ಮಂಗಳೂರಿನ ಕಾಲೇಜುಗಳಲ್ಲಿ ಇತ್ತೀಚೆಗೆ ರ‍್ಯಾಗಿಂಗ್ ಕೇಸ್ಗಳು ಹೆಚ್ಚಾಗುತ್ತಿವೆ. 2 ತಿಂಗಳಲ್ಲಿ ಒಟ್ಟು 3 ಕೇಸ್ಗಳು ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ನಗರ ಮಂಗಳೂರು. ಇಲ್ಲಿನ ಕಾಲೇಜುಗಳಿಗೆ ರಾಜ್ಯದವರು ಮಾತ್ರವಲ್ಲ ಹೊರ ರಾಜ್ಯ, ಹೊರ ದೇಶದ ವಿದ್ಯಾರ್ಥಿಗಳು ಕೂಡ ಕಲಿಕೆಗೆಂದು ಬರುತ್ತಾರೆ. ಆದ್ರೆ ಈ ರೀತಿ ಕಲಿಕೆಗೆಂದು ಬಂದ ಹೊರ ರಾಜ್ಯದ ಅದ್ರಲ್ಲೂ ಜೂನಿಯರ್ ಸ್ಟೂಡೆಂಟ್ಸ್ಗೆ ಕಾಟ ಕೊಟ್ಟವರು ಕಂಬಿ ಹಿಂದೆ ಬಿದ್ದಿದ್ದಾರೆ.
ಶಮಿಲ್, ಅಶ್ವಿತ್ ಜಾನ್ಸನ್, ಮಹಮ್ಮದ್ ಬಾಝಿಲ್ ಮತ್ತು ಸಂಭ್ರಮ್ ಆಳ್ವಾ ಎಂಬ ವಿದ್ಯಾರ್ಥಿಗಳು ಮಂಗಳೂರು ತಾಲೂಕಿನ ಸುರತ್ಕಲ್ ಬಳಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 3ನೇ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದಾರೆ. ಇವರು ಮೊದಲನೆ ವರ್ಷದ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಹೆಸ್ರಲ್ಲಿ ಕಿರುಕುಳ ನೀಡಿ ಹಲ್ಲೆ ಮಾಡ್ತಿದ್ರಂತೆ. ಅಷ್ಟಕ್ಕೂ ಜೂನಿಯರ್ಸ್ ಬಳಿ ತಮ್ಮ ಕೆಲಸ ಮಾಡಿಸೋದು, ತಾವು ಹೇಳಿದಂತೆ ಹೇರ್ ಕಟ್ ಮಾಡಿಸಿ ಅನ್ನೋದು, ಹಲ್ಲೆ ಮಾಡೋದು, ಕಾಲೇಜಿಗೆ ಬರುವಾಗ ಹೋಗುವಾಗ ತಲೆ ತಗ್ಗಿಸಿ ಬನ್ನಿ ಅನ್ನೋದು ಹೀಗೆ ನಾನಾ ರೀತಿ ಕಿರುಕುಳ ನೀಡ್ತಿದ್ರು ಅಂತಾ ಆರೋಪಿಸಲಾಗಿದೆ. ಸದ್ಯ ನಾಲ್ವರು ಱಗಿಂಗ್ ಕುಳಗಳು ಬಲೆಗೆ ಬಿದ್ದಿದ್ದು, ಅರೆಸ್ಟ್ ಆಗುವ ಭಯದಲ್ಲಿ ಎಸ್ಕೇಪ್ ಆದವರಿಗೆ ಬಲೆ ಬೀಸಲಾಗಿದೆ.
ಇವರ ಕಾಟ ತಡೆಯಲಾಗದೆ ಜ್ಯೂನಿಯರ್ ವಿದ್ಯಾರ್ಥಿಗಳು ಪ್ರಾಧ್ಯಾಪಕರಿಗೆ ದೂರು ನೀಡಿದ್ದಾರೆ. ಇದನ್ನೆಲ್ಲಾ ಪ್ರಶ್ನಿಸಲು ಪ್ರಾಧ್ಯಾಪಕರು ಕಾಲೇಜಿನ ಕೋಣೆಗೆ ಕರೆಸಿದ್ದಾರೆ. ಇದನ್ನ ಕೇಳಿದ್ದಕ್ಕೆ ಆರೋಪಿಗಳು ತಮ್ಮ ಪ್ರಾಧ್ಯಾಪಕರಿಗೆ ಥಳಿಸಿದ್ದಾರೆ. ಅಲ್ಲದೇ ಹೋರಗೆ ಬಾ ನೋಡ್ಕೋತೀವಿ ಅಂತಾ ಬೆದರಿಕೆ ಬೇರೆ ಹಾಕಿದ್ರಂತೆ. ಘಟನೆ ಬಳಿಕ ಕಾಲೇಜಿನ ಡೀನ್ ಸುರತ್ಕಲ್ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.
ಒಟ್ನಲ್ಲಿ ಓದಿ ಉದ್ಧಾರ ಆಗಬೇಕಿದ್ದ ವಯಸ್ಸಿನಲ್ಲಿ ಮಾಡಬಾರದ್ದನ್ನ ಮಾಡಿ ಕಂಬಿಹಿಂದೆ ಬಿದ್ದಿದ್ದಾರೆ . ಎಲ್ಲಾ ಆರೋಪಿಗಳನ್ನ ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದು, ಎಸ್ಕೇಪ್ ಆಗಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: Ragging | ಜೂನಿಯರ್ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿದ್ದಕ್ಕೆ ಅರೆಸ್ಟ್ ಆದ್ರು 11 ಸೀನಿಯರ್ಸ್
Published On - 7:20 am, Sun, 7 March 21