ಸೆ.19ರಂದು ಮಂಗಳೂರು ವಿವಿಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿಯೇ ಮಾಡ್ತೇವೆ: ಪ್ರಭಾಕರ್ ಭಟ್ ಸವಾಲು

| Updated By: ರಮೇಶ್ ಬಿ. ಜವಳಗೇರಾ

Updated on: Sep 10, 2023 | 12:11 PM

ಮಂಗಳೂರು ವಿಶ್ವವಿದ್ಯಾಲಯಯದಲ್ಲಿ ಗಣಪತಿ ಕೂರಿಸುವ ವಿಚಾರದಲ್ಲಿ ವಿವಾದವೊಂದು ಎದ್ದಿದ್ದು, ಅದು ಇದೀಗ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇದೀಗ ಗಣೇಶೋತ್ಸವ ಆಚರಣೆ ವಿವಾದದಲ್ಲಿ ಸಂಘಪರಿವಾರ ಪ್ರವೇಶ ಮಾಡಿದ್ದು, ಸೆಪ್ಟೆಂಬರ್ 19ರಂದು ಗಣೇಶನನ್ನು ಪ್ರಾಷ್ಠಿಪಿಸಿಯೇ ತೀರುಸುತ್ತೇವೆ ಎಂದು ಸವಾಲು ಹಾಕಿದ್ದಾರೆ.

ಸೆ.19ರಂದು ಮಂಗಳೂರು ವಿವಿಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿಯೇ ಮಾಡ್ತೇವೆ: ಪ್ರಭಾಕರ್ ಭಟ್ ಸವಾಲು
ಕಲ್ಲಡ್ಕ ಪ್ರಭಾಕರ್ ಭಟ್
Follow us on

ಮಂಗಳೂರು, (ಸೆಪ್ಟರಂಬರ್ 11): ಗಣಪತಿ ಉತ್ಸವ ಆಚರಣೆಗೆ ಕೆಲವೇ ದಿನ ಬಾಕಿಯಿದೆ. ಈ ನಡುವೆ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ (Mangaluru University) ಗಣಪತಿ ಕೂರಿಸುವ ವಿಚಾರದಲ್ಲಿ ವಿವಾದವೊಂದು ಎದ್ದಿದೆ. ಗಣಪನನ್ನು(ganapati) ಕೂರಿಸುವ ಜಾಗ, ಖರ್ಚು ವೆಚ್ಚಕ್ಕೆ ಬಳಸುವ ಹಣ ಯಾವುದು ಎಂಬುದೇ ರಾಜಕೀಯ ತಿಕ್ಕಾಟಕ್ಕೆ ಕಾರಣವಾಗಿದೆ. ಮಂಗಳೂರು ವಿವಿಯಲ್ಲಿ ಕಳೆದ 40 ವರ್ಷಗಳಿಂದ ಗಣೇಶೋತ್ಸವ ನಡೀತಿದೆ. ಕಳೆದ 2 ವರ್ಷಗಳಿಂದ ವಿವಿಯ ಮಂಗಳಾ ಆಡಿಟೋರಿಯಂನಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಆದ್ರೆ ಈ ಬಾರಿ ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ವಿಘ್ನ ಎದುರಾಗಿದೆ. ಆದ್ರೆ, ಸೆಪ್ಟೆಂಬರ್ 19ರಂದು ಮಂಗಳೂರು ವಿವಿಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿಯೇ ಮಾಡ್ತೇವೆ ಎಂದು ಆರ್​ಎಸ್​ಎಸ್​ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸವಾಲು ಹಾಕಿದ್ದಾರೆ.

ಮಂಗಳೂರು ವಿವಿ ಉಪಕುಲಪತಿ ನಡೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ನಮಗೆ ಈಗ ಸಮಸ್ಯೆ ಬಂದಿರುವುದು ಕಾಂಗ್ರೆಸ್ ನಿಂದ. ಕಾಂಗ್ರೆಸ್ ನಮ್ಮನ್ನ ನಿರ್ವೀರ್ಯರನ್ನಾಗಿ, ಹೇಡಿಗಳನ್ನಾಗಿ ಮಾಡಿತು. ಈಗಲೂ ಪಾಕಿಸ್ತಾನ ಜಿಂದಾಬಾದ್ ಹೇಳುವವರು ಇದಾರೆ. ಅವರಿಗೆ ಕುಮ್ಮಕ್ಕು ಕೊಡುವವರು ಇದ್ದಾರೆ. ನಾವು ಸೆಪ್ಟೆಂಬರ್ 19 ರಂದು ಮಂಗಳೂರು ವಿವಿಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿಯೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗಣಪತಿ ವಿವಾದ; ಗೊಂದಲ ನಿವಾರಿಸುವಂತೆ ಉಪಕುಲಪತಿಯಿಂದ ಸರ್ಕಾರಕ್ಕೆ ಪತ್ರ

ಸ್ಟಾಲಿನ್ ಪುತ್ರ ಉದಯನಿಧಿ ಎಂಬ ಮಂತ್ರಿ ತನ್ನ ಕಂತ್ರಿ ಬುದ್ದಿ ತೋರಿಸಿದ. ಅದರ ಬಗ್ಗೆ ಈ ಕಾಂಗ್ರೆಸ್ ಏನೂ ಮಾತನಾಡಲ್ಲ, ಅದರ ಪರವಾಗಿ ಇವರು ನಿಂತರು. ಇನ್ನೊಬ್ಬ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಇನ್ನೊಬ್ಬ ಗೃಹಮಂತ್ರಿ. ಇಬ್ಬರೂ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ. ಹೆಸರು ಪರಮೇಶ್ವರ್, ಹೆಸರಲ್ಲೇ ಈಶ್ವರ ಇದೆ ಮಾರ್ರೆ. ಗಣೇಶ ಎಲ್ಲ ಅಡ್ಡಿಗಳ ನಿವಾರಿಸುವ ಮೊಟ್ಟ ಮೊದಲ ದೇವರು. ಅವನು ವಿಘ್ನ ನಿವಾರಕ, ಸರ್ವ ವ್ಯಾಪಿ ಇರುವವನು ಗಣೇಶ. ಮುಸ್ಲಿಮರೇ ಇರೋ ಇಂಡೋನೇಷ್ಯಾದ ನೋಟಿನ ಮೇಲೆ ಗಣೇಶನ ಚಿತ್ರ ಇದೆ. ಇಲ್ಲೊಬ್ಬರು ಅಮೀನರಿದ್ದಾರೆ, ಅವರ ಹೆಸರು ಜಯರಾಜ್ ಎಂದು ಮಂಗಳೂರು ವಿವಿ ಉಪಕುಲಪತಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ನಾವು ಹೊಸತಾಗಿ ವಿವಿಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿ ಎಂದು ಹೇಳುತ್ತಿಲ್ಲ. ಮಂಗಳಾ ಆಡಿಟೋರಿಯಂನಲ್ಲೇ ಗಣಪತಿ ಇಟ್ಟರೆ ಇಡೀ ವಿವಿಗೆ ಒಳ್ಳೆದಾಗುತ್ತೆ. ಸ್ವಲ್ಪ ಇದರ ಹಿಂದೆ ನಮ್ಮ ಉಳ್ಳಾಲದ ಶಾಸಕರು ಇದ್ದಾರೆ. ಅವರು ನಮ್ಮ ದೇವಸ್ಥಾನಕ್ಕೆಲ್ಲಾ ಹೋಗುತ್ತಾರೆ. ನಾಡಿದ್ದು ಗಣೇಶೋತ್ಸವಕ್ಕೂ ಹೋಗುತ್ತಾರೆ ಎಂದು ಶಾಸಕ, ಸ್ಪೀಕರ್ ಖಾದರ್ ವಿರುದ್ದವೂ ಕಲ್ಲಡ್ಕ ಭಟ್ ಆಕ್ರೋಶ ಹೊರಹಾಕಿದರು.

ಗಣೇಶನ ಹೆಸರಿನಲ್ಲಿ ರಾಜಕೀಯ ಮಾಡಬೇಡಿ. ಎಲ್ಲಾ ಜನರು ಒಟ್ಟಾಗಿ ದೇಶಕ್ಕೋಸ್ಕರ ಗಣೇಶನ ಆರಾಧನೆ ಮಾಡಿದ್ರು. ಈಗ ಅವರು ಸ್ಪೀಕರ್, ಗಣೇಶನ ಅಲ್ಲೇ ಇಡಿ ಎಂದು ಅವರು ಹೇಳಬೇಕು. ನಾವು ಸೆ.19ರಂದು ಗಣೇಶನ ಪ್ರತಿಷ್ಠಾಪನೆ ಮಾಡಿಯೇ ಮಾಡುತ್ತೇವೆ. ಅದನ್ನ ಯಾರು ಬೇಡ ಅಂದರೂ ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಗುತ್ತೆ. ಅದಕ್ಕೆ ವಿವಿಯ ಅಮೀನರು ಹಾಗೂ ರಾಜ್ಯದ ಅಮೀನರಾದ ಸ್ಪೀಕರ್ ಕೂಡ ಬೆಂಬಲ ಕೊಡಬೇಕು. ಉಳ್ಳಾಲದಲ್ಲಿ ಹಿಂದೂಗಳ ಸಂಖ್ಯೆ ಗೊತ್ತಿಲ್ಲದೇ ಕಡಿಮೆಯಾಗುತ್ತಿದೆ. ಕಡಿಮೆಯಾದ ಜಾಗಗಳೆಲ್ಲಾ ಪಾಕಿಸ್ತಾನ ಆಗುತ್ತಾ ಬಂತು. ಹಿಂದೂ ಸಮಾಜದಲ್ಲಿ ರಾಜಕೀಯಕ್ಕೋಸ್ಕರ ಹಿಂದೂ ವಿರೋಧಿಗಳಿಗೆ ಕೆಲವರು ಬೆಂಬಲ ಕೊಡುತ್ತಿದ್ದಾರೆ ಕಿಡಿಕಾರಿದರು.

ಮೋದಿ ರಿಪಬ್ಲಿಕ್ ಆಫ್ ಭಾರತ್ ಎಂದು ಮಾಡಲು ಹೋಗುತ್ತಿದ್ದಾರೆ. ಆದರೆ ಇದರ ಬಗ್ಗೆಯೂ ಅಪಸ್ವರ, ಬ್ರಿಟಿಷರು ಅದನ್ನ ಬಿಟ್ಟು ಹೋಗಿದ್ದಾರೆ. ಮೊನ್ನೆ ಇವರು ಭಾರತ್ ಜೋಡೋ ಮಾಡಿದರಲ್ಲ ಅದು ಇಂಡಿಯಾ ಜೋಡೋನಾ? ಇವರ ಇಂಡಿಯಾ ಅಂತ ಒಕ್ಕೂಟ ಒದೆ, ಅದರಲ್ಲೂ ಇವರು ಒಟ್ಟಿಗೆ ಇಲ್ಲ. ಭಾರತ್ ಅನ್ನೋದು ನಮ್ಮ ಸ್ವಾಭಿಮಾನಿ, ನಮ್ಮ ನಂಬಿಕೆ ಎಂದರು.

ಮಂಗಳೂರು ವಿವಿ ಸ್ಟ್ಯಾಂಡರ್ಡ್ ಕಡಿಮೆ ಆಗಿದೆ ಎಂದು ಸ್ಪೀಕರ್ ಖಾದರ್ ಹೇಳಿದ್ದಾರೆ. ಅದಕ್ಕಾಗಿ ಗಣೇಶನ ಕೂರಿಸಿ, ಆಗ ಮತ್ತೆ ಗುಣಮಟ್ಟ ಮೇಲೆ ಬರುತ್ತೆ. ನಮಗೆ ಇನ್ನೂ ಧಾರ್ಮಿಕ ಸ್ವಾತಂತ್ರ್ಯ ಸಿಕ್ಕಿಲ್ಲ, ಅದಕ್ಕಾಗಿ ಈ ಹೋರಾಟ. ನಮ್ಮತನ ಉಳಿಸುವ ಉದ್ದೇಶದಿಂದ ಈ ಹೋರಾಟ. ಭಯೋತ್ಪಾದಕ ಮುಸಲ್ಮಾನರು, ಮತಾಂತರಿ ಕ್ರಿಶ್ಚಿಯನ್ನರ ಮಧ್ಯೆ ಹಿಂದೂ ಸಮಾಜ ಎದ್ದು ನಿಲ್ಲಬೇಕಿದೆ. ಸಾವರ್ಕರ್ ಗೆ ಶಾಲೆಯಲ್ಲಿ ಜೈಕಾರ ಹಾಕಿದ್ದಕ್ಕೆ ಮಂಚಿಯಲ್ಲಿ ವಿರೋಧ ಮಾಡಿದ್ರು. ಇದಕ್ಕೆ ಗಲಾಟೆ ಮಾಡಿ ಅಲ್ಲಿನ ಶಿಕ್ಷಕಿ ಹತ್ತಿರ ಕ್ಷಮೆ ಕೇಳಿಸಿದ್ರು. ಸಾವರ್ಕರ್ ಕೂದಲಿನಷ್ಟೂ ಬೆಲೆ ಇಲ್ಲದ ಇವರು ಅವರ ಬಗ್ಗೆ ಮಾತನಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ನಿಮ್ಮ ಜಿಲ್ಲೆಗಳ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ