ಉಜಿರೆ ಸೌಜನ್ಯ ಅತ್ಯಾಚಾರ, ಕೊಲೆ ಕೇಸ್: ಸಂತೋಷ್ ರಾವ್ ನಿರ್ದೋಷಿ, 11 ವರ್ಷ ಬಳಿಕ ತೀರ್ಪು ನೀಡಿದ ಸಿಬಿಐ ಕೋರ್ಟ್

|

Updated on: Jun 16, 2023 | 5:32 PM

ಉಜಿರೆಯ ಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 11 ವರ್ಷಗಳ ಸುಧೀರ್ಘ ವಿಚಾರಣೆ ಬಳಿಕ ಸಿಬಿಐ ಕೋರ್ಟ್ ಅಂತಿಮ ತೀರ್ಪು ನೀಡಿದೆ.

ಉಜಿರೆ ಸೌಜನ್ಯ ಅತ್ಯಾಚಾರ, ಕೊಲೆ ಕೇಸ್: ಸಂತೋಷ್ ರಾವ್ ನಿರ್ದೋಷಿ, 11 ವರ್ಷ ಬಳಿಕ ತೀರ್ಪು ನೀಡಿದ ಸಿಬಿಐ ಕೋರ್ಟ್
Follow us on

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಸೌಜನ್ಯ  ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ(sowjanya rape and murder case ) ಸಂಬಂಧಿಸಿದಂತೆ  ಬೆಂಗಳೂರು ಸಿಬಿಐ ನ್ಯಾಯಾಲಯ (Bengaluru cbi court )ಮಹತ್ವದ ತೀರ್ಪು ನೀಡಿದ್ದು,  ಆರೋಪಿ ಸಂತೋಷ್‌ ರಾವ್‌ರನ್ನು ಖುಲಾಸೆಗೊಳಿಸಿ ಇಂದು(ಜೂನ್ 16) ತೀರ್ಪು ನೀಡಿದೆ. ಸಾಕ್ಷ್ಯಾಧಾರಗಳ ಕೊರತೆ ಕಾರಣಕ್ಕೆ ಆರೋಪಿ ಸಂತೋಷ್‌ ರಾವ್​ನನ್ನು ನಿರ್ದೋಷಿ ಎಂದು ಬೆಂಗಳೂರು ಸಿಬಿಐ ಕೋರ್ಟ್‌ ನ್ಯಾಯಮೂರ್ತಿ ಸಿಬಿ ಸಂತೋಷ್‌ ಆದೇಶ ಹೊರಡಿಸಿದ್ದಾರೆ. ಬರೋಬ್ಬರಿ 11 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಸಿಬಿಐ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದೆ.

ಸಂತೋಷ್ ರಾವ್ ಪರ ವಾದ ಮಾಡಿದ್ದ ವಕೀಲ ಹೇಳಿದ್ದೇನು?

ಅತ್ಯಾಚಾರ ಹಾಗೂ ಕೊಲೆಯಾದ ವೇಳೆ ಆರೋಪಿ ಸ್ಥಳದಲ್ಲಿ ಇರಲಿಲ್ಲ. ಸೌಜನ್ಯ ಮೃತ ದೇಹ ಸತ್ತಾಗ ಮಳೆ ಇತ್ತು. ಆದರೆ ಯಾರು ಪತ್ತೆಯಾಗಿರಲಿಲ್ಲ ಎರಡು ದಿನ ಬಳಿಕ ಆರೋಪಿ ಬಂಧನ ಮಾಡಲಾಗಿತ್ತು. 50 ಮೀಟರ್ ಅಂತರದಲ್ಲಿ ಟೆಂಟ್ ನಲ್ಲಿ ವಾಸಮಾಡಿದ್ದ ಅನುಮಾನ ವ್ಯಕ್ತಪಡಿಸಿ ಬಂಧಿಸಿದ್ದರು. ಪ್ರಕೃತಿ ಚಿಕಿತ್ಸಾಲಯ ಸಂಬಂಧಿಸಿದಂತೆ ಸಿಸಿಟಿವಿ ಸಂಗ್ರಹಿಸಿರಲಿಲ್ಲ. ಪ್ರಾಸಿಕ್ಯೂಷನ್ ಫೇಲ್ಯೂರ್ ಆಗಿದೆ ಎಂದರು.

ಧರ್ಮಸ್ಥಳದ ಸಿಬ್ಬಂದಿ ನನ್ನ ಕಕ್ಷಿದಾರನನ್ನು(ಸಂತೋಷ್) ಶ್ರೀಪೊಲೀಸರಿಗೆ ಹಿಡಿದುಕೊಟ್ಟಿದ್ದರು. 6 ವರ್ಷಗಲ ಕಾಲ ಸಂತೋಷ್ ರಾವ್ ಜೈಲಿನಲ್ಲಿದ್ದರು. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದ. ಬಡತನದಲ್ಲಿ ಸಂತೋಷ್ ರಾವ್ ನನ್ನ ಪ್ರಕರಣದಲ್ಲಿ ಸಿಲುಕಿಸಲಾಗಿತ್ತು. ಇಂದು ಸಿಬಿಐ ವಿಶೇಷ ನ್ಯಾಯಾಲಯ ಆರೋಪಿಯನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ. ಉಚಿತವಾಗಿ ಸತೋಷ್ ಪರ ವಾದ ಮಂಡಿಸಿದ್ವಿ. ಸಂತೋಷ್ ಮೇಲೆ ಹೊರೆಸಲಾಗಿದ್ದ ಆರೋಪ ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಸಾಂಧರ್ಬಿಕ ಸಾಕ್ಷ್ಯಾ, ಮೆಡಿಕಲ್ ಎವಿಡೆನ್ಸ್ ಮೂಲಕ ಫ್ರೂವ್ ಮಾಡಲಾಗಲಿಲ್ಲ. ಈ ಹಿನ್ನಲೆ ಸಿಬಿಐ ನ್ಯಾಯಾಲಯ ಸಂತೋಷ್ ರಾವ್ ಖುಲಾಸೆಗೊಳಿಸಿದೆ ಎಂದು ಹೇಳಿದರು.

ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಆಗಿದ್ದ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. 2012ರ ಅಕ್ಟೋಬರ್‌ 10 ರಂದು ಧರ್ಮಸ್ಥಳದ ಬಳಿ ಸೌಜನ್ಯ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಆರೋಪಿ ಸಂತೋಷ್ ರಾವ್ ಎಂಬಾತನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದರು. ಬಳಿಕ ಪೊಲೀಸರು ಸರಿಯಾಗಿ ತನಿಖೆ‌ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಹೀಗಾಗಿ ಹಲವು ಹೋರಾಟಗಳ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿತ್ತು.

ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿ ಸೌಜನ್ಯ 2012ರ ಅ.9ರಂದು ಉಜಿರೆಯ ಎಸ್‌ಡಿಎಂ ಕಾಲೇಜಿನಿಂದ ಮನೆಗೆ ತೆರಳುವಾಗ ನಾಪತ್ತೆಯಾಗಿದ್ದಳು. ಮರುದಿನ ರಾತ್ರಿ ಮಣ್ಣಸಂಕ ಬಳಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲು ಮಾಡಿತ್ತು. ಶಂಕಿತ ಆರೋಪಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಿವಾಸಿ ಸಂತೋಷ್ ರಾವ್ ಎಂಬಾತನನ್ನು ಬಾಹುಬಲಿ ಬೆಟ್ಟದ ಬಳಿ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

Published On - 4:20 pm, Fri, 16 June 23