರವನ್ನು ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಮಗು ಜನಿಸಿ ಸುಮಾರು ಎರಡು ವರ್ಷ ಆಗುತ್ತಾ ಬಂದಿದೆ. ಈಗ ಶ್ರಿಯಾ ಈ ವಿಚಾರ ಬಿಚ್ಚಿಟ್ಟಿದ್ದಾರೆ.

‘2020ರ ಕ್ವಾರಂಟೈನ್​ ತುಂಬಾನೇ ಅದ್ಭುತವಾಗಿತ್ತು. ಇಡೀ ಪ್ರಪಂಚವು ಕಷ್ಟದಲ್ಲಿ ಸಾಗುತ್ತಿರುವಾಗ, ನಮ್ಮ ಪ್ರಪಂಚವು ಬದಲಾಯಿತು. ನಮಗೆ ಆ ಸಂದರ್ಭದಲ್ಲಿ ಹೆಣ್ಣುಮಗುವಾಗಿದೆ’ ಎಂದಿದ್ದಾರೆ ಅವರು. ಈ ವಿಚಾರ ಕೇಳಿ ಅಭಿಮಾನಿಗಳು ನಿಜಕ್ಕೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದರ ಹಿಂದೆ ದುರುದ್ದೇಶವಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೂ ಕಾರಣವಿದೆ. ಯಾವುದೇ ನಟಿಗೆ ಮಗು ಜನಿಸಿದೆ ಎಂದರೆ ಅವರನ್ನು ನೋಡುವ ರೀತಿಯೇ ಬದಲಾಗುತ್ತದೆ. ಬೇಡಿಕೆ ಕುಗ್ಗುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಅವರು ಮಗುವಾಗಿರುವ ವಿಚಾರವನ್ನು ಮುಚ್ಚಿಟ್ಟಿದ್ದರು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ‘ಇದು ಅವರ ವೈಯಕ್ತಿಕ ವಿಚಾರ. ಅವರಿಗೆ ಇಷ್ಟಬಂದಾಗ ಘೋಷಣೆ ಮಾಡುತ್ತಾರೆ ಎಂದು ಹೇಳುವ ಮೂಲಕ ನಟಿ ಪರ ಬ್ಯಾಟ್​ ಬೀಸಿದ್ದಾರೆ.

ಶ್ರಿಯಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜನವರಿ 7ರಂದು ತೆರೆಗೆ ಬರುತ್ತಿದೆ. ಇದಲ್ಲದೆ, ಶ್ರಿಯಾ ತೆಲುಗು, ಹಿಂದಿ, ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶ್ರಿಯಾ ‘ಅರಸು’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ರೂಪಾ ಅಯ್ಯರ್​ ನಿರ್ದೇಶನದ ‘ಚಂದ್ರ’ ಸಿನಿಮಾದಲ್ಲಿ ನಟಿಸಿದ್ದರು. 2018ರ ಮಾರ್ಚ್ ರಂದು ಶ್ರಿಯಾ ರಷ್ಯಾದ ಗೆಳೆಯ ಆಂಡ್ರೇ ಕೊಶ್ಚೀವ್ ಅವರನ್ನು ಲೋಖಂಡ್ ವಾಲಾ ನಿವಾಸದಲ್ಲಿ ಮದುವೆ ಆಗಿದ್ದರು.

ಇದನ್ನೂ ಓದಿ:‘ತಾಯಿ ಆಗಲು ಬಯಸಿದ್ರು ಸಮಂತಾ, ಆದರೆ..’; ನಾಗ ಚೈತನ್ಯ ಜತೆಗಿನ ಡಿವೋರ್ಸ್​ ಬಳಿಕ ನಿರ್ಮಾಪಕಿ ಅಚ್ಚರಿ ಹೇಳಿಕೆ

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ