ದಕ್ಷಿಣ ಕನ್ನಡ: ‘ಮ್ಯಾಂಗಲೋರ್’ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Mangalore International Ariport) ಎಂದು ದಾಖಲೆಗಳಲ್ಲಿರುವ ಹೆಸರನ್ನು ‘ಮಂಗಳೂರು’ (Manaluru) ಎಂದು ಬದಲಾವಣೆ ಮಾಡಿ ವಿಮಾನ ನಿಲ್ದಾಣ ಪ್ರಾಧಿಕಾರ ಆದೇಶ ಹೊರಡಿಸಿದೆ. ವಿಮಾನ ನಿಲ್ದಾಣದಲ್ಲಿರುವ ಸ್ವಾಗತ ಕಮಾನುಗಳಲ್ಲಿ ಈಗಾಗಲೇ ‘ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಬರೆಯಲಾಗಿದೆ. ಆದರೆ, ಪ್ರಾಧಿಕಾರದ ದಾಖಲೆಗಳಲ್ಲಿ ಮಾತ್ರ ‘ಮ್ಯಾಂಗಲೋರ್’ ಎಂದೇ ಇತ್ತು. ಈಗ ಅದನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬದಲಾವಣೆ ಮಾಡುವ ಮುಂಕಾತರ ಅಧಿಕೃತವಾಗಿದೆ.
ಮಂಗಳೂರು ನಗರದಲ್ಲಿಯೂ ‘ಮಂಗಳೂರು’ ಪದ ಬಳಕೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಹಾಗೂ ದೇಶ-ವಿದೇಶದ ಪಾಲುದಾರರ ನಡುವಿನ ವ್ಯವಹಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಸರು ಬದಲಾವಣೆ ಮಾಡಲಾಗಿದೆ. ಡಿ.1ರಿಂದ ಹೊಸ ಹೆಸರು ಜಾರಿಗೆ ಬರಲಿದೆ.
ಕೆಂಪೇಗೌಡ ಏರ್ಪೋಟ್ಗೆ ಸಿಗಲಿದೆ ಮತ್ತೊಂದು ಗರಿ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣ (Kempegowda International Airport) ಅಂದ್ರೆ ಹಚ್ಚ ಹಸಿರಿನ ಗ್ರೀನ ರಿ ಜೊತೆಗೆ ವಿಶಾಲವಾಗಿರೂ ಸುಂದರ ಏರ್ಪೋಟ್ ನೆನಪಾಗ್ತಿತ್ತು. ಆದರೆ ಇನ್ನೂ ಕೆಲವೆ ದಿನಗಳಲ್ಲಿ ಏರ್ಪೋಟ್ ಅಂದ್ರೆ ಹೀಗೂ ಇರುತ್ತಾ ಅನ್ನೂ ರೀತಿ ನೋಡುಗರೆ ನಿಬ್ಬೆರಗಾಗುವಂತೆ ಅತ್ಯಾಧುನಿಕ ಟೆಕ್ನಾಲಜಿಯ ಹೊಸ ಟರ್ಮಿನಲ್ ಉದ್ಘಾಟನೆಯಾಗಲಿದೆ.
ಇಷ್ಟುದಿನ ಹಚ್ಚ ಹಸಿರಿನ ಗಾರ್ಡನ್ ಮತ್ತು ಹೈ ಪೈ ಟೆಕ್ನಾಲಜಿಯೊಂದಿಗೆ ಹಲವು ಪ್ರಶಸ್ತಿಗಳನ್ನ ತನ್ನ ಮುಡಿಗೇರಿಸಿಕೊಂಡಿದ್ದ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣ ಇನ್ನು ಕೆಲವೆ ದಿನಗಳಲ್ಲಿ ಕಣ್ಮನ ಸೆಳೆಯುವಂತಹ ಅತ್ಯಾಧುನಿಕ ಸೌಲಭ್ಯಗಳುಳ್ಳ ಹೊಸ ಟರ್ಮಿನಲ್ ಅನ್ನ ಪ್ರಯಾಣಿಕರ ಸೇವೆಗೆ ಮುಕ್ತಗೊಳಿಸುತ್ತಿದೆ. 13 ಸಾವಿರ ಕೋಟಿ ವೆಚ್ಚದಲ್ಲಿ ಹೊಸ 2 ನೇ ಟರ್ಮಿನಲ್ ಮತ್ತು ಹೊಸ ರನ್ ವೇ ಇದೀಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣದಲ್ಲಿ ಉದ್ಘಾಟನೆಗೆ ಸಿದ್ದವಾಗಿದೆ. ಮುಂದಿನ ತಿಂಗಳು ನವಂಬರ್ 11 ಕ್ಕೆ ಪ್ರಧಾನಿ ನರೇಂದ್ರ ಮೋದಿ ಹೊಸ 2ನೇ ಟರ್ಮಿನಲನ್ನು ಉದ್ಘಾಟನೆ ಮಾಡಲಿದ್ದಾರೆ. ಪ್ರಸ್ತುತವಿರುವ ಮೊದಲನೆ ಟರ್ಮಿನಲ್ನ ಎಡ ಭಾಗದಲ್ಲಿ ಇದೀಗ ಹೊಸ ಟರ್ಮಿನಲ್ ನಿರ್ಮಾಣವಾಗಿದ್ದು ಹೊರ ಭಾಗದ ಅಂತಿಮ ಘಟ್ಟದ ಕಾಮಗಾರಿ ಕೆಲಸ ತ್ವರಿತ ಗತಿಯಲ್ಲಿ ನಡೆಯುತ್ತಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣದ ಒಂದನೆ ಟರ್ಮಿನಲ್ನಲ್ಲಿ ವಾರ್ಷಿಕ 16 ಮಿಲಿಯನ್ ಪ್ರಯಾಣಿಕರು ಸಂಚಾರ ಮಾಡುತ್ತಿದ್ದು, ಇದೀಗ ಎರಡನೆ ಟರ್ಮಿನಲ್ನಲ್ಲಿ ವಾರ್ಷಿಕ 25 ಮಿಲಿಯನ್ ಪ್ರಯಾಣಿಕರು ಸಂಚಾರ ಮಾಡಲಿದ್ದಾರೆ. ಹೊಸ ಗಾರ್ಡನ್ ಟರ್ಮಿನಲ್ ಇದಾಗಿದ್ದು ಒಳ ಭಾಗದಲ್ಲಿ ನೇತಾಡುವ ಹಚ್ಚ ಹಸಿರಿನ ಗಿಡಗಳ ಜೊತೆಗೆ ನಿರ್ಮಾಣಮಾಡಿದರೂ, ಕೃತಕ ವಾಟರ್ ಪಾಲ್ಸ್ ಪ್ರಯಾಣಿಕರನ್ನು ಆಕರ್ಷಿಸಲಿದೆ. ಅಲ್ಲದೆ ನೂತನ ಟರ್ಮಿನಲ್ ನಲ್ಲಿ 66 ವಿಮಾನಗಳನ್ನ ಏಕಕಾಲದಲ್ಲಿ ನಿಲ್ಲಿಸಬಹುದಾದಂತ ವ್ಯವಸ್ಥೆಯನ್ನು ಮಾಡಲಾಗಿದ್ದು ಮಳೆ ಬಿಸಿಲಿನ ನಡುವೆಯು 27 ವಿಮಾನಗಳಿಗೆ ಏರೋ ಬ್ರಿಡ್ಸ್ ಮೂಲಕ ಟರ್ಮಿನಲ್ ನಿಂದ ವಿಮಾನದ ಒಳಕ್ಕೆ ಪ್ರಯಾಣಿಕರು ಹೋಗಬಹುದಾಗಿದೆ. ಹೊಸ ಟರ್ಮಿನಲನ್ನು ಎರಡು ಅಂತಸ್ತುಗಳಲ್ಲಿ ನಿರ್ಮಾಣ ಮಾಡಿದ್ದು ಮೊದಲನೆ ಮಹಡಿಯಲ್ಲಿ ಡಿಪಾರ್ಚರ್ (ನಿರ್ಗಮನ) ಮತ್ತು ಕೆಳ ಮಹಡಿಯಲ್ಲಿ ಅರೈವಲ್ (ಆಗಮನ) ಗೆ ಮೀಸಲಿಡಲಾಗಿದೆ. ಏರ್ಪೋಟ್ ಒಳಗಡೆಗೆ ಎಂಟ್ರಿಯಾಗಲು 13 ಗೇಟ್ ಮತ್ತು 90 ಚೆಕ್ ಇನ್ ಗೇಟ್ಸ್ಗಳನ್ನು ಮಾಡಲಾಗಿದ್ದು ಪ್ರಯಾಣಿಕರು ಯಾವುದೆ ಹರಸಾಹಸ ಪಡದೆ ಸುಲಭವಾಗಿ ಏರ್ಪೋಟ್ ನಿಂದ ಬೇರೆಡೆಗೆ ಸಂಚರಿಸುವಂತಹ ವ್ಯವಸ್ಥೆಯನ್ನು ಮಾಡಲಾಗಿದ್ದು ಹೊಸ ಟರ್ಮಿನಲ್ ಹಲವು ವಿಶೇಷತೆಗಳಿಂದಾಗಿ ಸಾಕಷ್ಟು ಕುತೂಹಲ ಕೆರಳಿಸಿದೆ.
ಒಟ್ಟಾರೆ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡು ಇರೋದರಲ್ಲೇ ಬೆಸ್ಟ್ ಸರ್ವಿಸ್ ನೀಡುತ್ತಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಥಾಣ ಶೀಘ್ರದಲ್ಲಿ ಮತ್ತೊಂದು ಗರಿಯನ್ನು ತನ್ನ ತಕ್ಕೆಗೆ ಹಾಕಿಕೊಳ್ಳಲಿದೆ. ಇನ್ನೂ ಹೊಸ ಟರ್ಮಿನಲ್ನ ವಿಡಿಯೋಗಳನ್ನು ನೋಡಿದ ಜನರಿಗೆ ಹೊಸ ಟರ್ಮಿನಲ್ ನೋಡುವ ಕಾತುರವನ್ನ ಮತ್ತಷ್ಟು ಹೆಚ್ಚಿಸಿದ್ದು ನವೆಂಬರ್ 11 ರ ನಂತರ ಹೊಸ ಟರ್ಮಿನಲ್ ನಲ್ಲಿ ಓಡಾಡುವ ಅವಕಾಶ ಸಿಲಿಕಾನ್ ಸಿಟಿ ಜನರಿಗೆ ಸಿಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Fri, 4 November 22