AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೀಟರ್ ರೀಡರ್ ಯಡವಟ್ಟು: ಏಳು ಲಕ್ಷ ರೂ. ಕರೆಂಟ್ ಬಿಲ್​ ನೋಡಿ ಶಾಕ್​ ಆದ ಮಂಗಳೂರಿನ ವ್ಯಕ್ತಿ

ಮೀಟರ್ ರೀಡರ್ ಯಡವಟ್ಟಿನಿಂದ ಪ್ರತಿ ತಿಂಗಳು 3 ಸಾವಿರ ರೂಪಾಯಿ ಬರುತ್ತಿದ್ದ ಕರೆಂಟ್​ ಬಿಲ್​ ಏಕಾಏಕಿ 7,71,072 ರೂ. ಬಂದಿದ್ದು ಮಂಗಳೂರಿನ ಓರ್ವ ವ್ಯಕ್ತಿಗೆ ನಿಜಕ್ಕೂ ಶಾಕ್​ ಆಗಿದ್ದಾರೆ. ತಪ್ಪು ಸರಿಪಡಿಸಿ ಹೊಸದಾಗಿ 2,833 ರೂ. ವಿದ್ಯುತ್ ಬಿಲ್​ನ್ನು ಮೆಸ್ಕಾಂ ಅಧಿಕಾರಿಗಳು ನೀಡಿದ್ದಾರೆ. ​

ಮೀಟರ್ ರೀಡರ್ ಯಡವಟ್ಟು: ಏಳು ಲಕ್ಷ ರೂ. ಕರೆಂಟ್ ಬಿಲ್​ ನೋಡಿ ಶಾಕ್​ ಆದ ಮಂಗಳೂರಿನ ವ್ಯಕ್ತಿ
ಕರೆಂಟ್​ ಬಿಲ್​
ಗಂಗಾಧರ​ ಬ. ಸಾಬೋಜಿ
|

Updated on: Jun 15, 2023 | 6:30 PM

Share

ಮಂಗಳೂರು: ಪ್ರತಿ ತಿಂಗಳು 3 ಸಾವಿರ ರೂಪಾಯಿ ಬರುತ್ತಿದ್ದ ಕರೆಂಟ್​ ಬಿಲ್ (Electricity Bills)​ ಏಕಾಏಕಿ 7,71,072 ರೂ. ಬಂದಿದ್ದು ಕರೆಂಟ್​ ಬಿಲ್​ ನೋಡಿದ ಮಂಗಳೂರಿನ ಓರ್ವ ವ್ಯಕ್ತಿಗೆ ನಿಜಕ್ಕೂ ಶಾಕ್​ ಹೊಡೆದಂತಾಗಿದೆ. ​ಮಂಗಳೂರು ಹೊರವಲಯದ ಉಳ್ಳಾಲ ಬೈಲುನಲ್ಲಿರುವ ಸದಾಶಿವ ಆಚಾರ್ಯ ಎಂಬುವವರು ಏಳು ಲಕ್ಷ ಕರೆಂಟ್ ಬಿಲ್​ ಕಂಡು ದಂಗಾಗಿದ್ದಾರೆ. ಮೀಟರ್ ರೀಡರ್ ಯಡವಟ್ಟಿನಿಂದ ಈ ರೀತಿ ಬಿಲ್​ ಬಂದಿದ್ದೆ ಎನ್ನಲಾಗುತ್ತಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಮೆಸ್ಕಾಂ ಮೀಟರ್ ರೀಡರ್ ಉಡಾಫೆ ಉತ್ತರ ನೀಡಿ ತೆರಳಿದ್ದಾರೆ. ​

99,338 ಯೂನಿಟ್​ ವಿದ್ಯುತ್ ಬಳಸಿದ್ದೀರಿ ಎಂದು ಮೀಟರ್ ರೀಡರ್​ ಹೇಳಿದ್ದಾರೆ.​ ತಕ್ಷಣ ಮೆಸ್ಕಾಂ ಉಪ ವಿಭಾಗದ ಕಚೇರಿ ಸಂಪರ್ಕಿಸಿದ್ದ ಆಚಾರ್ಯ, ಮೀಟರ್ ರೀಡರ್​ ಎಡವಟ್ಟವನ್ನು ಮೆಸ್ಕಾಂ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ತಪ್ಪು ಸರಿಪಡಿಸಿ ಹೊಸದಾಗಿ 2,833 ರೂ. ವಿದ್ಯುತ್ ಬಿಲ್​ನ್ನು ಮೆಸ್ಕಾಂ ಅಧಿಕಾರಿಗಳು ನೀಡಿದ್ದಾರೆ.

ಇದನ್ನೂ ಓದಿ: ವಿದ್ಯುತ್ ಬಿಲ್ ಪಾವತಿಗೆ ಗ್ರಾಮಸ್ಥರ ನಿರಾಕರಣೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯಲ್ಲ ಎಂದ ಜನ, ವಿಡಿಯೋ ವೈರಲ್

ನಾನು ಯೋಜನೆಯ ಫಲಾನುಭವಿ: ಕರೆಂಟ್ ಬಿಲ್ ಕಟ್ಟುವುದಿಲ್ಲ

ಇತ್ತೀಚೆಗೆ ಉಡುಪಿಯ ಪೆರಂಪಳ್ಳಿ ನಿವಾಸಿ ವಾಸುದೇವ ಭಟ್ ಎಂಬುವವರು ಕರೆಂಟ್ ಬಿಲ್ ಕಟ್ಟುವುದಿಲ್ಲ ಎಂದು ಮನೆಯಲ್ಲಿ ಬೋರ್ಡ್ ಅಳವಡಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ ನಾನು ವಿದ್ಯುತ್ ಬಿಲ್ ಕಟ್ಟೋದಿಲ್ಲಾ. ನಾನು ತಿಂಗಳಿಗೆ 200 ಯೂನಿಟ್ ಖರ್ಚು ಮಾಡುತ್ತಿಲ್ಲ. ನಾನು ಫಲಾನುಭವಿ ಆಗಿರುವುದರಿಂದ ಮೀಟರ್ ಬೋರ್ಡಿನಲ್ಲಿ ಫಲಕ ಹಾಕಿದ್ದೇನೆ ಎಂದಿದ್ದರು.

ನಾನು ಇಲ್ಲದಿರುವಾಗ ಮೆಸ್ಕಾಂನವರು ಬಂದರೆ ಅವರಿಗೆ ಗೊತ್ತಾಗಲಿ ಎಂದು ಬೋರ್ಡ್ ಅಳವಡಿಸಿದ್ದೇನೆ. ನನಗೆ ಮೆಸ್ಕಾಂನವರು ಕರೆಂಟ್ ಬಿಲ್ ಕೊಡಬೇಕಾಗಿಲ್ಲ. ನಾನು ಸರಕಾರಕ್ಕೆ ತೆರಿಗೆ ಕಟ್ಟುತ್ತಿರುವುದರಿಂದ ಈ ಯೋಜನೆಗೆ ಅರ್ಹ ಫಲಾನುಭವಿ ಆಗಿದ್ದೇನೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಉಡುಪಿ: ಕರೆಂಟ್ ಬಿಲ್ ಕೊಡಬೇಡಿ, ನಾವು ಕಟ್ಟಲ್ಲ; ಮನೆ ಮುಂದೆ ಬೋರ್ಡ್ ಅಳವಡಿಕೆ

ಉಡುಪಿಯ ಪೆರಂಪಳ್ಳಿ ನಿವಾಸಿ ವಾಸುದೇವ ಭಟ್ ಅವರು ತಮ್ಮ ಮನೆಯ ಮೀಟರ್ ಬೋರ್ಡ್​ಗೆ ಚೀಟಿ ಅಂಟಿಸಿದ್ದರು. ಅದರಲ್ಲಿ ಮೆಸ್ಕಾಂನವರೆ ಕ್ಷಮಿಸಿ, ಜೂನ್ ತಿಂಗಳಿಂದ ನಮಗೆ ಕರೆಂಟ್ ಬಿಲ್ ಕೊಡಬೇಡಿ. ನಾವು ಬಿಲ್ ಕಟ್ಟಲ್ಲ ಎಂದು ಬರೆದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.