ಅದಾನಿ ಸಂಸ್ಥೆಗೆ ಮಂಗಳೂರು ವಿಮಾನ ನಿಲ್ದಾಣ ಗುತ್ತಿಗೆ; ಮಧ್ಯ ಪ್ರವೇಶಿಸಲು ಹೈಕೋರ್ಟ್ ನಕಾರ
Mangaluru International Airport: ವಿಮಾನ ನಿಲ್ದಾಣ ಗುತ್ತಿಗೆಗೆ ಸಂಬಂಧಿಸಿ ಸರ್ಕಾರದ ನೀತಿಯಲ್ಲಿ ಮಧ್ಯ ಪ್ರವೇಶಿಸಲು ಹೈಕೋರ್ಟ್ ನಕಾರ ವ್ಯಕ್ತಪಡಿಸಿದೆ.
ಬೆಂಗಳೂರು: ಅದಾನಿ ಎಂಟರ್‌ಪ್ರೈಸಸ್‌ಗೆ ಮಂಗಳೂರು ವಿಮಾನ ನಿಲ್ದಾಣವನ್ನು ಗುತ್ತಿಗೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ವಿಮಾನ ನಿಲ್ದಾಣ ಗುತ್ತಿಗೆಗೆ ಸಂಬಂಧಿಸಿ ಸರ್ಕಾರದ ನೀತಿಯಲ್ಲಿ ಮಧ್ಯ ಪ್ರವೇಶಿಸಲು ನಕಾರ ವ್ಯಕ್ತಪಡಿಸಿದೆ. ಈಮುನ್ನ ವಿಮಾನ ನಿಲ್ದಾಣದ ನೌಕರರ ಸಂಘ ರಿಯಾಯಿತಿ ಒಪ್ಪಂದ ಪ್ರಶ್ನಿಸಿದ್ದ ಪಿಐಎಲ್ ಸಲ್ಲಿಸಿತ್ತು. ಅರ್ಜಿಯಲ್ಲಿ ವಿಮಾನ ನಿಲ್ದಾಣದ ಬಹುತೇಕ ಸೇವೆಗಳನ್ನು ಹಸ್ತಾಂತರಿಸುವುದನ್ನು ಪ್ರಶ್ನಿಸಲಾಗಿತ್ತು. ಆದರೆ ಬಿಡ್ ಆಹ್ವಾನಿಸಿಯೇ ವಿಮಾನ ನಿಲ್ದಾಣವನ್ನು ಗುತ್ತಿಗೆಗೆ ನೀಡಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಸಮರ್ಥಿಸಿಕೊಂಡಿತ್ತು.
ಮಂಗಳೂರು ವಿಮಾನ ನಿಲ್ದಾಣ ನಾಮಫಲಕದಿಂದ ಅದಾನಿ ಏರ್ಪೋರ್ಟ್ಸ್ ಟ್ಯಾಗ್ ಮಾಯ ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ನಿರಂತರ ಪ್ರತಿಭಟನೆಗಳ ನಂತರ ಮಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (MIA) ನಾಮ ಫಲಕಗಳಿಂದ ‘ಅದಾನಿ ಏರ್ಪೋರ್ಟ್ಸ್ ‘ (Adani airports) ಎಂಬ ಟ್ಯಾಗ್ ಅನ್ನು ತೆಗೆದುಹಾಕಲಾಗಿದೆ. ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಗುಂಪು ವಹಿಸಿಕೊಳ್ಳುವ ಮೊದಲು ಇದ್ದ ಮೂಲ ನಾಮಫಲಕಗಳನ್ನು ಈಗ ಪುನಃಸ್ಥಾಪಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಚರ್ಚಿಸಿದ ಸಾಮಾಜಿಕ ಕಾರ್ಯಕರ್ತ ದಿಲ್‌ರಾಜ್ ಆಳ್ವ ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಅದಾನಿ ಗ್ರೂಪ್ ಎಂಬ ಹೆಸರನ್ನು ಬದಲಾಯಿಸಿದೆ ಎಂದು ಆಳ್ವಾ ಹೇಳಿದರು. ನಿರ್ವಹಣಾ ಕಾರ್ಯಾಚರಣೆಗಳನ್ನು ಕೈಗೆತ್ತಿಕೊಂಡ ನಂತರ ನಾಮಫಲಕಗಳಿಗೆ ‘ಅದಾನಿ ವಿಮಾನ ನಿಲ್ದಾಣ’ ಸೇರಿಸಿದರು. ಆದಾಗ್ಯೂ, ವಿಮಾನ ನಿಲ್ದಾಣದ ಕಾರ್ಯಾಚರಣೆ ಮತ್ತು ನಿರ್ವಹಣೆಯ ಒಪ್ಪಂದದ ಪ್ರಕಾರ, ವಿಮಾನನಿಲ್ದಾಣದ ಹೆಸರನ್ನು ಬದಲಾಯಿಸಲು ಯಾವುದೇ ಅವಕಾಶವಿರಲಿಲ್ಲ, ಇದನ್ನು ಆರ್‌ಟಿಐ ಪ್ರತ್ಯುತ್ತರದ ಮೂಲಕ ಬಹಿರಂಗಪಡಿಸಲಾಯಿತು.
ಈ ವರ್ಷದ ಮಾರ್ಚ್‌ನಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) ಮತ್ತು ಎಂಐಎ ನಿರ್ದೇಶಕರಿಗೆ ನಾಮಫಲಕಗಳಿಗೆ ಲಗತ್ತಿಸಲಾದ ‘ಅದಾನಿ’ ಟ್ಯಾಗ್ ಅನ್ನು ಪ್ರಶ್ನಿಸಿ ಕಾನೂನು ನೋಟಿಸ್ ನೀಡಲಾಗಿದೆ.
ಈ ನಿಟ್ಟಿನಲ್ಲಿ ನಡೆಸಿದ ಕಾನೂನು ಹೋರಾಟವು ಈಗ ಫಲಿತಾಂಶವನ್ನು ನೀಡಿದೆ. ಶುಕ್ರವಾರದಿಂದ ಮೂಲ ನಾಮ ಫಲಕವನ್ನು ಮರುಸ್ಥಾಪಿಸಲಾಗಿದೆ. ಎಂಐಎ ಅಧಿಕೃತ ಫೇಸ್ಬುಕ್ ಮತ್ತು ಟ್ವಿಟ್ಟರ್ ಖಾತೆಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಆಳ್ವಾ ಹೇಳಿದ್ದಾರೆ.
3 ತಿಂಗಳಲ್ಲಿ ಕೆ.ಆರ್.ಮಾರುಕಟ್ಟೆಯಲ್ಲಿ ಅಕ್ರಮ ಮಳಿಗೆ ತೆರವಿಗೆ ಸೂಚನೆ ಕೆ.ಆರ್.ಮಾರುಕಟ್ಟೆಯಲ್ಲಿ ಅಕ್ರಮ ಮಳಿಗೆ ತೆರವು ವಿಚಾರವಾಗಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು. ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ 3 ತಿಂಗಳಲ್ಲಿ ಅನಧಿಕೃತ, ಅಕ್ರಮ ಮಳಿಗೆಗಳನ್ನು ತೆರವುಗೊಳಿಸಲು ನಿರ್ದೇಶನ ನೀಡಿತು. ಕೆ. ಆರ್.ಮಾರುಕಟ್ಟೆಯಲ್ಲಿ ಸಾವಿರಾರು ಮಳಿಗೆಗಳ ಲೀಸ್ ಮುಗಿದಿದೆ. ಹೀಗಾಗಿ ಪಾದಚಾರಿ ಮಾರ್ಗಗಳಲ್ಲಿನ ಮಳಿಗೆ ತೆರವುಗೊಳಿಸಲಾಗುವುದು. ಸ್ಮಾರ್ಟ್ಸಿಟಿ ಯೋಜನೆಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಹೈಕೋರ್ಟಿಗೆ ಬಿಬಿಎಂಪಿಯಿಂದ ಲಿಖಿತ ಆಕ್ಷೇಪಣೆ ಸಲ್ಲಿಕೆಯಾಗಿದೆ.
ಇದನ್ನೂ ಓದಿ:
ಮಂಗಳೂರು ವಿಮಾನ ನಿಲ್ದಾಣ ನಾಮಫಲಕದಿಂದ ಅದಾನಿ ಏರ್ಪೋರ್ಟ್ಸ್ ಟ್ಯಾಗ್ ಮಾಯ
Adani Group: ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತ ಮಂಡಳಿ ಸುಪರ್ದಿಗೆ ಪಡೆದ ಅದಾನಿ ಸಮೂಹ
(Karnataka High Court dismisses PIL of questioning Mangaluru International Airport to Adani Group)