ಮದುವೆಯಾದ ನಾಲ್ಕೇ ತಿಂಗಳಲ್ಲಿ ಮಸಣ ಸೇರಿದ ಗೃಹಿಣಿ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ, ಹೆತ್ತವರ ಆಕ್ರಂದನ

ವಿಷ್ಣು ಹಾಗೂ ಉಮಾ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ರು. ಬಿಎಸ್ಸಿ ಓದಿದ್ದ ಉಮಾಗೆ ಒಳ್ಳೆಯ ಸಂಬಂಧ ಅಂತಾ ಎಂಎ ಮುಗಿಸಿದ ವಿಷ್ಣುವಿನ ಜೊತೆ ಮದುವೆ ಮಾಡಿದ್ರು. ಈ ವಿಷ್ಣು ಬಡ್ಡಿ ವ್ಯವಹಾರ ಮಾಡ್ತಾಯಿದ್ದು, ಹಣದ ದಾಸನಾಗಿದ್ದ. ಉಮಾ ಜೊತೆ ಅಷ್ಟೊಂದು ಸರಿಯಾಗಿ ವರ್ತನೆ ಮಾಡ್ತಾಯಿರಲ್ಲಿಲ್ಲ. ಶ್ರಾವಣಕ್ಕೆ ಅಂತ ತವರು ಮನೆಗೆ ಹೋಗಿದ್ದ ಉಮಾ ಸೋಮವಾರ ತವರು ಮನೆಯಿಂದ ವಾಪಸಾಗಿದ್ದಳು. ಆದ್ರೆ, ನಿನ್ನೆ ಮಂಗಳವಾರ ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮದುವೆಯಾದ ನಾಲ್ಕೇ ತಿಂಗಳಲ್ಲಿ ಮಸಣ ಸೇರಿದ ಗೃಹಿಣಿ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ, ಹೆತ್ತವರ ಆಕ್ರಂದನ
ಮದುವೆಯಾದ ನಾಲ್ಕೇ ತಿಂಗಳಲ್ಲಿ ಮಸಣ ಸೇರಿದ ಗೃಹಿಣಿ!
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಸಾಧು ಶ್ರೀನಾಥ್​

Updated on:Sep 20, 2023 | 4:16 PM

ಆ ಕುಟುಂಬದಲ್ಲಿ ಅವಳನ್ನು ರಾಣಿ ಹಾಗೇ ಸಾಕಿ ಬೆಳೆಸಿದ್ರು. ಇಬ್ಬರು ಸಹೋದರರು ಮುದ್ದಿನ ತಂಗಿ ಸುಖವಾಗಿ ಇರ್ಬೇಕು ಅಂತ ಸಾಕಷ್ಟು ವರದಕ್ಷಿಣೆ ನೀಡಿ ಅದ್ದೂರಿಯಾಗಿ ಮದುವೆ ಮಾಡಿದ್ರು. ಸುಂದರ ಸಂಸಾರದ ಕನಸು ಕಂಡಿದ್ದ ಗೃಹಿಣಿ ನಿತ್ಯ ಕಿರುಕುಳಕ್ಕೆ ಸೋತು ಹೋಗಿದ್ಲು. ಹೆತ್ತವ್ರ, ಸಹೋದರರ ಕನಸು ನುಚ್ಚುನೂರಾಗಿದೆ. ರಾಣಿಯಂತೆ ಸಾಕಿದ ತಂಗಿ ಹೆಣವಾಗಿದ್ದಾಳೆ. ಹೌದು, ಹಣದಾಹಿ ಪಾಪಿ ಗಂಡನ ಕಿರುಕುಳಕ್ಕೆ (Dowry Harassment) ಬೇಸತ್ತ ಗೃಹಿಣಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ. ಮುದ್ದಿನ ಮಗಳು ಕಳೆದುಕೊಂಡು ಕುಟುಂಬಸ್ಥರು ಆಕ್ರಂದನ ಮುಗಿಲುಮುಟ್ಟಿದೆ. ಮುದ್ದಿನ ಮಗಳ ಸಾವಿಗೆ ಕಾರಣವಾದ ಮನೆಗೆ ಮಣ್ಣು ತೂರಿ ಶಾಪ ಹಾಕಿದ್ರು. ಆ್ಯಂಬುಲೆನ್ಸ್ ಮುಂದೆ ಮಲಗಿಕೊಂಡು ಕಿರಾತಕ ಗಂಡನ್ನು ಬಂಧಿಸುವಂತೆ ಒತ್ತಾಯ ಮಾಡಿದ್ರು… ಮುದ್ದಾದ ಮಗಳನ್ನು ಕಳೆದುಕೊಂಡು ಹೆತ್ತಮ್ಮಳ ಕಣ್ಣೀರು. ರಾಣಿ ಹಾಗೇ ಸಾಗಿದ‌ ತಂಗಿಯನ್ನು ಕಳೆದುಕೊಂಡು ಸಹೋದರರ ಆಕ್ರಂದನ.. ಮನೆಗೆ ಮಣ್ಣು ತೂರಿ ಶಾಪ ಹಾಕಿ ಆಕ್ರೋಶ.. ಆರೋಪಿತ ಗಂಡನನ್ನು ಬಂಧಿಸುವಂತೆ ಒತ್ತಾಯಿಸಿ ಆ್ಯಂಬುಲೆನ್ಸ್ ತಡೆದ ಕುಟುಂಬಸ್ಥರ ಆಕ್ರೋಶ. ಕಿರಾತಕರು ಕೈಗೆ ಸಿಕ್ರೆ ಕೊಂದೆ ಬಿಡಬೇಕು ಅನ್ನೋ ಸಿಟ್ಟು, ಆಕ್ರೋಶ. ಮಗಳ ಸಾವಿಗೆ ಕಾರಣವಾದ ಪಾಪಿಗಳನ್ನು ಬಂಧಿಸಿ ಕರೆತನ್ನಿ ಅಂತಾ ಆಕ್ರೋಶ. ಈ ದೃಶ್ಯಗಳು ನೋಡಿದ್ರೆ ಎಂಥವ್ರ ಕರಳು ಕಿತ್ತು ಬರುತ್ತೆ. ಹೌದು ಎಲ್ಲಾ ಚಿತ್ರಣಗಳು ಕಂಡಿದ್ದು, ಗದಗ (Gadag) ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ.

ಅಂದಹಾಗೇ ಕಳೆದ ನಾಲ್ಕು ತಿಂಗಳ ಹಿಂದೆ ಮುಂಡರಗಿ ತಾಲೂಕಿನ ರಾಮೇನಹಳ್ಳಿ ಗ್ರಾಮದ ಉಮಾ ಎನ್ನುವ ಮಹಿಳೆಯನ್ನು ಗದಗ ತಾಲೂಕಿನ ತಿಮ್ಮಾಪುರ ಗ್ರಾಮದ ವಿಷ್ಣುವಿನ ಜೊತೆಗೆ ಅದ್ದೂರಿಯಾಗಿ ಮದುವೆ ಮಾಡಿದ್ರು. ಒಬ್ಬಳೇ ಮುದ್ದಿನ ಮಗಳು ಹೀಗಾಗಿ ಮಗಳು ಚೆನ್ನಾಗಿ ಇರ್ಬೇಕು ಅಂತ ಹತ್ತಾರು ಕನಸು ಕಂಡಿದ್ರು. ಸಹೋದರರು ಕೂಡ ರಾಣಿಯಂತೆ ಬೆಳೆಸಿದ ತಂಗಿ ಚೆನ್ನಾಗಿ ಇರ್ಬೇಕು ಬೇಡಿದಷ್ಟು ವರದಕ್ಷಿಣೆ ಕೊಟ್ಟು ಮದುವೆ ಮಾಡಿದ್ರು. ಆದ್ರೆ, ಮದುವೆಯಾದ ನಂತ್ರವೂ ಹಣದಾಹಿ ಗಂಡ, ವಿಷ್ಣು, ಉಮಾಳಿಗೆ ಸಾಕಷ್ಟು ಕಿರುಕುಳ ನೀಡ್ತಾಯಿದ್ದ. ಹಾಗೇ ವರದಕ್ಷಿಣೆ ತರುವಂತೆ ಕಿರುಕುಳ ನೀಡ್ತಾಯಿದ್ದನಂತೆ.

ಮದುವೆ ಸಮಯದಲ್ಲಿ 40 ಗ್ರಾಂ ಚಿನ್ನ ಹಾಗೂ 4 ಲಕ್ಷ ಹಣವನ್ನು ನೀಡಿ ಮದುವೆ ಮಾಡಿದ್ರು. ಇನ್ನೂ 50 ಸಾವಿರ ರೂಪಾಯಿ ವರದಕ್ಷಣೆ ಹಣವನ್ನು ಕೊಡುವದು ಬಾಕಿ ಇತ್ತು. ಹೀಗಾಗಿ ಗಂಡ ಹಾಗೂ ಅತ್ತೆ ಸಾಕಷ್ಟು ಕಿರುಕುಳ ನೀಡ್ತಾಯಿದ್ರು. ನಿನ್ನೆ ಸಂಜೆ ಮನೆಯಲ್ಲಿಯೇ ಉಮಾ ಪ್ಯಾನ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಾವಿಗೆ ಪತಿ ಹಾಗೂ ಅತ್ತೆಯೇ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌ ಹೀಗಾಗಿ ಮೃತಳ ಕುಟುಂಬಸ್ಥರ ಆಕ್ರಂಧನ ಮುಗಿಲು ಮಟ್ಟಿದೆ.‌ ಕಿರಾತಕ ಗಂಡನಿಗೆ ತಕ್ಕ ಶಿಕ್ಷೆ ಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.

ಇನ್ನು ವಿಷ್ಣು ಹಾಗೂ ಉಮಾ ಕಳೆದ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ರು. ಬಿಎಸ್ಸಿ ಓದಿದ್ದ ಉಮಾ ಒಳ್ಳೆಯ ಸಂಬಂಧ ಅಂತಾ ಎಂಎ ಮುಗಿಸಿದ ವಿಷ್ಣುವಿನ ಜೊತೆಗೆ ಮದುವೆ ಮಾಡಿದ್ರು. ಈ ವಿಷ್ಣು ಬಡ್ಡಿ ವ್ಯವಹಾರ ಮಾಡ್ತಾಯಿದ್ದು, ಹಣದ ದಾಸನಾಗಿದ್ದ. ಬರೀ ಹಣ ಕೊಡುವಂತೆ ಕಿರುಕುಳ ನೀಡ್ತಾಯಿದ್ದನಂತೆ. ಉಮಾಳ ಜೊತೆಗೆ ಅಷ್ಟೊಂದು ಸರಿಯಾಗಿ ವರ್ತನೆ ಮಾಡ್ತಾಯಿರಲ್ಲಿಲ್ಲ. ಹೀಗಾಗಿ ಮೊನ್ನೆ ಶ್ರಾವಣಕ್ಕೆ ಅಂತ ತವರು ಮನೆಗೆ ಹೋಗಿದ್ದ ಉಮಾ ಮೊನ್ನೆ ಸೋಮವಾರ ತವರು ಮನೆಯಿಂದ ಬಂದಿದ್ದಳ್ಳು. ಆದ್ರೆ, ನಿನ್ನೆ ಗಂಡನ ಮನೆಯಲ್ಲಿ ಅದೇನ್ ಆಯ್ತೋ ಗೋತ್ತಿಲ್ಲ ಸಂಜೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Also Read: ಮದುವೆಯಾಗಿ 5 ವರ್ಷಗಳಲ್ಲಿ ಸ್ಮಶಾನ ಸೇರಿದ ಗೃಹಿಣಿ, ಗಂಡನ ವಿವಾಹೇತರ ಸಂಬಂಧ ಕಾರಣವಾಯಿತಾ?

ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು. ಗಂಡನ ಮನೆಗೆ ಮಣ್ಣು ತೂರಿ ಆಕ್ರೋಶ ಹೊರಹಾಕಿದ್ರು. ಆ್ಯಂಬುಲೆನ್ಸ್ ಮೂಲಕ ಉಮಾಳ ಶವವನ್ನು ಶವ ಪರೀಕ್ಷೆಗೆ ಕಳುಹಿಸಿಲು ಬಿಡ್ತಾಯಿಲ್ಲಾ, ಮದುವೆ ಸಮಯದಲ್ಲಿನ ವರದಕ್ಷಿಣೆ ಹಾಗೂ ಆರೋಪಿ ವಿಷ್ಣುವನ್ನು ಬಂಧಿಸಬೇಕು ಎಂದು ಪಟ್ಟು ಹಾಡಿದ್ದಾರೆ. ಆ್ಯಂಬುಲೆನ್ಸ್ ಅಡ್ಡಗಟ್ಟಿ ಆಕ್ರೋಶ ಹೊರಹಾಕಿದ್ರು. ನಾಪತ್ತೆಯಾದ ವಿಷ್ಣುನನ್ನು ಬಂಧಿಸಬೇಕು ಎಂದು ಮೃತಳ ಸಹೋದರ ರಮೇಶ್ ಒತ್ತಾಯ ಮಾಡಿದ್ದಾರೆ. ಪೊಲೀಸ್ರು ಸಾಕಷ್ಟು ಮನವೊಲಿಸಲು ಯತ್ನಿಸಿದ್ರು ಜಗ್ಗದ ಕುಟುಂಬಸ್ಥರು ಧನದಾಹಿ ಗಂಡ, ಅತ್ತೆಯನ್ನು ತಕ್ಷಣ ಬಂಧಿಸಬೇಕು ಅಂತ ಪಟ್ಟು ಹಿಡಿದ್ರು..

ರಾಣಿಯಂತೆ ಸಾಕಿದ ಮಗಳನ್ನು ಗಿಡಗನಂತೆ ಕಿರಾತನಿಗೆ ಕೊಟ್ಟು ನಮ್ಮ ಮಗಳನ್ನು ಕಳೆದುಕೊಂಡೆವು ಅಂತ ಕಣ್ಣೀರು ಹಾಕಿದ್ರು. ಸಾಕಷ್ಟು ವರದಕ್ಷಿಣೆ ನೀಡಿ ಅದ್ದೂರಿಯಾಗಿ ಮದುವೆ ಮಾಡಿದ್ರು. ಆದ್ರೆ ಗಂಡನ ವರದಕ್ಷಿಣೆ ಆಸೆಗಾಗಿ ಬದುಕಿ ಬಾಳಬೇಕಾದ ಉಮಾ ಸಣ್ಣ ವಯಸ್ಸಿನಲ್ಲೇ ಮಸಣ ಸೇರಿದ್ದಾಳೆ. ನಾಪತ್ತೆಯಾದ ಕಿರಾತಕ ಗಂಡ ವಿಷ್ಣುನನ್ನು ಬಂಧಿಸುವಂತೆ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ನೂರಾರು ಕನಸು ಕಂಡು ಮದುವೆಯಾದ ಉಮಾ ನಾಲ್ಕೇ ತಿಂಗಳಲ್ಲಿ ಸಾವಿನ ಮನೆ ಸೇರಿದ್ದು, ದುರಂತವೇ ಸರಿ.

ಮತ್ತಷ್ಟು ಕ್ರೈಂ ನ್ಯೂಸ್​ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:16 pm, Wed, 20 September 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್