5 ವರ್ಷ ಪ್ರೀತಿಸಿ, ತಾಳಿ ಕಟ್ಟಿಸಿಕೊಂಡ ನಂತರ ಇಷ್ಟವಿಲ್ಲ ಎಂದಿದ್ದ ತಂಗಿ; ಸಹೋದರಿ ತಪ್ಪಿಗೆ ಅಣ್ಣನ ಕೊಲೆ

ನಿನ್ನೆ(ಜೂ.16) ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಹೇಮಂತ್ ಅಲಿಯಾಸ್ ಸ್ವಾಮಿ(23) ಎಂಬಾತನನ್ನ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ (Murder) ಮಾಡಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತಂಗಿಯ ವಿಷಯವಾಗಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

5 ವರ್ಷ ಪ್ರೀತಿಸಿ, ತಾಳಿ ಕಟ್ಟಿಸಿಕೊಂಡ ನಂತರ ಇಷ್ಟವಿಲ್ಲ ಎಂದಿದ್ದ ತಂಗಿ; ಸಹೋದರಿ ತಪ್ಪಿಗೆ ಅಣ್ಣನ ಕೊಲೆ
ಕೊಲೆಯಾದ ಹೇಮಂತ್​, ಆರೋಪಿ ಸಾಗರ್​
Follow us
ಕಿರಣ್ ಹನುಮಂತ್​ ಮಾದಾರ್
|

Updated on: Jun 17, 2023 | 7:14 AM

ಮೈಸೂರು: ನಿನ್ನೆ(ಜೂ.16) ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಹೇಮಂತ್ ಅಲಿಯಾಸ್ ಸ್ವಾಮಿ(23) ಎಂಬಾತನನ್ನ ಕಲ್ಲಿನಿಂದ ಜಜ್ಜಿ, ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ (Murder) ಮಾಡಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ತಂಗಿಯ ವಿಷಯವಾಗಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಹೌದು ಕೊಲೆಯಾದ ಯುವಕನ ತಂಗಿ, ಆರೋಪಿ ಸಾಗರ್​ನನ್ನು 5 ವರ್ಷ ಪ್ರೀತಿ ಮಾಡಿ ತಾಳಿ ಕಟ್ಟಿಸಿಕೊಂಡು, ನಂತರ ಇಷ್ಟವಿಲ್ಲ ಎಂದಿದ್ದಳು. ಮದುವೆ ನಂತರವೂ ಪ್ರೀತಿ ಮಾಡಿದವಳು ಸಿಗದ ಕೋಪದಲ್ಲಿ ಸಾಗರ್​ ಜೊತೆಗೆ ತನ್ನ ಸ್ನೇಹಿತರಾದ ಪ್ರತಾಪ್, ಮಂಜು ಎಂಬುವವರು ಸೇರಿ ಬರ್ಬರವಾಗಿ ಹತ್ಯೆ ಮಾಡಿ, ಪರಾರಿಯಾಗಿದ್ದಾರೆ. ಈ ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

15 ದಿನಗಳ ಹಿಂದೆ ಓಡಿ ಹೋಗಿ ಮದುವೆ ಆಗಿದ್ದ ಜೋಡಿ

ಕೊಲೆಯಾದ ಹೇಮಂತ್ ಅಲಿಯಾಸ್ ಸ್ವಾಮಿಯ ಜೊತೆ ಆರೋಪಿ ಸಾಗರ್ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ.​ ಈ ವೇಳೆ ಇಂಜಿನಿಯರಿಂಗ್ ಓದುತ್ತಿದ್ದ ಸ್ವಾಮಿ ತಂಗಿ ಜೊತೆ ಪ್ರೇಮಾಂಕುರ ಆಗಿದ್ದು, 5 ವರ್ಷದಿಂದ ಪ್ರೀತಿಸುತ್ತಿದ್ದರು. ಬಳಿಕ ಹುಡುಗಿ ಮನೆಯವರ ವಿರೋಧದ ನಡುವೆಯು 15 ದಿನಗಳ ಹಿಂದೆ ಓಡಿ ಹೋಗಿ ಮದುವೆ ಕೂಡ ಆಗಿ, ನಂತರ ವಾಪಸ್ಸಾಗಿದ್ದರು. ಇದಾದ ಬಳಿಕ ಹುಡುಗಿ ರಿಟರ್ನ್​ ಹೊಡೆದಿದ್ದು, ಸಾಗರ್ ನನ್ನನ್ನು ಬಲವಂತವಾಗಿ ಮದುವೆ ಆಗಿದ್ದಾನೆಂದು ಆರೋಪಿಸಿ, ಪೊಲೀಸ್ ಠಾಣೆಯಲ್ಲೂ ಸಾಗರ್ ಬೇಡ ಎಂದಿದ್ದಳು.

ಇದನ್ನೂ ಓದಿ:ಜನರ ಸಮ್ಮುಖದಲ್ಲೇ ಯುವಕನನ್ನು ಅಟ್ಟಾಡಿಸಿಕೊಂಡು ಹೋಗಿ ಬರ್ಬರವಾಗಿ ಕೊಲೆ: ಬೆಚ್ಚಿಬೀಳಿಸುವ ಸಿಸಿಟಿವಿ ವಿಡಿಯೋ ವೈರಲ್

ಕಟ್ಟಿದ್ದ ತಾಳಿ ಕಿತ್ತು ಹಾಕಿದ್ದ ಸಹೋದರ ಸ್ವಾಮಿ

ಇನ್ನು ಮೃತ ಹೇಮಂತ್ ಅಲಿಯಾಸ್ ಸ್ವಾಮಿ ಸಾಗರ್​ ಕಟ್ಟಿದ್ದ ತಾಳಿಯನ್ನ ಕಿತ್ತು ಹಾಕಿದ್ದನು. ಇದರಿಂದ ಸಹೋದರ ಸ್ವಾಮಿ ಮೇಲೆ ಕೋಪಗೊಂಡಿದ್ದ ಸಾಗರ್​​ ಸ್ನೇಹಿತರ ಜೊತೆ ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದ. ಹೌದು ರಾತ್ರಿ ಬೈಕ್‌ನಲ್ಲಿ ಬರುತ್ತಿದ್ದ ಸ್ವಾಮಿಯನ್ನು ಸಾಗರ್ ತನ್ನ ಸ್ನೇಹಿತರಾದ ಪ್ರತಾಪ್ ಹಾಗೂ ಮಂಜು ಜೊತೆ ಸೇರಿ ಅಡ್ಡ ಹಾಕಿದ್ದ. ಈ ವೇಳೆ ಸ್ವಾಮಿ ಹಾಗೂ ಸಾಗರ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಇದರಿಂದ ಆಕ್ರೋಶಗೊಂಡ ಸಾಗರ್, ಸ್ವಾಮಿಗೆ ಚಾಕುವಿನಿಂದ ಇರಿದಿದ್ದ. ಈ ವೇಳೆ ಕೆಳಗೆ ಬಿದ್ದ ಸ್ವಾಮಿ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಬಳಿಕ ಸ್ಥಳಕ್ಕಾಗಮಿಸಿದ ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಸದ್ಯ ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ