ಮಂಗಳೂರು: ಕಡಲತಡಿ ಮಂಗಳೂರಿನಲ್ಲೊಂದು ಹೀನಾತಿಹೀನ ಕೃತ್ಯ ನಡೆದಿದೆ. ಲೈಂಗಿಕ ಕಿರುಕುಳ ನೀಡಲು ಎರಡು ವರ್ಷದ ಹೆಣ್ಣು ಮಗುವನ್ನು ಕಿರಾತಕರು ಹೊತ್ತೊಯ್ದಿದ್ದಾರೆ. ನಿನ್ನೆ ಸಂಜೆ ನಾಲ್ಕು ಗಂಟೆ ಸುಮಾರಿಗೆ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುಕೃತ್ಯ ನಡೆದಿದೆ. ಫಿಶ್ ಕಟ್ಟಿಂಗ್ ಮಾಡುವ ಫ್ಯಾಕ್ಟರಿ ಬಳಿ ಬಿಹಾರ ಮೂಲದ ಕಾರ್ಮಿಕರು ನೆಲೆಸಿದ್ದಾರೆ. ಕಾರ್ಮಿಕರೆಲ್ಲರ ಮಕ್ಕಳನ್ನ ನೋಡಿಕೊಳ್ಳಲು ಒಂದು ಕ್ಯಾಂಪ್ ಇದೆ. ಆ ಶಿಬಿರದಿಂದ ಹೆಣ್ಣು ಮಗುವನ್ನು ಚಂದನ್ ಎಂಬ ಆರೋಪಿ ಹೊತ್ತೊಯ್ದಿದ್ದಾನೆ. ಲೈಂಗಿಕ ಕಿರುಕುಳ ನೀಡಿ ಮಗುವನ್ನು ಫಿಶ್ ಕಟ್ಟಿಂಗ್ ಟ್ಯಾಂಕ್ ಗೆ ಬಿಸಾಡಿ ಹೋಗಿದ್ದಾನೆ.
ನಾಲ್ಕು ಗಂಟೆಗಳ ಕಾಲ ಜೀವನ್ಮರಣದ ಮಧ್ಯೆ ಮಗು ಹೋರಾಡಿದೆ. ಫಿಶ್ ಕಟ್ಟಿಂಗ್ ಟ್ಯಾಂಕ್ ನಲ್ಲಿ ಮಗುವಿನ ಜೀವನ್ಮರಣ ಹೋರಾಟ ನಡೆಸುವಾಗ ಟ್ಯಾಂಕ್ ನಲ್ಲಿದ್ದ ಉಪ್ಪು ನೀರು ಸೇವಿಸಿ ಅಸ್ವಸ್ಥಗೊಂಡಿದ್ದಾಳೆ. ಶ್ವಾಸಕೋಶಕ್ಕೆ ನೀರು ತುಂಬಿಕೊಂಡು ಮಗು ಗಂಭೀರವಾಗಿ ಅಸ್ವಸ್ಥಗೊಂಡಿದ್ದಾಳೆ. ವೆನ್ಲಾಕ್ ಮಕ್ಕಳ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಲಾಗಿದೆ.
ಸೊಸೆಯ ಕಿರುಕುಳಕ್ಕೆ ಬೇಸತ್ತು ಕೆರೆಗೆ ಹಾರಿದ ಅತ್ತೆ
ಗದಗ: ಸೊಸೆಯ ಕಿರುಕುಳಕ್ಕೆ ಬೇಸತ್ತು ಅತ್ತೆಯೊಬ್ಬರು ಇಲ್ಲಿನ ಭಿಷ್ಮ ಕೆರೆಗೆ ಹಾರಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಶಾಂತಕ್ಕ ಹೀರಮಠ(70) ಅವರನ್ನ ರಕ್ಷಣೆ ಮಾಡಲಾಗಿದೆ. ಗದಗದ ಮಸಾರಿ ಕಾಲೋನಿಯ ನಿವಾಸಿ ಶಾಂತಕ್ಕ ಎಂಬುವವರಿಗೆ ಊಟ ಮತ್ತು ಮಲಗುವುದಕ್ಕೆ ಬೆಡ್‌ಶೀಟ್ ನೀಡುತ್ತಿರಲಿಲ್ಲ. ಚೇರ್ ಮೇಲೆ ಕೂರುವುದಕ್ಕೂ ಅವರ ಸೊಸೆ ಬಿಡುತ್ತಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗದಗ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Puneeth Rajkumar Eye Donate: ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ. ಭುಜಂಗಶೆಟ್ಟಿ ಸುದ್ದಿಗೋಷ್ಠಿ | Tv9 Kannada
(labourer physically abuses girl child in fish cutting factory at mangalore port)
Published On - 12:06 pm, Mon, 1 November 21