ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್​ವಾರ್! ಯುವಕನಿಗೆ ಗಂಭೀರ ಗಾಯ

| Updated By: sandhya thejappa

Updated on: Nov 30, 2021 | 11:30 AM

2020 ರಲ್ಲಿ ಬರ್ಕೆಯಲ್ಲಿ ಇಂದ್ರಜಿತ್ ಎಂಬಾತನ ಕೊಲೆ ನಡೆದಿತ್ತು. ಗಾಯಗೊಂಡ ಶ್ರವಣ್ ಇಂದ್ರಜಿತ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಸಹೋದರನಾಗಿದ್ದ. ಅಂದು ಇಂದ್ರಜಿತ್ ಕೊಲೆಗೆ ಪ್ರತೀಕಾರವಾಗಿ ಈ ಕೊಲೆ ಯತ್ನ ನಡೆದಿದೆ ಅಂತ ಪೊಲೀಸರು ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್​ವಾರ್! ಯುವಕನಿಗೆ ಗಂಭೀರ ಗಾಯ
ಪ್ರಾತಿನಿಧಿಕ ಚಿತ್ರ
Follow us on

ಮಂಗಳೂರು: ಕಡಲತಡಿ ಮಂಗಳೂರಿನಲ್ಲಿ ಮತ್ತೆ ಗ್ಯಾಂಗ್​ವಾರ್ ನಡೆದಿದೆ. ಇಷ್ಟು ದಿನ ಸೈಲೆಂಟಾಗಿದ್ದ ಮಂಗಳೂರು ಮತ್ತೆ ಬೆಚ್ಚಿಬಿದ್ದಿದೆ. ಎರಡು ಗುಂಪುಗಳ ನಡುವೆ ತಲ್ವಾರ್ ದಾಳಿ ನಡೆದಿದೆ. ಕಳೆದ ವರ್ಷ ನಡೆದ ಕೊಲೆಯೊಂದರ ವೈಷಮ್ಯದ ಹಿನ್ನೆಲೆಯಲ್ಲಿ ಗ್ಯಾಂಗ್​ವಾರ್ ನಡೆದಿದೆ. ಲಾಂಗು, ಮಚ್ಚು ಸೇರಿದಂತೆ ಮಾರಕಾಸ್ತ್ರಗಳಿಂದ ತಂಡವೊಂದು ದಾಳಿ ನಡೆಸಿದ್ದರಿಂದ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಮಂಗಳೂರಿನ ಅಳಕೆ ಗ್ಯಾಂಗ್​ಗೆ ಸೇರಿದ ಶ್ರವಣ್ ಎಂಬಾತ ಗ್ಯಾಂಗ್​ವಾರ್​ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ.

2020 ರಲ್ಲಿ ಬರ್ಕೆಯಲ್ಲಿ ಇಂದ್ರಜಿತ್ ಎಂಬಾತನ ಕೊಲೆ ನಡೆದಿತ್ತು. ಗಾಯಗೊಂಡ ಶ್ರವಣ್ ಇಂದ್ರಜಿತ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳ ಸಹೋದರನಾಗಿದ್ದ. ಅಂದು ಇಂದ್ರಜಿತ್ ಕೊಲೆಗೆ ಪ್ರತೀಕಾರವಾಗಿ ಈ ಕೊಲೆ ಯತ್ನ ನಡೆದಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಸುಮಾರು 8 ಮಂದಿಯ ತಂಡವೊಂದು ಈ ದುಷ್ಕೃತ್ಯ ಎಸಗಿದ್ದು, ಗಾಯಾಳು ಪರಿಸ್ಥಿತಿ ಗಂಭೀರವಾಗಿದೆ. ಆತನಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರಂಭದಲ್ಲಿ ಇದೊಂದು ಕೊಲೆ ಯತ್ನ ಎಂದು ಭಾವಿಸಲಾಗಿತ್ತು. ಆದರೆ ಈಗ ಗ್ಯಾಂಗ್​ವಾರ್ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ ಅಂತಾ ನಗರ ಹಿರಿಯ ಪೊಲೀಸ್ ಅಧಿಕಾರಿಗಳು ಟಿವಿ9 ಡಿಜಿಟಲ್​ಗೆ ತಿಳಿಸಿದ್ದಾರೆ. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2020 ರಲ್ಲಿ ನಡೆದಿದ್ದ ಇಂದ್ರಜಿತ್ ಕೊಲೆ ಕೃತ್ಯವನ್ನು ತಲವಾರ್ ಜಗ್ಗ ನೇತೃತ್ವದ ಬೋಳೂರು ಗ್ಯಾಂಗ್ ನಡೆಸಿತ್ತು. ಅದರ ಪ್ರತಿಕಾರಕ್ಕೆ ನಡೆದಿರೋದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಘಟನೆಯ ಹಿಂದೆ ಯಾವುದೇ ಕೋಮು ದ್ವೇಷ ಇರುವುದಿಲ್ಲ. ಬಹುತೇಕ ಎಲ್ಲರೂ ಒಂದೇ ಕೋಮಿನವರು ಅಂತ ತಿಳಿದುಬಂದಿದೆ.

ಇದನ್ನೂ ಓದಿ

ರಾಜ್ಯಸಭಾ ಸಂಸದರ ಅಮಾನತು: 12 ಸಂಸದರು ಕ್ಷಮೆಯಾಚಿಸಿದರೆ, ನಾವು ಪರಿಗಣಿಸಬಹುದು ಎಂದ ಸರ್ಕಾರ

Bank Holidays in December 2021: ಡಿಸೆಂಬರ್​ನಲ್ಲಿ ಬ್ಯಾಂಕ್​ಗಳಿಗೆ ಒಟ್ಟು ಎಷ್ಟು ದಿನ ರಜಾ ಗೊತ್ತೆ?

Published On - 11:29 am, Tue, 30 November 21