30ಕ್ಕೂ ಹೆಚ್ಚು ಸೈಟ್ಗಳಿಗೆ ನಕಲಿ ದಾಖಲೆ ಸೃಷ್ಟಿಸಿರುವ ಆರೋಪ: ಐವರು BDA ಇಂಜಿನಿಯರ್ಸ್ ಜೈಲುಪಾಲು
30ಕ್ಕೂ ಹೆಚ್ಚು ಸೈಟ್ಗಳಿಗೆ ನಕಲಿ ದಾಖಲೆ ಸೃಷ್ಟಿಸಿರುವ ಆರೋಪದಡಿ ಐವರು BDA ಇಂಜಿನಿಯರ್ಗಳ ಬಂಧನವಾಗಿದೆ. ಬಂಧಿತರನ್ನು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಶೇಷಾದ್ರಿಪುರಂ ಠಾಣೆ ಪೊಲೀಸರಿಂದ ಇಂಜಿನಿಯರ್ಗಳ ಬಂಧನವಾಗಿದೆ.
ಬೆಂಗಳೂರು: 30ಕ್ಕೂ ಹೆಚ್ಚು ಸೈಟ್ಗಳಿಗೆ ನಕಲಿ ದಾಖಲೆ ಸೃಷ್ಟಿಸಿರುವ ಆರೋಪದಡಿ ಐವರು BDA ಇಂಜಿನಿಯರ್ಗಳ ಬಂಧನವಾಗಿದೆ. ಬಂಧಿತರನ್ನು ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ಶೇಷಾದ್ರಿಪುರಂ ಠಾಣೆ ಪೊಲೀಸರಿಂದ ಇಂಜಿನಿಯರ್ಗಳ ಬಂಧನವಾಗಿದೆ. ಇವರ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿ BDA ಸೈಟ್ಸ್ ಕಬಳಿಕೆಯ ಆರೋಪ ಕೇಳಿಬಂದಿದೆ.
ಎಂ.ಎಸ್.ಶಂಕರಮೂರ್ತಿ(50), ಡಿ.ಶ್ರೀರಾಮ್(50), ಕೆ.ಎನ್.ರವಿಕುಮಾರ್(50), ಶಬ್ಬೀರ್ ಅಹ್ಮದ್(50) ಮತ್ತು ಶ್ರೀನಿವಾಸ್ ಬಂಧಿತ ಇಂಜಿಯರ್ಗಳು. ಇಂಜಿನಿಯರ್ಗಳು ಹತ್ತಾರು ವರ್ಷಗಳಿಂದ BDAನಲ್ಲಿದ್ದರು.
ಲೇಔಟ್ ಭೂದಾಖಲೆ ಪರಿಶೀಲನೆ ವೇಳೆ ಇವರು ಮಾಡಿದ್ದ ಅಕ್ರಮ ಪತ್ತೆಯಾಗಿದೆ. ಇದೀಗ ಪೊಲೀಸರು, ಐವರು ಇಂಜಿನಿಯರ್ಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
Manya Singh ಉತ್ತರ ಪ್ರದೇಶದ ಆಟೋ ಚಾಲಕನ ಪುತ್ರಿಗೆ Miss India 2020 ರನ್ನರ್ ಅಪ್ ‘ಮಾನ್ಯ’ತೆ!