ಮಂಗಳೂರು ಸಿ.ಎಫ್.ಐ ಗರ್ಲ್ಸ್ ಕಾನ್ಫರೆನ್ಸ್; ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್ರ ರೂಪಕ ಪ್ರದರ್ಶನ
ಮಂಗಳೂರಿನ ಪುರಭವನದಲ್ಲಿ ನಡೆದ ಸಿ.ಎಫ್.ಐ ಗರ್ಲ್ಸ್ ಕಾನ್ಫರೆನ್ಸ್ನ ಕಾರ್ಯಕ್ರಮದ ಉದ್ಘಾಟನೆಗು ಮುನ್ನ ಹಿಜಾಬ್ ವಿಚಾರಕ್ಕೆ ವಿದ್ಯಾರ್ಥಿನಿಯರು, ಉಡುಪಿ ಶಾಸಕ ರಘುಪತಿ ಭಟ್, ಯಶ್ ಪಾಲ್ ಸುವರ್ಣರ ಅವರ ರೂಪಕ ಪ್ರದರ್ಶಿಸಿದರು.
ಮಂಗಳೂರು: ಮಂಗಳೂರಿನ (Magalore) ಪುರಭವನದಲ್ಲಿ ನಡೆದ ಸಿ.ಎಫ್.ಐ (CFI) ಗರ್ಲ್ಸ್ ಕಾನ್ಫರೆನ್ಸ್ನ ಕಾರ್ಯಕ್ರಮದ ಉದ್ಘಾಟನೆಗು ಮುನ್ನ ಹಿಜಾಬ್ (Hijab) ವಿಚಾರಕ್ಕೆ ವಿದ್ಯಾರ್ಥಿನಿಯರು (Students), ಉಡುಪಿ (Udupi) ಶಾಸಕ ರಘುಪತಿ ಭಟ್ (Raghupati Bath), ಯಶ್ ಪಾಲ್ ಸುವರ್ಣರ ಅವರ ರೂಪಕ ಮಾಡಿದರು. ಸುಪಾರಿ ಕೊಟ್ಟ ಪತ್ನಿಯನ್ನು ಕೊಲೆ ಮಾಡಿಸಿದ ಶಾಸಕ ರಘುಪತಿ ಭಟ್, ಹಿಜಾಬ್ ಬಗ್ಗೆ ಮಾತನಾಡುತ್ತಾರೆ ಅಂತಾ ರೂಪಕ ಪ್ರದರ್ಶಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಿಎಫ್ಐ ರಾಷ್ಟ್ರಾಧ್ಯಕ್ಷ ಎಂ.ಎಸ್.ಸಾಜೀದ್, ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಹಿಜಾಬ್ ವಿದ್ಯಾರ್ಥಿನಿಯರಾದ ಆಲಿಯಾ ಅಸಾದಿ ಸೇರಿ ಆರು ವಿದ್ಯಾರ್ಥಿನಿಯರು ಸಮಾವೇಶದ ವೇದಿಕೆಯಲ್ಲಿದ್ದರು. ಮಂಗಳೂರಿನ ರಥಬೀದಿ ಕಾಲೇಜಿನ ಹಿಜಾಬ್ ವಿವಾದದ ಕೇಂದ್ರ ಬಿಂದು ಹಿಬಾ ಶೇಖ್, ಮಂಗಳೂರಿನ ವಿವಿ ಕಾಲೇಜು ಹಿಜಾಬ್ ವಿದ್ಯಾರ್ಥಿನಿ ಗೌಸಿಯಾಗೂ ಕೂಡ ಅತಿಥಿಯಾಗಿ ಭಾಗವಸಿದ್ದರು. ದೆಹಲಿಯ ಜಾಮಿಯಾ ಮಿಲಿಯಾ ಸಿಎಫ್ಐ ಅಧ್ಯಕ್ಷೆ ಫೌಝಿಯಾ ಉಪಸ್ಥಿತರಿದ್ದರು.
ಸಿ.ಎಫ್.ಐ ನ ಗರ್ಲ್ ಕಾನ್ಫರೆನ್ಸ್ ಕಾರ್ಯಕ್ರಮದ ಕುರಿತು ಟಿವಿ9 ಗೆ ಸಿ.ಎಫ್.ಐ ರಾಜ್ಯಸಮಿತಿ ಸದಸ್ಯೆ ಫಾತೀಮಾ ಉಸ್ಮಾನ್ ಮಾತನಾಡಿ ಹಿಜಾಬ್ ಸೇರಿದಂತೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತೊಂದರೆ ಕೊಡಲಾಗುತ್ತಿದೆ. ಆರ್.ಎಸ್.ಎಸ್ ನ ಧೋರಣೆ ವಿರೋಧಕ್ಕಾಗಿ ಈ ಕಾನ್ಫರೆನ್ಸ್ ನಡೆಯುತ್ತಿದೆ. ನಾವು ಟಿಪ್ಪು ಸುಲ್ತಾನ್ನ ಮಕ್ಕಳು. ನಾವು ಅಂಬೇಡ್ಕರ್ ನ ಅನುಯಾಯಿಗಳು ಎಂದು ಹೇಳಿದ್ದಾರೆ.