ಬಂಟ್ವಾಳ: ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಯುವ ವಧು

|

Updated on: Oct 31, 2023 | 11:31 AM

ವರದಕ್ಷಿಣೆ ಸಾಕಾಗುವುದಿಲ್ಲ ಎಂದು ಆಕೆಯ ಅತ್ತೆ ಜುಬೈದಾ, ನೌಸೀನ್ ಅವರ ಅತ್ತಿಗೆ ಅಜ್ಮಿಯಾ ಮತ್ತು ಅವರ ಪತಿಯೊಂದಿಗೆ ಅವಳನ್ನು ದೂಷಣೆ ಮಾಡುತ್ತಾ ಮಾನಸಿಕ ಕಿರುಕುಳ ನೀಡಿದ್ದಾರೆ. ತಮ್ಮ ಮಗನನ್ನು ಪ್ರೀತಿಸಿ, ಮದುವೆಯಾಗಿದ್ದಕ್ಕೆ ಟೀಕಿಸುತ್ತಿದ್ದರಂತೆ. ಈ ನಿರಂತರ ಕಿರುಕುಳದಿಂದಾಗಿ ನೌಸೀನ್ ತನ್ನ ತಾಯಿಯ ಮನೆಗೆ ಮರಳಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಂಟ್ವಾಳ: ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಯುವ ವಧು
ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಯುವ ವಧು
Follow us on

ಬಂಟ್ವಾಳ, ಅಕ್ಟೋಬರ್ 31: ವರದಕ್ಷಿಣೆ ಕಿರುಕುಳ (dowry harassment) ತಾಳಲಾರದೆ ನವವಿವಾಹಿತೆಯೊಬ್ಬರು ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. ಮೃತರನ್ನು ಸಜೀಪ್ ಮುಡಾ ಗ್ರಾಮದ ಸುಭಾಷ್ ನಗರದ ನಿವಾಸಿ ನೌಸೀನ್ (22) ಎಂದು ಗುರುತಿಸಲಾಗಿದೆ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಉಳ್ಳಾಲ ಮೂಲದ ಅಝ್ಮಾನ್ ಎಂಬಾತನೊಂದಿಗೆ ನೌಸೀನ್ ಪ್ರೇಮ ವಿವಾಹವಾಗಿದ್ದರು. ಇದು ಪ್ರೇಮ ವಿವಾಹವಾಗಿದ್ದರೂ (love marriage), ಮದುವೆಯ ಉಡುಗೊರೆಯಾಗಿ ಅಥವಾ ವರದಕ್ಷಿಣೆಯಾಗಿ 180 ಗ್ರಾಂ ಚಿನ್ನವನ್ನು ನೀಡಲಾಗಿತ್ತಂತೆ.

ದುರದೃಷ್ಟವಶಾತ್, ವಧುವಿನ ಮನೆಯವರು ನೀಡಿದ ವರದಕ್ಷಿಣೆ ಸಾಕಾಗುವುದಿಲ್ಲ ಎಂದು ಆಕೆಯ ಅತ್ತೆ ಜುಬೈದಾ, ನೌಸೀನ್ ಅವರ ಅತ್ತಿಗೆ ಅಜ್ಮಿಯಾ ಮತ್ತು ಅವರ ಪತಿಯೊಂದಿಗೆ ಅವಳನ್ನು ದೂಷಣೆ ಮಾಡುತ್ತಾ ಮಾನಸಿಕ ಕಿರುಕುಳ ನೀಡಿದ್ದಾರೆ. ತಮ್ಮ ಮಗನನ್ನು ಪ್ರೀತಿಸಿ, ಮದುವೆಯಾಗಿದ್ದಕ್ಕೆ ಟೀಕಿಸುತ್ತಿದ್ದರಂತೆ.

ಈ ನಿರಂತರ ಕಿರುಕುಳದಿಂದಾಗಿ ನೌಸೀನ್ ಉಳ್ಳಾಲದಲ್ಲಿರುವ ತನ್ನ ಗಂಡನ ಮನೆಯನ್ನು ತೊರೆದು ಸಮೀಪದಲ್ಲಿರುವ ತನ್ನ ತಾಯಿಯ ಮನೆಗೆ ಮರಳಿದ್ದಳು. ಮಾನಸಿಕವಾಗಿ ನೊಂದ ನೌಸೀನ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ನಸೀರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಡಯಜಿ ವರ್ಲ್ಡ್​​​ ವರದಿ ಮಾಡಿದೆ.

ಸಜೀಪ ಮೂಡದ ನಿವಾಸಿ ಕೆ ಎಂ ಬಾವಾ ಅವರ ಪುತ್ರಿ ನೌಸೀನ್ ಅವರು ಉಳ್ಳಾಲ ಮೂಲದ ಅಜ್ಮಾನ್ ಅವರನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಮೂಲಕ ಮೊದಲು ಭೇಟಿಯಾದರು. ಆ ಸಂಪರ್ಕವು ಕಾಲಾಂತರದಲ್ಲಿ ಪ್ರೀತಿಯಲ್ಲಿ ಅರಳಿದೆ. ಮತ್ತು ಅವರು ಮದುವೆಯಾಗಲು ತಮ್ಮ ಕುಟುಂಬದ ಒಪ್ಪಿಗೆಯನ್ನು ಪಡೆದಿದ್ದರು.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ -ಮದುವೆಯಾದ ನಾಲ್ಕೇ ತಿಂಗಳಲ್ಲಿ ಮಸಣ ಸೇರಿದ ಗೃಹಿಣಿ

ನೌಸೀನ್ ತಂದೆ ಅವಳ ಮದುವೆಗೆ 180 ಗ್ರಾಂ ಚಿನ್ನವನ್ನು ಉಡುಗೊರೆಯಾಗಿ ನೀಡಿದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ನೌಸೀನ್‌ಳ ಚಿನ್ನಾಭರಣ ವಸ್ತುಗಳನ್ನು ಅಜ್ಮಾನ್ ಮಾರಾಟ ಮಾಡಿದ್ದಾನೆ. ಸಾಲದು ಅಂತಾ ಹೆಚ್ಚಿನ ಚಿನ್ನ ನೀಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದ. ಇದರ ಜತೆಗೆ, ತಮ್ಮ ಮಗನೊಂದಿಗಿನ ಪ್ರೇಮ ವಿವಾಹವನ್ನು ನೆಪವಾಗಿಟ್ಟುಕೊಂಡು ಅತ್ತೆ ತನ್ನ ಸೊಸೆಗೆ ಮಾನಸಿಕ ಹಿಂಸೆ ನೀಡಿದ್ದರು.

ತನ್ನ ಅತ್ತೆಯ ಕಿರುಕುಳ ತಾಳಲಾರದೆ ತನ್ನ ತಾಯಿಯ ಮನೆಯಲ್ಲಿ ಆಶ್ರಯ ಪಡೆಯುವ ಅನಿವಾರ್ಯ ಸಂಕಷ್ಟದ ಬಗ್ಗೆ ನೌಸೀನ್ ತನ್ನ ಕುಟುಂಬದಲ್ಲಿ ಹೇಳಿಕೊಂಡು ದುಃಖಿಸಿದ್ದಾಳೆ. ಮರುದಿನ, ಆಕೆಯ ಕುಟುಂಬವು ಕೆಲಸಕ್ಕೆ ಹೋದಾಗ, ಅವಳು ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ದುರಂತ ಸಾವಿಗೆ ಪತಿ, ಅತ್ತೆ ಮತ್ತು ಅತ್ತಿಗೆ ಕಾರಣ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ನೌಸೀನ್‌ಗೆ ನ್ಯಾಯ ದೊರಕಿಸಿಕೊಡುವಂತೆ ನೌಸೀನ್ ಸಂಬಂಧಿ ಸಿದ್ದಿಕ್ ಒತ್ತಾಯಿಸಿದ್ದಾರೆ.

ಮತ್ತಷ್ಟು ಕ್ರೈಂ ನ್ಯೂಸ್​ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:23 am, Tue, 31 October 23