ಸಂಘರ್ಷಕ್ಕೆ ಕಾರಣವಾದ ಮಂಗಳೂರು ವಿಶ್ವವಿದ್ಯಾಲಯದ ಕಾಲೇಜು ಚುನಾವಣೆ: ABVP ಗೆಲುವು; ಸಿಎಂಗೆ ದೂರು ನೀಡಲು ಮುಂದಾದ NSUI

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಚುನಾವಣೆಯಲ್ಲಿ ಪರೋಕ್ಷ ಮತದಾನದ ಮೂಲಕ ಎಬಿವಿಪಿ ಗೆಲುವು ಸಾಧಿಸಿದ್ದು, ಸರ್ಕಾರದ ನೂತನ ಆದೇಶ ಉಲ್ಲಂಘಿಸಿ ಎಲೆಕ್ಷನ್ ನಡೆಸಿದ ಕುಲಪತಿ ವಿರುದ್ಧ ಸಿಎಂಗೆ ದೂರು ನೀಡಲು ಎನ್‍ಎಸ್‌ಯುಐ ಮುಂದಾಗಿದೆ. ಈವರೆಗೂ ಇದ್ದ ಪರೋಕ್ಷ ಚುನಾವಣೆ ಬದಲು, ನೇರ ಚುನಾವಣೆ ನಡೆಸಲು ನಿನ್ನೆರಾಜ್ಯ ಸರ್ಕಾರ ಆದೇಶಿಸಿರುವ ನಡೆದ ಈ ಚುನಾವಣೆ ವಿವಾದಕ್ಕೆ ಕಾರಣವಾಗಿದೆ.

ಸಂಘರ್ಷಕ್ಕೆ ಕಾರಣವಾದ ಮಂಗಳೂರು ವಿಶ್ವವಿದ್ಯಾಲಯದ ಕಾಲೇಜು ಚುನಾವಣೆ: ABVP ಗೆಲುವು; ಸಿಎಂಗೆ ದೂರು ನೀಡಲು ಮುಂದಾದ NSUI
ಮಂಗಳೂರಿನ ಹಂಪನಕಟ್ಟೆಯಲ್ಲಿರೋ ವಿವಿ ಕಾಲೇಜು
Image Credit source: enrollacademy.com
Edited By:

Updated on: Sep 11, 2026 | 3:53 PM

ಮಂಗಳೂರು, ಸೆಪ್ಟೆಂಬರ್​​ 11: ಕಾಲೇಜು-ವಿಶ್ವ ವಿದ್ಯಾಲಯಗಳಲ್ಲಿ ಚುನಾವಣೆ ಪುನರಾರಂಭಕ್ಕೆ ಮೊನ್ನೆ(ಸೆ.09)ಯಷ್ಟೇ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ನಡುವೆಯೇ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಎಲೆಕ್ಷನ್​​ ಭಾರಿ ಸಂಘರ್ಷಕ್ಕೆ ಕಾರಣವಾಗಿದೆ. ಪರೋಕ್ಷ ಮತದಾನದ ಮೂಲಕ ನಡೆದಿರುವ ಚುನಾವಣೆಯಲ್ಲಿ ಎಬಿವಿಪಿ ಗೆದ್ದು ಬೀಗಿದ್ದು, ಸರ್ಕಾರದ ಆದೇಶದ ನಡುವೆ ನಡೆದಿರುವ ಈ ಎಲೆಕ್ಷನ್​​ ಬಗ್ಗೆ NSUI ಆಕ್ಷೇಪ ತೆಗೆದಿದೆ. ಮಂಗಳೂರು ವಿವಿ ಕುಲಪತಿ ವಿರುದ್ಧ ಸಿಎಂಗೆ ದೂರು ನೀಡಲೂ ಮುಂದಾಗಿದೆ.

ಚುನಾವಣೆ ಬಗ್ಗೆ ಸಂಘರ್ಷ ಯಾಕೆ?

ಈವರೆಗೂ ಇದ್ದ ಪರೋಕ್ಷ ಚುನಾವಣೆ ಬದಲು, ನೇರ ಚುನಾವಣೆ ನಡೆಸಲು ನಿನ್ನೆ (ಸೆ.10) ರಾಜ್ಯ ಸರ್ಕಾರ ಆದೇಶಿಸಿತ್ತು. ಆದರೆ ಈ ಆದೇಶ ಬರುವುದಕ್ಕೂ ಮೊದಲೇ ಚುನಾವಣೆ ನಿಗದಿಯಾಗಿತ್ತು ಎಂಬ ಕಾರಣ ನೀಡಿ ಚುನಾವಣೆ ನಡೆಸಲಾಗಿದೆ ಎನ್ನಲಾಗಿದೆ. ಮಾಹಿತಿ ಪ್ರಕಾರ, ಪರೋಕ್ಷ ಚುನಾವಣೆ ಆದ್ರೆ ABVPಗೆ ಗೆಲುವು ಪಕ್ಕಾ ಎಂಬ ಕಾರಣಕ್ಕೆ ವಿಶ್ವ ವಿದ್ಯಾಲಯದ ಮೇಲೆ ಒತ್ತಡ ಹೇರಲಾಗಿತ್ತು. ಹೊಸ ಆದೇಶದಂತೆ ಚುನಾವಣೆ ನಡೆಸಲು ಆಗ್ರಹಿಸಲಾಗಿತ್ತು. ಆದರೆ ವಿಶ್ವ ವಿದ್ಯಾಲಯ ಮಾತ್ರ ಯಾರ ಒತ್ತಡಕ್ಕೂ ಮಣಿಯದೆ ಮಂಗಳೂರಿನ ಹಂಪನಕಟ್ಟೆಯಲ್ಲಿರೋ ವಿವಿ ಕಾಲೇಜಿನಲ್ಲಿ ಎಲೆಕ್ಷನ್​​ ನಡೆಸಿದೆ.

ಇದನ್ನೂ ಓದಿ: ಸಚಿವ ಸಂಪುಟ ಸಭೆ: ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಚುನಾವಣೆಗೆ ಕ್ಯಾಬಿನೆಟ್ ಅಸ್ತು

ವಿವಿ ಕುಲಪತಿ ವಿರುದ್ಧ ದೂರು ಕೊಡಲು ಸಿದ್ಧತೆ

ಇಂದು ನಡೆದ ಮಂಗಳೂರು ವಿವಿ ಕಾಲೇಜಿನ ಚುನಾವಣೆಯಲ್ಲಿ ಗೆದ್ದು ಬೀಗಿದ ಎಬಿವಿಪಿ ವಿಜಯೋತ್ಸವ ಆಚರಿಸಿದ್ದರೆ, ಇತ್ತ ಈ ಸಂಬಂಧ ಸಿಎಂ ಡಿಕೆಶಿಗೆ ದೂರು ಕೊಡಲು ಸಿದ್ಧತೆ NSUI ಸಿದ್ಧತೆ ನಡೆಸಿದೆ. ಜಿಲ್ಲಾಡಳಿತದ ಮೂಲಕ ದೂರು ಸಲ್ಲಿಸಲು NSUI ತೀರ್ಮಾನಿಸಿದ್ದು, ಸೆಪ್ಟೆಂಬರ್18ರಂದು ಮಂಗಳೂರಿನಲ್ಲಿ ನಡೆಯಲಿರುವ ಕ್ಯಾಬಿನೆಟ್ ಸಭೆಗೆ ಸಿಎಂ ಬಂದಾಗ ಚರ್ಚೆ ನಡೆಸಲು ನಿರ್ಧರಿಸಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us