ಸ್ಲಂ ಬೋರ್ಡ್ ಮನೆಗಳಿಂದ ಹೊರಬಿದ್ದ 16 ಕುಟುಂಬ.. ಸೂರಿಲ್ಲದೇ ಬೀದಿಯಲ್ಲೇ ರಾತ್ರಿ ಕಳೆದ ಜನ

ಸ್ಲಂ ಬೋರ್ಡ್ ಮನೆಗಳಿಂದ ಹೊರಬಿದ್ದ 16 ಕುಟುಂಬ.. ಸೂರಿಲ್ಲದೇ ಬೀದಿಯಲ್ಲೇ ರಾತ್ರಿ ಕಳೆದ ಜನ
ತೆರವು ಕಾರ್ಯಾಚರಣೆಯಿಂದ ಬೀದಿಗೆ ಬಿದ್ದ ಜನ

Slum Board | ಸ್ಲಮ್‌ ಬೋರ್ಡ್‌ ನಿವಾಸ ಕಳೆದುಕೊಂಡವರ ಬದುಕು ಅಕ್ಷರಶಃ ಬೀದಿಪಾಲಾಗಿದೆ. ಗುರುವಾರ ನಡೆದ ಏಕಾಏಕಿ ತೆರವು ಕಾರ್ಯಾಚರಣೆಯಿಂದ 16 ಕುಟುಂಬಗಳು ಬಿದಿಗೆ ಬಿದಿದ್ದು. ಕಣ್ಣೀರಲ್ಲಿ ಕೈ ತೊಳೆಯುವ ಸ್ಥಿತಿಗೆ ಬಂದು ತಲುಪಿದ್ದಾರೆ. ಮುಂದೇನು ಅಂತ ದಿಕ್ಕುತೋಚದ ಬಡ ಮಂದಿ ತಮ್ಮ ಸೂರಿಗೆ ಹೊಗಲು ಅನುಮತಿ ಇಲ್ಲದೇ ಮನೆಗಳ ಮುಂದೆಯೇ ರಾತ್ರಿ ಕಳೆದರೆ..

Ayesha Banu

|

Feb 12, 2021 | 7:36 AM

ಬೆಂಗಳೂರು: ಗೊವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ ದಾಸರಹಳ್ಳಿಯ ಸ್ಲಂ ಬೊರ್ಡ್ ನಿವಾಸಿಗಳು ಈಗ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಫೆಬ್ರವರಿ 12ರಂದು 16 ಕುಟುಂಬಗಳನ್ನ ಸ್ಲಂಬೋರ್ಡ್‌ ಅಪಾರ್ಟ್‌ಮೆಂಟ್‌ನಿಂದ ತೆರವುಗೊಳಿಸಿದ ಮೇಲೆ ಮನೆಗೆ ಬೀಗ ಹಾಕಿ ಪೊಲೀಸರನ್ನ ಕಾವಲಿಗೆ ಇಡಲಾಗಿದೆ. ಹೀಗಾಗಿ, ಆಶ್ರಯವಿಲ್ಲದೆ ಈ ಕುಟುಂಬಗಳು ಸ್ಲಂಬೋರ್ಡ್‌ ಕಟ್ಟಡದ ಮುಂಭಾಗವೇ ರಾತ್ರಿ ಕಳೆದಿದ್ದಾರೆ. ನಮ್ಮ ಮನೆಗಳನ್ನು ನಮಗೆ ವಾಪಸ್‌ ಕೊಡಿ ಅಂತ ಅಂಗಲಾಚುತ್ತಿದ್ದಾರೆ.

ರಾಜಕೀಯಕ್ಕಾಗಿ ಬಡ ಜನರನ್ನ ಬಳಸಿಕೊಂಡ್ರಾ? ಮನೆ ಕಳೆದುಕೊಂಡ ಕುಟುಂಬಗಳಿಗೆ ಕೊಟ್ಟ ಸೂರು ಕಿತ್ತುಕೊಂಡ ಆಕ್ರೋಶ. ಹೀಗಾಗಿ, ರಾಜಕೀಯಕ್ಕಾಗಿ ಈ ರೀತಿ ಮಾಡಲಾಗ್ತಿದೆ ಅಂತಾ ಆರೋಪಿಸಿದ್ದಾರೆ. ಕಾಂಗ್ರೆಸ್ ಶಾಸಕರು, ಈ ಕುಟುಂಬಗಳಿಗೆ ನಿವಾಸ ನೀಡಿದ್ರಂತೆ. ಆದ್ರೆ, ಹಕ್ಕುಪತ್ರ ಕೊಟ್ಟಿರಲಿಲ್ಲ. ಈಗ ಬಿಜೆಪಿ ಅಧಿಕಾರಕ್ಕೆ ಬಂದು ಸಮಸ್ಯೆ ಕೊಡ್ತಿದೆ ಅಂತಾ ಆರೋಪಿಸ್ತಿದ್ದಾರೆ.

ಸದ್ಯ ಸ್ಟೇಆರ್ಡರ್ ಬಳಿಕವೂ ಸ್ಲಂಬೋರ್ಡ್ ಅಧಿಕಾರಿಗಳ ನಡೆಯನ್ನ ಪ್ರಶ್ನಿಸಿರುವ ಕುಟುಂಬಗಳು ಕೋರ್ಟ್‌ ಆದೇಶಕ್ಕಾಗಿ ರಸ್ತೆಯಲ್ಲೇ ಕಾಯುತ್ತಿದ್ದಾರೆ. ಮತ್ತೊಂದೆಡೆ ಮನೆಗಳಿಗೆ ಬೀಗ ಹಾಕಿ ಪೊಲೀಸರು ಕಾವಲು ಕಾಯ್ತಿದ್ದಾರೆ. ಏನೇ ಆಗ್ಲಿ, ಇಲ್ಲಿ ರಾಜಕೀಯ ಇದ್ಯೋ, ಇಲ್ವೋ ಗೊತ್ತಿಲ್ಲ. ಆದ್ರೆ, ಬಡ ಕುಟುಂಬಗಳನ್ನ ಬೀದಿಗೆ ತಳ್ಳಿರೋದಂತೂ ಸತ್ಯ.

ಇದನ್ನೂ ಓದಿ: ಗಣಿ ದೋಚಿದ ಮಾಲೀಕರು, ಅಧಿಕಾರಿಗಳ ನಿರ್ಲಕ್ಷ್ಯ: ಬಳ್ಳಾರಿಯ ಬಡವರ ಗೋಳು ಹೇಳತೀರದು

Follow us on

Related Stories

Most Read Stories

Click on your DTH Provider to Add TV9 Kannada