ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಿರು ಸೇತುವೆಯಿಂದ ಉರುಳಿ 20 ಅಡಿ ಕಂದಕಕ್ಕೆ ಕಾರು ಬಿದ್ದ ಪರಿಣಾಮ 6 ಜನರಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ 2 ವರ್ಷದ ಮಗುವಿಗೆ ಗಾಯವಾಗಿಲ್ಲ. ಸದ್ಯ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬೆಂಗಳೂರಿನ ಆರ್.ಟಿ.ನಗರದ ನಿವಾಸಿಗಳು ಎಂದು ತಿಳಿದುಬಂದಿದೆ. ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದಾಗ ಅವಘಡ ಸಂಭವಿಸಿದೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲ: ರಸ್ತೆಗಳಲ್ಲಿ ದರೋಡೆ ಮಾಡುತ್ತಿದ್ದ ಅಂತಾರಾಜ್ಯ ಕಳ್ಳರನ್ನು ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರ್(27) ಯತೀಶ್(26) ಬಂಧಿತ ಆರೋಪಿಗಳು. ಬಂಧಿತರಿಂದ ಕಾರು, ಆಟೋ, 2 ಬೈಕ್, ಲ್ಯಾಪ್‌ಟಾಪ್, ಎರಡು ಮೊಬೈಲ್, ಚಿನ್ನಾಭರಣ ಸೇರಿದಂತೆ 12 ಲಕ್ಷ ಮೌಲ್ಯದ ಚಿನ್ನಾಭರಣ ಸಾಮಾನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: Shivamogga News: ಆಂಟಿಯ ಹಿಂದೆ ಬಿದ್ದಿದ್ದ ಆಟೋ ಡ್ರೈವರ್ನ ಬರ್ಬರ ಹತ್ಯೆ; ಆರೋಪಿ ಅರೆಸ್ಟ್
ಆರೋಪಿ ಚಂದ್ರಶೇಖರ್ 42 ಪ್ರಕರಣಗಳಲ್ಲಿ ಮತ್ತು ಯತೀಶ್ 39 ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದು ಪೊಲೀಸರು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಮಾರಕಾಸ್ತ್ರಗಳನ್ನು ಸಹ ವಶಕ್ಕೆ ಪಡೆದಿದ್ದಾರೆ.
ಮಂಡ್ಯ: ಬೆಂಗಳೂರು-ಮೈಸೂರು ಹೈವೆ ಪಕ್ಕದಲ್ಲಿ ಹಾಕಿದ್ದ ತಡೆ ಗೋಡೆಗಳ ತಂತಿ ಬೇಲಿಯನ್ನು ಕಳ್ಳತನ ಮಾಡಲಾಗಿದೆ. ಆ ಮೂಲಕ ಕಳ್ಳರ ತಮ್ಮ ಕೈ ಚಳಕ ತೋರಿದ್ದಾರೆ. ದನಕರಗಳು ಎಕ್ಸ್ ಪ್ರೆಸ್ ಹೈವೆ ನುಗ್ಗ ಬಾರದೆಂಬ ಕಾರಣಕ್ಕೆ ಮದ್ದೂರಿನಿಂದ ಮಂಡ್ಯದ ಮಾರ್ಗವಾಗಿ ಬರುವ ರಸ್ತೆಯಲ್ಲಿ ತಂತಿ ಬೇಲಿ ಹಾಕಲಾಗಿದೆ. ಈ ಹಿಂದೆ ವಿದ್ಯುತ್ ಕಂಬಕ್ಕೆ ಹಾಕಿದ್ದ ಅಲ್ಯೂಮಿನಿಯಮ್ ಪ್ಲೇಟ್ಗಳನ್ನ ಸಹ ಕಳ್ಳರು ಕದ್ದಿದ್ದರು.
ಇದನ್ನೂ ಓದಿ: Belagavi News: ರಾತ್ರಿ ಗೆಳೆಯರ ಜೊತೆಗೆ ಹೋದವ, ಬೆಳಗ್ಗೆ ಶವವಾಗಿ ಪತ್ತೆ; ಮುಗಿಲು ಮುಟ್ಟಿದ ಮಗನನ್ನ ಕಳೆದುಕೊಂಡ ತಾಯಿಯ ಗೋಳಾಟ
ಈಗ ಕಳ್ಳರ ಚಿತ್ತ ತಂತಿ ಬೇಲಿ ಮೇಲೆ ಬಿದಿದ್ದು, 20 ಕ್ಕೂ ಹೆಚ್ಚು ಕಡೆ ತಂತಿ ಬೇಲಿ ಕಳ್ಳತನ ಮಾಡಿದ್ದಾರೆ. ಪೊಲೀಸರು ಎಷ್ಟೇ ಗಸ್ತು ತಿರುಗಿದರೂ ತಂತಿ ಬೇಲಿ ಕಳ್ಳತನಕ್ಕೆ ಬ್ರೇಕ್ ಬಿದ್ದಿಲ್ಲ. ಈಗಾಗಲೇ ಹೆದ್ದಾರಿ ಲೋಕಾರ್ಪಣೆಯಾದ ಬಳಿಕ ಅಪಘಾತ ಪ್ರಕರಣಗಳು ಹೆಚ್ಚಾಗಿವೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದೆ ಇದ್ದರೆ ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಇದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:40 pm, Sat, 17 June 23