ನಳಿನ್ ಕುಮಾರ್ ಕಟೀಲ್ ಮನೆಯಲ್ಲಿ ಗೌಪ್ಯ ಹೋಮ: ವ್ಯಾಪಕ ಚರ್ಚೆಗೆ ಗ್ರಾಸವಾದ ಬಿಜೆಪಿ ರಾಜ್ಯಾಧ್ಯಕ್ಷರ ನಡೆ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಪುತ್ತೂರು ಸಮೀಪದ ಸವಣೂರು ಗ್ರಾಮದಲ್ಲಿರುವ ಮನೆಯಲ್ಲಿ ಗೌಪ್ಯವಾಗಿ ವಿಶೇಷ ಹೋಮ ಮಾಡಿದ್ದಾರೆ. ಮನೆಯ ಪ್ರವೇಶ ದ್ವಾರಗಳನ್ನು ಬಂದ ಮಾಡಿಸಿದ್ದು, ಯಾರೂ ಬಾರದಂತೆ ಎಚ್ಚರಿಕೆ ವಹಿಸಿದ್ದಾರೆ. ಸದ್ಯ ಇದು ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.
ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರ ಪುತ್ತೂರು ಸಮೀಪದ ಸವಣೂರು ಗ್ರಾಮದಲ್ಲಿರುವ ಮನೆಯಲ್ಲಿ ವಿಶೇಷ ಹೋಮ ಮಾಡಲಾಗಿದೆ. ಜೂ.11ರಂದು ಆರಂಭವಾಗಿರುವ ಈ ಹೋಮ ಜೂ.18ರವರೆಗೆ ನಡೆಯಲಿದೆ. ವಿದ್ವಾನ್ ಬಾಲಕೃಷ್ಣ ಕಾರಂತ್ ನೇತೃತ್ವದಲ್ಲಿ ವಿಶೇಷ ಹೋಮ ಹವನ ನಡೆಯುತ್ತಿದ್ದು, ಯಾರನ್ನೂ ಕರೆದಿಲ್ಲ. ಮನೆಯ ಪ್ರವೇಶ ದ್ವಾರಗಳನ್ನು ಬಂದ ಮಾಡಿಸಿರುವ ನಳಿನ್ ಕುಮಾರ್ ಕಟೀಲ್, ಮನೆ ಕಡೆ ಯಾರೂ ಬಾರದಂತೆ ಎಚ್ಚರಿಕೆ ವಹಿಸಿದ್ದಾರೆ.
ಸದ್ಯ 9 ದಿನಗಳ ಹೋಮ ಹವನದ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿದೆ. ಮತ್ತೊಂದೆಡೆ ರಾಜಕೀಯ ಉದ್ದೇಶದಿಂದ ಹೋಮ ನಡೆಸಲಾಗುತ್ತಿದೆ ಎಂದು ಚರ್ಚೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಮೀಟರ್ ರೀಡರ್ ಯಡವಟ್ಟು: ಏಳು ಲಕ್ಷ ರೂ. ಕರೆಂಟ್ ಬಿಲ್ ನೋಡಿ ಶಾಕ್ ಆದ ಮಂಗಳೂರಿನ ವ್ಯಕ್ತಿ
ಈ ಬಾರಿ ಅವರಿಗೆ ಲೋಕಸಭೆ ಟಿಕೆಟ್ ನೀಡಬಾರದು ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಇದೆಲ್ಲದರ ನಡುವೆ ಹೋಮ ಮಾಡಲಾಗುತ್ತಿದೆ. ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಸ್ಥಾನಕ್ಕೆ ಯಾವುದೇ ಕುತ್ತು ಬಾರದಿಲಿ ಮತ್ತು ಲೋಕಸಭೆ ಟಿಕೆಟ್ ಕೈ ತಪ್ಪದಿರಲಿ ಎಂಬ ಕಾರಣಕ್ಕಾಗಿ ಗೌಪ್ಯವಾಗಿ ಹೋಮ ಹವನ ಮಾಡುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.