Belagavi News: ರಾತ್ರಿ ಗೆಳೆಯರ ಜೊತೆಗೆ ಹೋದವ, ಬೆಳಗ್ಗೆ ಶವವಾಗಿ ಪತ್ತೆ; ಮುಗಿಲು ಮುಟ್ಟಿದ ಮಗನನ್ನ ಕಳೆದುಕೊಂಡ ತಾಯಿಯ ಗೋಳಾಟ
ಆತ ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದ, ಹೆಂಡತಿ ಬಿಟ್ಟು ಹೋಗಿದ್ದ ಆತ ತಾಯಿ ಜತೆಗೆ ಒಟ್ಟಾಗಿದ್ದ. ಸಂಜೆಯಾದರೆ ಮನೆಗೆ ಬರ್ತಿದ್ದ ಆತ ಅಂದು ರಾತ್ರಿಯಾದ್ರೂ ಮನೆಗೆ ಬರಲಿಲ್ಲ. ತಡರಾತ್ರಿ ಬಾರದಿದ್ದಾಗ ಹುಡುಕಾಟ ನಡೆಸಿ ಮಲಗಿದ್ದ ತಾಯಿಗೆ ಬೆಳಗ್ಗೆ ಅನ್ನುವಷ್ಟರಲ್ಲಿ ಶಾಕ್ ಎದುರಾಗಿತ್ತು. ಗೆಳೆಯರ ಜತೆಗೆ ಹೋದವ ಊರಾಚೆ ಹೆಣವಾಗಿದ್ದ ಅಷ್ಟಕ್ಕೂ ಮನೆಯಿಂದ ಹೋದವನಿಗೆ ಆಗಿದ್ದೇನೂ ಅಂತೀರಾ ಈ ಸ್ಟೋರಿ ನೋಡಿ.
ಬೆಳಗಾವಿ: ತಾಲೂಕಿನ ಯಳ್ಳೂರ ಗ್ರಾಮದಲ್ಲಿ 34ವರ್ಷದ ಸಂಜಯ್ ತುಕಾರಾಮ್ ಪಾಟೀಲ್ ಎಂಬ ವ್ಯಕ್ತಿ ಜೂನ್ 14ರ ರಾತ್ರಿ ಬರ್ಬರವಾಗಿ ಕೊಲೆ (Murder)ಯಾಗಿ ಹೋಗಿದ್ದ. ಸೆಂಟ್ರಿಂಗ್ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಈತ 8 ವರ್ಷದ ಹಿಂದೆ ಮದುವೆಯಾಗಿದ್ದ ಇತನಿಗೆ ಎರಡು ಮಕ್ಕಳಿದ್ದಾರೆ. ಆದ್ರೆ, ಐದು ವರ್ಷದ ಹಿಂದೆ ಹೆಂಡತಿ ಗಂಡನೊಟ್ಟಿಗೆ ಜಗಳ ಮಾಡಿಕೊಂಡು ಎರಡು ಮಕ್ಕಳನ್ನ ಕರೆದುಕೊಂಡು ತವರು ಮನೆ ಸೇರಿದ್ದಳು. ಹೆಂಡತಿ ಹೋದ ಬಳಿಕ ತಾಯಿ ಜತೆಗೆ ವಾಸವಿದ್ದ ಸಂಜಯ್, ಬಂದ ಹಣದಲ್ಲಿ ಕುಡಿಯುವುದು, ಅಲ್ಪ ಹಣ ಮನೆಗೆ ನೀಡುವುದನ್ನ ಮಾಡುತ್ತಿದ್ದ. ಕುಡಿದು ಬರ್ತಿದ್ದ ಆತನನ್ನ ತಾಯಿ ಕೂಡ ಪ್ರಶ್ನಿಸುತ್ತಿರಲಿಲ್ಲ. ಹೆಂಡತಿ ಬಿಟ್ಟು ಹೋದ ಮೇಲೆ ಆತ ಹೀಗಾದ ಎಂದು ನೊಂದುಕೊಂಡು ಸುಮ್ಮನಿರುತ್ತಿದ್ದಳು. ಎಂದಿನಂತೆ ನಿನ್ನೆ ಸಂಜೆ ಮನೆಗೆ ಬಂದ ಸಂಜಯ್ ಎಂಟು ಗಂಟೆ ಸುಮಾರಿಗೆ ಮನೆಗೆ ಹೋದವ ವಾಪಾಸ್ ಬಂದಿರಲಿಲ್ಲ. ಬಳಿಕ ಮಾರನೇ ದಿನ ಮಧ್ಯಾಹ್ನ ಆತ ಕೊಲೆಯಾಗಿ ಹೋಗಿದ್ದಾನೆ ಅನ್ನೋದು ಆಕೆಯ ತಾಯಿಗೆ ಗೊತ್ತಾಗುತ್ತದೆ. ಊರಿಂದ ನಾಲ್ಕು ಕಿಮೀ ದೂರದಲ್ಲಿರುವ ಜಮೀನಿನಲ್ಲಿ ಆತ ಶವವಾಗಿ ಬಿದ್ದಿದ್ದನ್ನ ಕಂಡು ತಾಯಿ ಮತ್ತು ಕುಟುಂಬಸ್ಥರು ಶಾಕ್ ಆಗಿದ್ದರು.
ಇನ್ನು ನಿನ್ನೆ ಸಂಜೆ 8 ಗಂಟೆ ಸುಮಾರಿಗೆ ಯಾರೋ ಗೆಳೆಯರು ಬಂದು ಸಂಜಯ್ ಪಾಟೀಲ್ನನ್ನ ಕರೆದುಕೊಂಡು ಹೋಗಿದ್ದಾರೆ. ಇಡೀ ರಾತ್ರಿ ಮನೆಗೆ ಬಾರದಿದ್ದಾಗ ಕೆಲವು ಕಡೆ ಆತನಿಗೆ ಹುಡುಕಾಟ ನಡೆಸಿದ್ದ ತಾಯಿ ಮತ್ತು ಸಹೋದರ, ಬೆಳಗ್ಗೆ ನೋಡಿದ್ರಾಯ್ತು ಎಂದು ಸುಮ್ಮನಾಗಿದ್ದರು. ಮಾರನೇ ದಿನ ಬೆಳಗ್ಗೆ ಪರಿಚಯಸ್ಥರು ಬಂದು ಅನಗೋಳ ಬಳಿ ನಿಮ್ಮ ಮಗ ಬಿದ್ದಿದ್ದಾನೆ ಎಂದು ಹೇಳಿದ್ದಾರೆ. ಅಲ್ಲಿ ಹೋಗಿ ನೋಡಿದಾಗ ತಲೆ ಮೇಲೆ ಕಲ್ಲು ಎತ್ತಿಹಾಕಿ ಸಂಜಯ್ನನ್ನ ಬರ್ಬರವಾಗಿ ಕೊಲೆ ಮಾಡಿದ್ದು ಗೊತ್ತಾಗಿದೆ. ಈ ಕುರಿತು ಟಿಳಕವಾಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಕೂಡಲೇ ಶವವನ್ನ ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಶಿಪ್ಟ್ ಮಾಡಿದ್ದರು.
ಇದನ್ನೂ ಓದಿ:5 ವರ್ಷ ಪ್ರೀತಿಸಿ, ತಾಳಿ ಕಟ್ಟಿಸಿಕೊಂಡ ನಂತರ ಇಷ್ಟವಿಲ್ಲ ಎಂದಿದ್ದ ತಂಗಿ; ಸಹೋದರಿ ತಪ್ಪಿಗೆ ಅಣ್ಣನ ಕೊಲೆ
ಇತ್ತ ಕೊಲೆ ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಐದು ವರ್ಷಗಳ ಹಿಂದೆ ಹೆಂಡತಿ ಯಾಕೆ ಬಿಟ್ಟು ಹೋಗಿದ್ದಳು ಅನ್ನೋದರಿಂದ ಹಿಡಿದು ನಿನ್ನೆ ಸಂಜೆ ಯಾರು ಬಂದು ಸಂಜಯ್ಗೆ ಕರೆದುಕೊಂಡು ಹೋದರೂ ಅನ್ನೋದರ ಕುರಿತು ಕಂಪ್ಲೀಟ್ ಆಗಿ ಮಾಹಿತಿ ಪಡೆದುಕೊಂಡು ಆರೋಪಿಗಳಿಗೆ ಶೋಧ ಮಾಡುತ್ತಿದ್ದಾರೆ. ಇನ್ನು ಮೇಲ್ನೋಟಕ್ಕೆ ರಾತ್ರಿ ಜಮೀನಿನಲ್ಲಿ ಪಾರ್ಟಿ ಮಾಡಿ ನಂತರ ಕೊಲೆ ಆಗಿದೆ ಅನ್ನೋದು ಗೊತ್ತಾಗಿದ್ದು, ಆ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.
ಸದ್ಯ ಟಿಳಕವಾಡಿ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡು ಒಂದು ತಂಡವನ್ನ ರಚನೆ ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಗೆಳೆಯರೇ ಕರೆದುಕೊಂಡು ಹೋಗಿ ಪಾರ್ಟಿ ಮಾಡಿ, ಹಣದ ವಿಚಾರವಾಗಿ ಕೊಲೆ ಮಾಡಿದ್ರಾ ಅನ್ನೋ ಆಯಾಮದಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಒಟ್ಟಿನಲ್ಲಿ ಹೆಂಡತಿ ಜತೆಗೆ ಬೇರೆಯಾಗಿ ಕುಡಿಯುತ್ತಾ ಕಾಲ ಕಳೆಯುತ್ತಿದ್ದವನಿಗೆ ಯಾರು ಹತ್ಯೆ ಮಾಡಿದ್ರೂ ಅನ್ನೋದೇ ಯಕ್ಷ ಪ್ರಶ್ನೆಯಾಗಿದ್ದು, ಕುಟುಂಬಸ್ಥರಿಗೂ ಶಾಕ್ ಆಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ