ಉಜಿರೆ ಸೌಜನ್ಯ ಅತ್ಯಾಚಾರ, ಕೊಲೆ ಕೇಸ್: 2012 ಅ.9ರಿಂದ 2023 ಜೂ.16ರ ವರೆಗೆ ಏನೆಲ್ಲ ಆಯ್ತು? ಇಲ್ಲಿದೆ ಟೈಮ್​ಲೈನ್

|

Updated on: Jun 16, 2023 | 5:43 PM

Sowjanya Murder Case Timeline: ಉಜಿರೆಯ ಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 11 ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ ಸಿಬಿಐ ಕೋರ್ಟ್ ಅಂತಿಮ ತೀರ್ಪು ನೀಡಿದೆ. 2012ರ ಅ.9ರಿಂದ 2023ರ ಜೂ.16ರ ವರೆಗೆ ಏನೆಲ್ಲ ಆಯ್ತು? ಇಲ್ಲಿದೆ ನೋಡಿ ಟೈಮ್​ಲೈನ್

ಉಜಿರೆ ಸೌಜನ್ಯ ಅತ್ಯಾಚಾರ, ಕೊಲೆ ಕೇಸ್: 2012 ಅ.9ರಿಂದ 2023 ಜೂ.16ರ ವರೆಗೆ ಏನೆಲ್ಲ ಆಯ್ತು? ಇಲ್ಲಿದೆ ಟೈಮ್​ಲೈನ್
Follow us on

ಬೆಂಗಳೂರು/ಮಂಗಳೂರು: ಇಡೀ ರಾಜ್ಯವೇ ಬೆಚ್ಚಿಬೀಳಿಸಿದ್ದ ಉಜಿರೆಯ ಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ(Sowjanya Murder Case )ಸಂಬಂಧಿಸಿದಂತೆ 11 ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ ಸಿಬಿಐ ಕೋರ್ಟ್ ಅಂತಿಮ ತೀರ್ಪು ನೀಡಿದೆ. ಆರೋಪಿ ಸಂತೋಷ್‌ ರಾವ್‌ರನ್ನು ಖುಲಾಸೆಗೊಳಿಸಿ ಬೆಂಗಳೂರು ಸಿಬಿಐ ನ್ಯಾಯಾಲಯ (Bengaluru cbi court) ಇಂದು(ಜೂನ್ 16) ಮಹತ್ವದ ತೀರ್ಪು ನೀಡಿದೆ. ಸಾಕ್ಷ್ಯಾಧಾರಗಳ ಕೊರತೆ ಕಾರಣಕ್ಕೆ ಆರೋಪಿ ಸಂತೋಷ್‌ ರಾವ್​ನನ್ನು ನಿರ್ದೋಷಿ ಎಂದು ನ್ಯಾಯಮೂರ್ತಿ ಸಿಬಿ ಸಂತೋಷ್‌ ಆದೇಶ ಹೊರಡಿಸಿದ್ದಾರೆ. ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ 2012ರ ಅ.9ರಂದು ಉಜಿರೆಯ ಎಸ್‌ಡಿಎಂ ಕಾಲೇಜಿನಿಂದ ಮನೆಗೆ ತೆರಳುವಾಗ ನಾಪತ್ತೆಯಾಗಿದ್ದಳು. ಮರುದಿನ ರಾತ್ರಿ ಮಣ್ಣಸಂಕ ಬಳಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ವರ್ಷಗಳ ಸುದೀರ್ಘ ವಿಚಾರಣೆ ಬಳಕಿಕ ಸಿಬಿಐ ಕೋರ್ಟ್ ಅಂತಿ ತೀರ್ಪು ಪ್ರಕಟಿಸಿದೆ. ಹಾಗಾದ್ರೆ, 11 ವರ್ಷ ಅಂದರೆ 2012ರ ಅ.9ರಿಂದ 2023ರ ಜೂನ್ 16ರ ವರಗೆ ಪ್ರಕರಣದ ಟೈಮ್​ಲೈನ್​ ಇಲ್ಲಿದೆ ನೋಡಿ.

ಇದನ್ನೂ ಓದಿ: ಉಜಿರೆ ಸೌಜನ್ಯ ಅತ್ಯಾಚಾರ, ಕೊಲೆ ಕೇಸ್: ಸಂತೋಷ್ ರಾವ್ ನಿರ್ದೋಷಿ, 11 ವರ್ಷ ಬಳಿಕ ತೀರ್ಪು ನೀಡಿದ ಸಿಬಿಐ ಕೋರ್ಟ್

ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಆಗಿದ್ದ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. 2012ರ ಅಕ್ಟೋಬರ್‌ 10 ರಂದು ಧರ್ಮಸ್ಥಳದ ಬಳಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸರು ಸರಿಯಾಗಿ ತನಿಖೆ‌ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಹೀಗಾಗಿ ಹಲವು ಹೋರಾಟಗಳ ಬಳಿಕ ಪ್ರಕರಣವನ್ನುಸಿಬಿಐಗೆ ಒಪ್ಪಿಸಲಾಗಿತ್ತು.

ಟೈಮ್​ಲೈನ್​ ಹೀಗಿದೆ

  1. 9/10/2012 ರಂದು ಸಂಜೆ 4:15 ಕ್ಕೆ ನಾಪತ್ತೆ
  2.  9/10/2012 ರಂದು ರಾತ್ರಿ 10:30 ಕ್ಕೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲು
  3.  FIR ನಂಬರ್ 250/2012
  4.  10/10/2012 ರಂದು 12:30 ಕ್ಕೆ ಸೌಜನ್ಯ ಶವ ಧರ್ಮಸ್ಥಳದ ಮಣ್ಣಸಂಖದಲ್ಲಿ ಪತ್ತೆ.
  5.  ಬೆಳ್ತಂಗಡಿ ಪೊಲೀಸರು ನಾಪತ್ತೆ ಪ್ರಕರಣವನ್ನು ರೇಪ್ & ಮಾರ್ಡರ್ ಅಗಿ 376/302 ಅಡಿಯಲ್ಲಿ ಪ್ರಕರಣ ದಾಖಲಾಯಿಸಿ ಬೆಳ್ತಂಗಡಿ ಕೋರ್ಟ್ ಗೆ ವರದಿ.
  6.  11/10/2012 ರಂದು ಸಂಜೆ 6:30 – 7 ಗಂಟೆಗೆ ಆರೋಪಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಹೌಸಿಂಗ್ ಕಾಲೋನಿ ನಿವಾಸಿ ಸುಧಾಕರ್ ರಾವ್ ಅವರ ಪುತ್ರ ಸಂತೋಷ್ ರಾವ್(38) ಎಂಬಾತ ಬಾಹುಬಲಿ ಬೆಟ್ಟದ ಗುಡ್ಡದಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಬೆಳ್ತಂಗಡಿ ಪೊಲೀಸರ ವಶಕ್ಕೆ.
  7.  ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಬಾಸ್ಕರ್ ರೈ ಮತ್ತು ಪಿಎಸ್ಐ ಯೋಗೀಶ್ ಕುಮಾರ್ ಬಿಸಿ ತಂಡದಿಂದ ತನಿಖೆ
  8.  ಆರೋಪಿ ಸಂತೋಷ್ ರಾವ್ ನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ಮಂಗಳೂರು ಸಬ್ ಜೈಲು ಸೇರುತ್ತಾನೆ.
  9.  ಕೆಲ ಸಮಯ ಬೆಳ್ತಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದರು
  10.  22/11/2012 ರಂದು ರಾಜ್ಯ ಸರಕಾರ ಆದೇಶ ಸಂಖ್ಯೆ HD343PCB/2012 ಪ್ರಕಾರ CID ತನಿಖೆಗೆ ಆದೇಶ.
  11.  CID ತನಿಖೆ ಮಾಡುತ್ತಿದ್ದಾಗ 6/11/2013 ರಂದು ರಾಜ್ಯ ಸರಕಾರ ಆದೇಶ ಸಂಖ್ಯೆ HD6COD /2013 ರ ಪ್ರಕಾರ CBI ತನಿಖೆಗೆ ಆದೇಶ.
  12.  CBI ಅಧಿಕಾರಿಗಳು CC 203/2016 ರ ಎಫ್ಐಆರ್ ಮಾಡಿ ತನಿಖೆ ಆರಂಭ.
  13.  26/10/2017 ರಂದು CBI ಅಧಿಕಾರಿಗಳು ಆರೋಪಿ ಸಂತೋಷ್ ರಾವ್ ವಿರುದ್ಧ ಕೋರ್ಟ್ ಗೆ ಜಾರ್ಜ್ ಶೀಟ್ ಸಲ್ಲಿಕೆ
  14.  ಸಿಬಿಐ ಕೋರ್ಟ್ ಒಟ್ಟು 40 ಸಾಕ್ಷಿಗಳ ವಿಚಾರಣೆ.
  15.  ಎರಡು ವರ್ಷ ಮಂಗಳೂರು ಸೆಷನ್ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ.
  16.  ನಂತರ ಬೆಂಗಳೂರು 50 ನೇ ಅಡಿಷನಲ್ ಸಿಟಿ ಸಿವಿಲ್& ಸೆಷನ್ ಜಡ್ಜ್ ಕೋರ್ಟ್‌ ನಲ್ಲಿ ವಿಚಾರಣೆ ಮುಂದುವರಿಕೆ‌.
  17.  ಉದಯ ಜೈನ್ ,ಮಲ್ಲಿಕ್ ಜೈನ್ , ದೀರಜ್ ಜೈನ್ ಮೂವರು CBI ಕೋರ್ಟ್ ಗೆ ವಕೀಲರ ಮೂಲಕ ಹೋಗಿ ಬೇಕಾದ ತನಿಖೆ ಹಾಗೂ ಮಂಪರ್ ಪರೀಕ್ಷೆ , ಪೊಲಿಯೋಗ್ರಾಫಿ ಮುಂತಾದ ಪರೀಕ್ಷೆ ಮಾಡಿ ಆರೋಪದಿಂದ ಮುಕ್ತಿ ನೀಡಲು ಅರ್ಜಿ ಸಲ್ಲಿಕೆ.
  18.  ಸಿಬಿಐ ಕೋರ್ಟ್ ಮೂವರಿಗೂ ಚೆನೈ ನಲ್ಲಿ ಪೊಲಿಯೋಗ್ರಾಫಿ , ರಕ್ತ ಪರೀಕ್ಷೆ, ಮೊಬೈಲ್ ಡಿಟೈಲ್ಸ್ , ಬ್ರೈನ್ ಮ್ಯಾಪಿಂಗ್ ಮುಂತಾದ ಪರೀಕ್ಷೆ ಮಾಡಲು ಅನುಮತಿ.
  19. ಕೋರ್ಟ್ ಆದೇಶದಂತೆ ಚೆನೈನಲ್ಲಿ ಪರೀಕ್ಷೆ ಮಾಡಿ ಸಿಬಿಐ ಕೋರ್ಟ್ ಗೆ 25/03/2015 ರಂದು ವರದಿ ಸಲ್ಲಿಕೆ‌‌
  20.  ಕೊಲೆಯಾದ ಸೌಜನ್ಯಳ ತಂದೆ ಚಂದಪ್ಪ ಗೌಡರು ಮೂರು ಜನರಾದ ದೀರಜ್ ಜೈನ್, ಉದಯ ಜೈನ್ , ಮಲ್ಲಿಕ್ ಜೈನ್ ವಿರುದ್ಧ ಪ್ರಕರಣ ದಾಖಲಾಯಿಸಿ ಸಹ ಆರೋಪಿ ಮಾಡಲು ಸಿಬಿಐ ಕೋರ್ಟ್ ಗೆ 7/2/2017 ರಂದು ವಕೀಲರಾದ ಅಮನ್ ಕೊರಾಯ ಮೂಲಕ ಅರ್ಜಿ ಸಲ್ಲಿಕೆ.
  21.  ಉದಯ ಜೈನ್ , ಮಲ್ಲಿಕ್ ಜೈನ್ , ದೀರಜ್ ಜೈನ್ ಚಂದಪ್ಪ ಗೌಡರ ಅರ್ಜಿಯ ವಿರುದ್ಧ ಮೂವರ ಪರವಾಗಿ ವಕೀಲ ಪಿಪಿ ಹೆಗ್ಡೆ ಮೂಲಕ CRP ನಂಬರ್ 1928/2017 ನಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಇದು 27/01/2021 ಚಂದಪ್ಪ ಗೌಡರ ಅರ್ಜಿ ವಜಾ.
  22. ಆರೋಪಿ ಸಂತೋಷ್ ರಾವ್ 6 ಕ್ಕೂ ಹೆಚ್ಚು ಭಾರಿ ನ್ಯಾಯಾಲಯಕ್ಕೆ ಹಾಜರಾಗಿಲ್ಲ.
  23.  16-06-2023 ರಂದು ಪ್ರಕರಣದ ತೀರ್ಪುನ್ನು ಸಿಬಿಐ ಕೋರ್ಟ್ ಪ್ರಕಟಿಸಿದೆ.