ದೇವೇಗೌಡರ ಕುಟುಂಬ ಎಂಬ ಕಾರಣಕ್ಕೆ ಡಾ.ಮಂಜುನಾಥ್ ಮೇಲೆ ತನಿಖೆ ಮಾಡುವ ಕುಕೃತ್ಯಕ್ಕೆ‌ ಮುಂದಾದ್ರು -ಸಿಎಂ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿ ಕಿಡಿ

| Updated By: ಆಯೇಷಾ ಬಾನು

Updated on: Feb 27, 2024 | 12:31 PM

ಮಂಗಳೂರಿನಲ್ಲಿ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಡವರಿಗಾಗಿ ತಮ್ಮ ಬದುಕನ್ನು ಸಮರ್ಪಣೆ ಮಾಡಿದವರು ಡಾ.ಮಂಜುನಾಥ್. ಅವರ ಬಗ್ಗೆ ತನಿಖೆ ಮಾಡುವ ಕುಕೃತ್ಯಕ್ಕೆ‌ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ ಎಂದು ಕಿಡಿಕಾರಿದ್ದಾರೆ.

ದೇವೇಗೌಡರ ಕುಟುಂಬ ಎಂಬ ಕಾರಣಕ್ಕೆ ಡಾ.ಮಂಜುನಾಥ್ ಮೇಲೆ ತನಿಖೆ ಮಾಡುವ ಕುಕೃತ್ಯಕ್ಕೆ‌ ಮುಂದಾದ್ರು -ಸಿಎಂ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿ ಕಿಡಿ
ಕೋಟ ಶ್ರೀನಿವಾಸ ಪೂಜಾರಿ
Follow us on

ಮಂಗಳೂರು, ಫೆ.27: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಮಂಗಳೂರಿನಲ್ಲಿ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ. 15 ವರ್ಷಗಳ ಕಾಲ ಬಡವರಿಗಾಗಿ ತಮ್ಮ ಬದುಕನ್ನು ಸಮರ್ಪಣೆ ಮಾಡಿದವರು ಡಾ.ಮಂಜುನಾಥ್ (Dr Manjunath) ಅವರ ಬಗ್ಗೆ ತನಿಖೆ ಮಾಡುವ ಕುಕೃತ್ಯಕ್ಕೆ‌ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ರಾಜಕಾರಣವನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗ್ತಿದ್ದಾರೆ ಎಂಬುದಕ್ಕೆ ಇದೊಂದು ದೃಷ್ಟಾಂತ ಎಂದು ಕೋಟ ಶ್ರೀನಿವಾಸ ಪೂಜಾರಿ (Kota Srinivas Pujari) ಅವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ. ಮಂಜುನಾಥ್ ಅವರನ್ನು ವೃತ್ತಿಯಿಂದ ಕೆಳಗಿಳಿಸಿದ್ದಾರೆ. ದೇವೇಗೌಡರ ಕುಟುಂಬ ಎಂಬ ಒಂದೇ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. 15 ವರ್ಷಗಳ ಕಾಲ ಬಡವರಿಗಾಗಿ ತಮ್ಮ ಬದುಕನ್ನು ಸಮರ್ಪಣೆ ಮಾಡಿದವರು ಡಾ.ಮಂಜುನಾಥ್. ಅವರ ಬಗ್ಗೆ ತನಿಖೆ ಮಾಡುವ ಕುಕೃತ್ಯಕ್ಕೆ‌ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ರಾಜಕಾರಣವನ್ನು ಯಾವ ಮಟ್ಟಕ್ಕೆ ತೆಗೆದುಕೊಂಡು ಹೋಗ್ತಿದ್ದಾರೆ ಎಂಬುದಕ್ಕೆ ಇದೊಂದು ದೃಷ್ಟಾಂತ ಎಂದರು.

ಸಂವಿಧಾನ ಉಳಿಸಬೇಕೆಂದು ಸಿದ್ದರಾಮಯ್ಯನವರು ಕೋಟ್ಯಾಂತರ ಖರ್ಚು ಮಾಡಿ ಬೆಂಗಳೂರಿನಲ್ಲಿ ಸಮಾವೇಶ ಮಾಡಿದ್ರು. ದುರಾದೃಷ್ಟಕ್ಕೆ ಸಂವಿಧಾನ ಉಳಿಸಿ ಎಂಬ ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕ್ರಮವಾಗಿ ಪರಿವರ್ತನೆ ಮಾಡಿದ್ದಾರೆ. ಪ್ರಧಾನಿ‌ ನರೇಂದ್ರ ಮೋದಿಯನ್ನು‌ ನಿಂಧಿಸುವ ಕೃತ್ಯಕ್ಕೆ ಮುಖ್ಯಮಂತ್ರಿ ಇಳಿದಿದ್ದಾರೆ. ಕೇಂದ್ರ ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು, ಪ್ರಧಾನಿಯವರನ್ನು ದೂಷಣೆ ಮಾಡಲು ಸರ್ಕಾರಿ ಖರ್ಚು ಮಾಡಿದ್ದಾರೆ. ಖರ್ಗೆಯಂತಹ ಹಿರಿಯ ರಾಜಕಾರಣಿ ಸಂವಿಧಾನಕ್ಕೆ ಧಕ್ಕೆ ಬಂದಿದೆ ಎಂದು ಹೇಳುತ್ತಾರೆ. ಆದ್ರೆ ತುರ್ತು ಪರಿಸ್ಥಿತಿಯನ್ನು ಹೇರಿದವರು ಯಾರು? ಇದನ್ನು ಖರ್ಗೆಯವರು ನೆನಪು ಮಾಡಿಕೊಳ್ಳಬೇಕು. ಕಾಂಗ್ರೆಸ್ ನವರು ಕೇವಲ‌ ರಾಜಕಾರಣಕ್ಕೆ ಬಾಬ ಸಾಹೇಬ್ ಅಂಬೇಡ್ಕರ್ ಹೆಸರು ಹೇಳ್ತಿದ್ದಾರೆ.

ಇದನ್ನೂ ಓದಿ: ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಮೇಲೆ ಎಫ್​ಐಆರ್​​​ಗೆ ಕಾರಣ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ: ಏನದು?

ರಾಹುಲ್ ಗಾಂಧಿಯವರು ಮತ್ತೆ ಭಾರತ್ ಜೋಡೋ ಮಾಡಲು ಹೊರಟಿದ್ದಾರೆ. ಇದೇ ಕಾಂಗ್ರೆಸ್ ಪಕ್ಷದ ಮುಖಂಡರು ಭಾರತ ಒಡೆದದ್ದು ಎಂದು ಇತಿಹಾಸ ಹೇಳುತ್ತೆ. ಭಾರತವನ್ನು ಒಂದುಗೂಡಿಸಿದ್ದು ನರೇಂದ್ರ ಮೋದಿಯವರೆಂದು ದಾಖಲೆಗಳು ಹೇಳುತ್ತೆ. ಭಾರತವನ್ನು ಒಡೆದವರು ಇಂದು ಭಾರತವನ್ನು ಜೋಡಿಸಿದ ನಂತರವು ಮತ್ತೆ ಭಾರತ್ ಜೋಡಿಸಿ ಎಂದು ಯಾತ್ರೆ ಮಾಡ್ತಿದ್ದಾರೆ. ಇದು ಕೇವಲ ರಾಜಕಾರಣದ ನಾಟಕ ಎಂದು ಕಾಂಗ್ರೆಸ್ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದರು.

ಅರುಣ್ ಪುತ್ತಿಲ, ಸತ್ಯಜಿತ್‌ ಸುರತ್ಕಲ್ ಬಿಜೆಪಿಯ ಒಳ್ಳೆಯ ಕಾರ್ಯಕರ್ತರು

ಇನ್ನು ಇದೇ ವೇಳೆ ಲೋಕಸಭಾ ಚುನಾವಣೆ ಸಂಬಂಧ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಪ್ರಜಾಪ್ರಭುತ್ವದಲ್ಲಿ ಅಪೇಕ್ಷಿತರು ಅವಕಾಶ ಕೊಟ್ರೆ ಚುನಾವಣೆ ನಿಲ್ಲುತ್ತೇನೆ ಅಂದ್ರೆ ಅದು ಅಶಿಸ್ತು ಆಗೋದಿಲ್ಲ. ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅಂತಿಮವಾಗಿ ರಾಜ್ಯ, ಕೇಂದ್ರದ ತಂಡ ಅಭ್ಯರ್ಥಿಯ ಘೋಷಣೆ ಮಾಡುತ್ತೆ. ಅರುಣ್ ಪುತ್ತಿಲ, ಸತ್ಯಜಿತ್‌ ಸುರತ್ಕಲ್ ಬಿಜೆಪಿಯ ಒಳ್ಳೆಯ ಕಾರ್ಯಕರ್ತರು. ಇವರೆಲ್ಲರ ಹೆಸರುಗಳನ್ನು ಗಮನಿಸಲಾಗುತ್ತೆ. ಅಂತಿಮವಾಗಿ ರಾಜ್ಯದ ಮುಖಂಡರ ಅಭಿಪ್ರಾಯ ಪಡೆದು ಕೇಂದ್ರದಿಂದ ಒಬ್ಬ ಅಭ್ಯರ್ಥಿಯನ್ನು ಘೋಷಣೆ ಮಾಡ್ತಾರೆ. ಆ ಅಭ್ಯರ್ಥಿ ಬಿಜೆಪಿಯ ಅಭ್ಯರ್ಥಿ. ಅವರ ಗೆಲುವೆ ನಮ್ಮ ಗೆಲುವು ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ