Bajrang Dal: ಕರಾವಳಿಯಲ್ಲಿ ಶಾಶ್ವತ ಎನ್​ಐಎ ಕಚೇರಿ ಸ್ಥಾಪಿಸುವಂತೆ ಭಜರಂಗದಳ ಆಗ್ರಹ

| Updated By: guruganesh bhat

Updated on: Aug 06, 2021 | 7:54 PM

ಇತ್ತೀಚಿನ ಕೆಲವು ವಿದ್ಯಮಾನಗಳನ್ನು ಪ್ರಸ್ತಾಪಿಸಿರುವ ಭಜರಂಗದಳ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

Bajrang Dal: ಕರಾವಳಿಯಲ್ಲಿ ಶಾಶ್ವತ ಎನ್​ಐಎ ಕಚೇರಿ ಸ್ಥಾಪಿಸುವಂತೆ ಭಜರಂಗದಳ ಆಗ್ರಹ
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಶಾಶ್ವತ ಎನ್‌ಐಎ ಕಚೇರಿಯನ್ನು ಸ್ಥಾ‌ಪಿಸುವಂತೆ ಕೋರಿ ಬಜರಂಗದಳ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಬಿ.ಎಂ.ಇದಿನಬ್ಬ ಮೊಮ್ಮಗನನ್ನು ಎನ್ಐಎ (NIA) ವಶಕ್ಕೆ ಪಡೆದ ವಿಚಾರವನ್ನು ಪ್ರಸ್ತಾಪಿಸಿರುವ ಭಜರಂಗದಳ, ಕೇಂದ್ರ ಸರ್ಕಾರದ ಬಳಿ ಶಾಶ್ವತ ಎನ್ಐಎ ಕಚೇರಿ ಸ್ಥಾಪಿಸುವಂತೆ ಆಗ್ರಹಿಸಿದೆ.

ಭಜರಂಗದಳ ಉಲ್ಲೇಖಿಸಿದ ಪ್ರಕರಣವೇನು?
ಮಾಜಿ ಶಾಸಕ ಬಿ.ಎಂ.ಇದಿನಬ್ಬ ಮಗನ ಮನೆ ಮೇಲೆ ಬೆಂಗಳೂರು ಎನ್ಐಎ(NIA) ತಂಡ ದಾಳಿ ನಡೆಸಿದೆ. ಮಂಗಳೂರಿನ ಉಳ್ಳಾಲದಲ್ಲಿರುವ ಮನೆ ಮೇಲೆ ಎನ್ಐಎ ದಾಳಿ ನಡೆಸಿದೆ. ಮಾಜಿ ಶಾಸಕ ಬಿ.ಎಂ.ಇದಿನಬ್ಬ ಮಗ ಬಿ.ಎಂ.ಬಾಷಾನಿಗೆ ಉಗ್ರರ ಜೊತೆ ನಂಟಿದೆ ಎಂಬ ಬೆಂಗಳೂರಿನಿಂದ ಬಂದ ಎನ್ಐಎ ಅಧಿಕಾರಿಗಳ ತಂಡ ಉಳ್ಳಾಲದಲ್ಲಿರುವ ಮನೆ ಮೇಲೆ ದಾಳಿ ನಡೆಸಿದೆ

ಇದಿನಬ್ಬ ಪುತ್ರ ಇಸ್ಮಾಯಿಲ್ ಬಾಷಾರ ಪುತ್ರಿಯ ಮಗಳು ಅಜ್ಮಲ್ ಕುಟುಂಬ ಮೂರು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿತ್ತು. ವರ್ಷಗಳ ಹಿಂದೆ ಗಂಡ ಸಿಯಾಝ್ ಉನ್ನತ ಶಿಕ್ಷಣಕ್ಕಾಗಿ ಶ್ರೀಲಂಕಾಕ್ಕೆ ಹೋಗ್ತಿರೋದಾಗಿ ಹೇಳಿ ಹೋದವರು ಇಂದಿನವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ. ಶ್ರೀಲಂಕಾದಿಂದ ಮಸ್ಕತ್ ಹಾಗೂ ಕತಾರ್ ಗೆ ತೆರಳಿ ಅಲ್ಲಿಂದ ಸಿರಿಯಾಕ್ಕೆ ಹೋಗಿ ಐಸಿಸ್ ಸೇರಿದ್ದಾರೆಂದು ಮಾಹಿತಿ‌ ಇತ್ತು. ವೈದ್ಯರಾಗಿರುವ ಸಿಯಾಝ್‍ನ ಸಹೋದರ ಕೂಡ ಹೆಂಡತಿ ಮತ್ತು ಮಗುವಿನೊಂದಿಗೆ ತೆರಳಿದ್ದ. ಈ ಬಗ್ಗೆ ಕೇರಳ ಆಂತರಿಕ ಭದ್ರತಾ ಹಾಗೂ ಗುಪ್ತಚರ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ದಳ ತನಿಖೆ ಆರಂಭಿಸಿತ್ತು. ಅದೇ ತನಿಖೆಯ ಭಾಗವಾಗಿ ಅಜ್ಮಲ್ ಅಜ್ಜ ಇಸ್ಮಾಯಿಲ್ ಭಾಷಾ ಮನೆಗೆ ದಾಳಿ ನಡೆದಿರಬಹುದು ಎನ್ನಲಾಗುತ್ತಿದೆ. ಸಾಹಿತಿಯೂ ಆಗಿದ್ದ ದಿ.ಇದಿನಬ್ಬ ಮೂರು ಬಾರಿ ಕಾಂಗ್ರೆಸ್ ನಿಂದ ಉಳ್ಳಾಲ ಶಾಸಕರಾಗಿ ಆಯ್ಕೆಯಾಗಿದ್ದರು.

ಇದನ್ನೂ ಓದಿ: 

ಭಟ್ಕಳದಲ್ಲಿ ಎನ್​ಐಎ ದಾಳಿ: ಐಸಿಸ್ ನಂಟು ಶಂಕೆಯ ಮೇಲೆ ಮೂವರು ವಶಕ್ಕೆ 

ಸಿಎಂ ಬಸವರಾಜ ಬೊಮ್ಮಾಯಿ – ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಭೇಟಿ; ನದಿ ನೀರು ಹಂಚಿಕೆ ಕುರಿತು ಮಾತುಕತೆ

(Bajrang Dal demands the establishment of a permanent NIA office along the coastal area)

Published On - 6:05 pm, Fri, 6 August 21