Ragging | ಜೂನಿಯರ್ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿದ್ದಕ್ಕೆ ಅರೆಸ್ಟ್ ಆದ್ರು 11 ಸೀನಿಯರ್ಸ್
Students Arrests For Ragging | ಜೂನಿಯರ್ ವಿದ್ಯಾರ್ಥಿಗಳ ಮೇಲೆ ರ‍್ಯಾಗಿಂಗ್ ಮಾಡಿದ ಹಿನ್ನೆಲೆಯಲ್ಲಿ ಕೇರಳ ಮೂಲದ 11 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು: ಜೂನಿಯರ್ ವಿದ್ಯಾರ್ಥಿಗಳ ಮೇಲೆ ರ‍್ಯಾಗಿಂಗ್ ಮಾಡಿದ ಹಿನ್ನೆಲೆಯಲ್ಲಿ ಕೇರಳ ಮೂಲದ 11 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹೊರವಲಯದ ದೇರಳಕಟ್ಟೆಯ ಕಣಚೂರು ಫಿಸಿಯೋಥೆರಪಿ ಮತ್ತು ನರ್ಸಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಾಲೇಜಿನ ಜೂನಿಯರ್ಸ್ಗಳಿಗೆ ಸೀನಿಯರ್ ಸ್ಟೂಡೆಂಟ್ಸ್ ಱಗಿಂಗ್ ಮಾಡಿದ್ದಕ್ಕೆ ಸದ್ಯ ಪೊಲೀಸರು ಸೀನಿಯರ್ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಕಾಲೇಜಿನಲ್ಲಿ ನಡೆಯುತ್ತಿರುವ ರ‍್ಯಾಗಿಂಗ್ ಬಗ್ಗೆ ಕೆಲವು ವಿದ್ಯಾರ್ಥಿಗಳು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಅದರಂತೆ ಕಾಲೇಜು ಆಡಳಿತ ಮಂಡಳಿ ಉಳ್ಳಾಲ ಪೊಲೀಸ್ ಠಾಣೆಗೆ ಒಟ್ಟು 18 ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿತ್ತು. ಸದ್ಯ ಕೇರಳದ 11 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಶಮ್ಮಸ್, ರಾಬಿನ್ ಬಿಜು, ಆಲ್ವಿನ್, ಜಾಬಿನ್, ಸಿರಿಲ್, ರಾಯ್ಚನ್, ಮಹಮ್ಮದ್ ಸೂರಜ್, ಅಶಿನ್ ಬಾಬು, ಅಬ್ದುಲ್ ಬಾಸಿತ್, ಅಬ್ದುಲ್ ಅನಾಸ್, ಅಕ್ಷಯ್ ಬಂಧಿತರು.
ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಮ್ಮ ಜೂನಿಯರ್ಸ್ಗಳೊಂದಿಗೆ ಸೌಹಾರ್ದಯುತವಾಗಿ ಪರಿಚಯ ಮಾಡಿಕೊಳ್ಳಿ ಮತ್ತು ಕಿರುಕುಳ ನೀಡದಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದಾರೆ. ಸಂಸ್ಥೆಯ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ನಿಮ್ಮ ಕಾಲೇಜಿನಲ್ಲಿ ನಡೆಯುವ ರ‍್ಯಾಗಿಂಗ್ ಬಗ್ಗೆ ವರದಿ ಮಾಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಱಗಿಂಗ್ ತಡೆಗಟ್ಟಲು ಹಂಪಿ ವಿವಿ ಪ್ಲ್ಯಾನ್, ಬಾಂಡ್ ಪೇಪರ್ ಕಂಡು ಹೌಹಾರಿದ ಸ್ಟೂಡೆಂಟ್ಸ್!