AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

500 ರೂ.ಗೆ ನವದುರ್ಗಿಯರ ದರ್ಶನ: ಮಂಗಳೂರು ದಸರಾ ಪ್ರವಾಸಕ್ಕೆ ಮತ್ತೊಂದು ಹೊಸ KSRTC ವಿಶೇಷ ಪ್ಯಾಕೇಜ್

ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ನವರಾತ್ರಿ ಉತ್ಸವಕ್ಕೆ 5 ವಿಶೇಷ 'ದಸರಾ ಪ್ರವಾಸ ಪ್ಯಾಕೇಜ್' ಘೋಷಿಸಿದೆ. ಅಕ್ಟೋಬರ್ 11-20ರವರೆಗೆ ಲಭ್ಯವಿರುವ ಈ ಪ್ಯಾಕೇಜ್‌ಗಳು ಕರಾವಳಿ ಮತ್ತು ಮಲೆನಾಡಿನ ಪ್ರಸಿದ್ಧ ದೇವಾಲಯಗಳು ಹಾಗೂ ಪ್ರವಾಸಿ ತಾಣಗಳನ್ನು ಒಳಗೊಂಡಿವೆ. ಸಾರ್ವಜನಿಕರು www.ksrtc.in ಮೂಲಕ ಮುಂಗಡ ಸೀಟು ಕಾಯ್ದಿರಿಸಬಹುದು. ಇದು ಭಕ್ತಾದಿಗಳಿಗೆ ಮತ್ತು ಪ್ರವಾಸಿಗರಿಗೆ ಉತ್ತಮ ಅವಕಾಶ.

500 ರೂ.ಗೆ ನವದುರ್ಗಿಯರ ದರ್ಶನ: ಮಂಗಳೂರು ದಸರಾ ಪ್ರವಾಸಕ್ಕೆ ಮತ್ತೊಂದು ಹೊಸ KSRTC ವಿಶೇಷ ಪ್ಯಾಕೇಜ್
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Oct 05, 2026 | 12:13 PM

Share

ಮಂಗಳೂರು, ಅ.5: ಜಿಲ್ಲೆಯಲ್ಲಿ ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ನೆರೆಯ ಮಲೆನಾಡು ಭಾಗದ ಪ್ರಸಿದ್ಧ ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ಮತ್ತು ಪ್ರವಾಸಿಗರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಮಂಗಳೂರು ವಿಭಾಗವು ಸಿಹಿ ಸುದ್ದಿ ನೀಡಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಬರೋಬ್ಬರಿ 5 ವಿಶೇಷ ‘ದಸರಾ ಏಕದಿನ ಪ್ರವಾಸ ಪ್ಯಾಕೇಜ್’ ಸೇವೆಗಳನ್ನು ಪ್ರಕಟಿಸಲಾಗಿದೆ.

ಈ ವಿಶೇಷ ದಸರಾ ಬಸ್‌ಗಳ ಸೇವೆಯು ಅಕ್ಟೋಬರ್ 11 ರಿಂದ ಅಕ್ಟೋಬರ್ 20 ರವರೆಗೆ ಲಭ್ಯವಿರಲಿದ್ದು, ಸಾರ್ವಜನಿಕರು ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡ ಸೀಟು ಕಾಯ್ದಿರಿಸಬಹುದಾಗಿದೆ ಎಂದು ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು ದಸರಾ ‘ನವದುರ್ಗಾ ದರ್ಶನ’ ಪ್ಯಾಕೇಜ್

ಸಮಯ: ಬೆಳಿಗ್ಗೆ 8:00 ಗಂಟೆಗೆ ಮಂಗಳೂರು ಬಸ್ ನಿಲ್ದಾಣದಿಂದ ಹೊರಟು, ರಾತ್ರಿ 8:30 ಕ್ಕೆ ಮರಳಿ ಆಗಮಿಸಲಿದೆ.

ಸಂದರ್ಶಿಸುವ ತಾಣಗಳು: ಮಾರೋಳಿಯ ಸೂರ್ಯ ನಾರಾಯಣ ದೇವಸ್ಥಾನ, ಬೋಳಾರದ ಮಾರಿಅಮ್ಮ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ಹೊಸನಾಡಿನ ಕೊಡಿಯಾಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ, ಸಸಿಹಿತ್ಲು ಭಗವತಿ ದೇವಸ್ಥಾನ, ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ, ಉರ್ವ ಮಾರಿಅಮ್ಮ ದೇವಸ್ಥಾನ ಹಾಗೂ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ.

ಟಿಕೆಟ್ ದರ: ಹಿರಿಯರಿಗೆ (Adults) 500 ರೂ, ಮಕ್ಕಳಿಗೆ (6 ರಿಂದ 12 ವರ್ಷ) 400 ರೂ.

ಮಂಗಳೂರು – ತಲಕಾವೇರಿ – ಭಾಗಮಂಡಲ ಪ್ಯಾಕೇಜ್

ಸಮಯ: ಬೆಳಿಗ್ಗೆ 7:00 ಗಂಟೆಗೆ ನಿರ್ಗಮಿಸಿ, ರಾತ್ರಿ 9:30 ಕ್ಕೆ ಮಂಗಳೂರಿಗೆ ವಾಪಸ್.

ಸಂದರ್ಶಿಸುವ ತಾಣಗಳು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ತಲಕಾವೇರಿ ದೇವಸ್ಥಾನ, ಭಾಗಮಂಡಲ ಭಾಗಂಡೇಶ್ವರ ದೇವಸ್ಥಾನ, ತ್ರಿವೇಣಿ ಸಂಗಮ, ಅಬ್ಬಿ ಜಲಪಾತ ಹಾಗೂ ರಾಜಾಸೀಟ್ (ಮಡಿಕೇರಿ).

ಟಿಕೆಟ್ ದರ: ಹಿರಿಯರಿಗೆ 600, ಮಕ್ಕಳಿಗೆ 500 ರೂ.

ಮಂಗಳೂರು – ಕೊಲ್ಲೂರು ಕ್ಷೇತ್ರ ದರ್ಶನ ಪ್ಯಾಕೇಜ್

ಸಮಯ: ಬೆಳಿಗ್ಗೆ 8:00 ಗಂಟೆಗೆ ನಿರ್ಗಮಿಸಿ, ರಾತ್ರಿ 8:00 ಕ್ಕೆ ವಾಪಸ್.

ಸಂದರ್ಶಿಸುವ ತಾಣಗಳು: ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ, ಕಾಪು ಮಾರಿಅಮ್ಮ ದೇವಸ್ಥಾನ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಹಾಗೂ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ.

ಟಿಕೆಟ್ ದರ: ಹಿರಿಯರಿಗೆ 600, ಮಕ್ಕಳಿಗೆ 500 ರೂ.

ಮಂಗಳೂರು – ಸಿಗಂಧೂರು ಕ್ಷೇತ್ರ ದರ್ಶನ ಪ್ಯಾಕೇಜ್

ಸಮಯ: ಬೆಳಿಗ್ಗೆ 7:00 ಗಂಟೆಗೆ ನಿರ್ಗಮಿಸಿ, ರಾತ್ರಿ 7:30 ಕ್ಕೆ ವಾಪಸ್.

ಸಂದರ್ಶಿಸುವ ತಾಣಗಳು: ಕುಂದಾಪುರ, ಸಿಗಂಧೂರು ಚೌಡೇಶ್ವರಿ ದೇವಸ್ಥಾನ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ.

ಟಿಕೆಟ್ ದರ: ಹಿರಿಯರಿಗೆ 700, ಮಕ್ಕಳಿಗೆ 600 ರೂ.

ಮಂಗಳೂರು – ಶೃಂಗೇರಿ ದಸರಾ ಪ್ಯಾಕೇಜ್

ಸಮಯ: ಬೆಳಿಗ್ಗೆ 8:00 ಗಂಟೆಗೆ ನಿರ್ಗಮಿಸಿ, ರಾತ್ರಿ 7:30 ಕ್ಕೆ ವಾಪಸ್.

ಸಂದರ್ಶಿಸುವ ತಾಣಗಳು: ಕೊಡಿಯಾಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನ, ಶೃಂಗೇರಿ ಶಾರದಾಂಬೆ ದೇವಸ್ಥಾನ, ಹರಿಹರಪುರ ಮಠ, ಕಿಗ್ಗಾದ ಋಷ್ಯಶೃಂಗೇಶ್ವರ ದೇವಸ್ಥಾನ.

ಟಿಕೆಟ್ ದರ: ಹಿರಿಯರಿಗೆ 600, ಮಕ್ಕಳಿಗೆ 500 ರೂ.

ಇದನ್ನೂ ಓದಿ: ಹೊಸ ದಾಖಲೆ ಮಾಡಿದ ‘ಬ್ರಹ್ಮೋಸ್’: ಜಗತ್ತಿನ ಮುಂದೆ ಪವರ್ ತೋರಿಸಿದ ಭಾರತ

ಸಂಪರ್ಕ ಹಾಗೂ ಮುಂಗಡ ಬುಕಿಂಗ್ ವಿವರಗಳು:

ವಿಶೇಷ ಪ್ರವಾಸದ ಮುಂಗಡ ಆನ್‌ಲೈನ್ ಬುಕಿಂಗ್‌ಗಾಗಿ www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿ ಹಾಗೂ ನೇರ ಬುಕಿಂಗ್‌ಗೆ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:

ಮುಂಗಡ ಬುಕಿಂಗ್ ಕೌಂಟರ್ (ಮಂಗಳೂರು): 9663211553

ಮಂಗಳೂರು ಘಟಕ-1 ವ್ಯವಸ್ಥಾಪಕರು: 7760990713

ಮಂಗಳೂರು ಘಟಕ-3 ವ್ಯವಸ್ಥಾಪಕರು: 7760990723

ಮಂಗಳೂರು ಬಸ್ ನಿಲ್ದಾಣ ವಿಚಾರಣೆ: 7760990720

ವಿಭಾಗೀಯ ಕಚೇರಿ: 7760990711 / 9663266221

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ರಿಟ್ ಅರ್ಜಿ, ಸುಪ್ರೀಂನಲ್ಲಿ ವಿಚಾರಣೆ
ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ರಿಟ್ ಅರ್ಜಿ, ಸುಪ್ರೀಂನಲ್ಲಿ ವಿಚಾರಣೆ
ಶಂಕರ್ ನಾಗ್ ಮಗಳು ಚಿತ್ರರಂಗಕ್ಕೇಕೆ ಬಂದಿಲ್ಲ? ಉತ್ತರಿಸಿದ ಅನಂತ್ ನಾಗ್
ಶಂಕರ್ ನಾಗ್ ಮಗಳು ಚಿತ್ರರಂಗಕ್ಕೇಕೆ ಬಂದಿಲ್ಲ? ಉತ್ತರಿಸಿದ ಅನಂತ್ ನಾಗ್
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದ ರೇಣುಕಾಚಾರ್ಯ
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR
ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಏಳು ಜನರ ವಿರುದ್ಧ FIR
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಪೈಪ್‌ಲೈನ್ ಒಡೆದು ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ಇಂದು ಈ ರಾಶಿಯವರು ಬೇಜವಾಬ್ದಾರಿತನದಿಂದ ದೂರವಿರಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!