Mangaluru News: ಸರ್ಕಾರಿ ಬಸ್​ನಲ್ಲಿ ಮಹಿಳೆ ಜೊತೆ ಅನುಚಿತ ವರ್ತನೆ; ಆರೋಪಿ ವಶಕ್ಕೆ

ಬಸ್ಸಿನಲ್ಲಿ ವಿವಾಹಿತ ಮಹಿಳೆ ಜೊತೆ ಅಶ್ಲೀಲವಾಗಿ ವರ್ತಿಸಿದ್ದ ಸಹ ಪ್ರಯಾಣಿಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Mangaluru News: ಸರ್ಕಾರಿ ಬಸ್​ನಲ್ಲಿ ಮಹಿಳೆ ಜೊತೆ ಅನುಚಿತ ವರ್ತನೆ; ಆರೋಪಿ ವಶಕ್ಕೆ
ಆರೋಪಿ ಸುಬ್ರಹ್ಮಣ್ಯ ಭಟ್

Updated on: Jun 24, 2023 | 10:44 AM

ಮಂಗಳೂರು: ಬಸ್ಸಿನಲ್ಲಿ (Bus) ವಿವಾಹಿತ ಮಹಿಳೆ ಜೊತೆ ಅಶ್ಲೀಲವಾಗಿ ವರ್ತಿಸಿದ್ದ ಸಹ ಪ್ರಯಾಣಿಕನನ್ನು ಪೊಲೀಸರು (Police) ವಶಕ್ಕೆ ಪಡೆದಿದ್ದಾರೆ. ಕೆಮ್ಮಿಂಜೆ ಗ್ರಾಮದ ಸುಬ್ರಹ್ಮಣ್ಯ ಭಟ್ ಅನುಚಿತವಾಗಿ ವರ್ತಿಸಿದ ಆರೋಪಿ. ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯ ಪುತ್ತೂರು (Puttur) ತಾಲೂಕಿನ ಉಪ್ಪಳದಿಂದ ಪುತ್ತೂರು ಕಡೆಗೆ ಕೆಎಸ್​ಆರ್​ಟಿಸಿ ಬಸ್ ತೆರಳುತ್ತಿತ್ತು. ಈ ಬಸ್​ನಲ್ಲಿ ಶಹನಾಜ್ (20) ಮಹಿಳೆ ಪ್ರಯಾಣಿಸುತ್ತಿದ್ದಳು. ಬಸ್​ ಮುರ ಗ್ರಾಮದ ಬಳಿ ಬಸ್​ ಬರುತ್ತಿದ್ದಂತೆ ಮಹಿಳೆಯ ಹಿಂದಿನ ಸೀಟ್​ನಲ್ಲಿ ಕುಳಿತಿದ್ದ ಸುಬ್ರಹ್ಮಣ್ಯ ಭಟ್ ಸೀಟಿನ ಮಧ್ಯದಲ್ಲಿ ಕೈಹಾಕಿ ಸೊಂಟದ ಕೆಳ ಭಾಗ ಹಿಡಿದು ಅಶ್ಲೀಲವಾಗಿ ವರ್ತಿಸಿದ್ದಾನೆ.

ಮಹಿಳೆ ಪ್ರಶ್ನಿಸಿದ್ದಕ್ಕೆ ಸುಬ್ರಹ್ಮಣ್ಯ ಭಟ್ ಬೊಳುವಾರಿನಲ್ಲಿ ಬಸ್​ನಿಂದ ಇಳಿದಿದ್ದಾನೆ. ಈ ಬಗ್ಗೆ ಶಹನಾಜ್ ವಿಡಿಯೋ ಸಹಿತ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಸುಬ್ರಹ್ಮಣ್ಯ​ ಭಟ್​​ನನ್ನು ವಶಕ್ಕೆ ಪಡೆದು ಕೋರ್ಟ್​ಗೆ ಹಾಜರುಪಡಿಸಿದ್ದಾರೆ. ಆರೋಪಿ ಸುಬ್ರಹ್ಮಣ್ಯ ಭಟ್​ಗೆ ಕೋರ್ಟ್​ ಜಾಮೀನು ಮಂಜೂರು ಮಾಡಿದೆ.