ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಅಗ್ನಿ ಅವಘಡ: ಪಟಾಕಿ ಕಿಡಿ ತಗುಲಿ ಹೊತ್ತಿ ಉರಿದ ಮನೆ

| Updated By: ಸಾಧು ಶ್ರೀನಾಥ್​

Updated on: Jan 30, 2021 | 5:41 PM

ಪ್ಲಾಸ್ಟಿಕ್​ ಉತ್ಪನ್ನಗಳನ್ನು ಮಾರಾಟ ಮಾಡುವ ಗದಗ ಮೂಲದವರ ಮನೆ ಬೆಂಕಿಗೆ ಆಹುತಿಯಾಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಅಗ್ನಿ ಅವಘಡ: ಪಟಾಕಿ ಕಿಡಿ ತಗುಲಿ ಹೊತ್ತಿ ಉರಿದ ಮನೆ
ಅಗ್ನಿಗೆ ಆಹುತಿಯಾದ ಮನೆ
Follow us on

ಮಂಗಳೂರು: ಮಕ್ಕಳು ಪಟಾಕಿ ಸಿಡಿಸುವ ವೇಳೆ ಕಿಡಿ ತಗುಲಿ ಇಡೀ ಮನೆಯೇ ಬೆಂಕಿಗೆ ಆಹುತಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ. ಪ್ಲಾಸ್ಟಿಕ್​ ಉತ್ಪನ್ನಗಳನ್ನು ಮಾರಾಟ ಮಾಡುವ ಗದಗ ಮೂಲದವರ ಮನೆ ಬೆಂಕಿಗೆ ಆಹುತಿಯಾಗಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿfಇರೆ ಸಂಭವಿಸಿಲ್ಲ.

ಬೆಂಕಿ ತಗುಲುತ್ತಿದ್ದಂತೆಯೇ ಮನೆಯಲ್ಲಿದ್ದವರು ಹೊರಗೆ ಓಡಿ ಹೋದ ಪರಿಣಾಮ ಎಲ್ಲರೂ ಬಚಾವಾಗಿದ್ದಾರೆ. ಆದರೆ, ಮನೆಯಲ್ಲಿ ಕೂಡಿಟ್ಟಿದ್ದ ಪ್ಲಾಸ್ಟಿಕ್​ ವಸ್ತುಗಳು ಅಗ್ನಿಗೆ ಆಹುತಿಯಾಗಿದ್ದು, ಅಗ್ನಿಶಾಮಕ ದಳದ 2 ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿವೆ.

ಅಗ್ನಿ ಅವಘಡ: ದಾಬಸ್​ಪೇಟೆ ಬಳಿ ಬೆಂಕಿಗೆ ಆಹುತಿಯಾದ ಬಟ್ಟೆ ಅಂಗಡಿ