AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: ಸಿಡಿಲು ಬಡಿದು ಇಬ್ಬರು ಮೃತ್ಯು; ಕೆಲವರಿಗೆ ಗಾಯ

ಅರ್ಬಿ ಪರಿಸರದಲ್ಲಿ ಶೆಡ್​ನಲ್ಲಿದ್ದ ಸ್ಥಳೀಯ ಕಾರ್ಮಿಕರಾದ ಗಣೇಶ, ಸಂದೀಪ್, ಪ್ರವೀಣ್​ಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಂಗಳೂರು: ಸಿಡಿಲು ಬಡಿದು ಇಬ್ಬರು ಮೃತ್ಯು; ಕೆಲವರಿಗೆ ಗಾಯ
ಸಾಂಕೇತಿಕ ಚಿತ್ರ
TV9 Web
| Updated By: ganapathi bhat|

Updated on: Nov 01, 2021 | 8:43 PM

Share

ಮಂಗಳೂರು: ಇಲ್ಲಿನ ಮೂಡಬಿದ್ರೆ ತಾಲೂಕಿನ ಕಂಚಿಬೈಲು ಪ್ರದೇಶದಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ. ಯಶವಂತ್ (25) ಹಾಗೂ ಮಣಿಪ್ರಸಾದ್ (25) ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು. ಅಷ್ಟೇ ಅಲ್ಲದೆ, ಅರ್ಬಿ ಪರಿಸರದಲ್ಲಿ ಶೆಡ್​ನಲ್ಲಿದ್ದ ಸ್ಥಳೀಯ ಕಾರ್ಮಿಕರಾದ ಗಣೇಶ, ಸಂದೀಪ್, ಪ್ರವೀಣ್​ಗೆ ಗಾಯವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಂಗಳೂರು: ವಿದ್ಯುತ್ ತಂತಿ ತುಳಿದು ಬಾಲಕ ಸಾವು ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ತುಳಿದು ಬಾಲಕ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ರಾಮಚಂದ್ರಾಪುರದಲ್ಲಿ ಸಂಭವಿಸಿದೆ. ಘಟನೆಯಲ್ಲಿ ಬಾಲಕ ಮಣಿ (12) ಮೃತಪಟ್ಟಿದ್ದಾರೆ. ಟ್ರಾನ್ಸ್​​ಫಾರ್ಮರ್ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಬಾಲಕ ಸಾವನ್ನಪ್ಪಿದ್ದಾರೆ. ಈ ಸಮಸ್ಯೆಯ ಬಗ್ಗೆ ಮನವಿ ಮಾಡಿದ್ದರೂ ಅಧಿಕಾರಿಗಳಿಂದ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪ ಕೇಳಿಬಂದಿದೆ. ವಿದ್ಯಾರಣ್ಯಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ತುಮಕೂರು: ದೇವಸ್ಥಾನದಲ್ಲಿ ಯುವಕ ನೇಣಿಗೆ ಶರಣು ತುಮಕೂರು ತಾಲೂಕಿನ ಮಂಚಕಲ್​ಕುಪ್ಪೆ ಬೆಟ್ಟದ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಯುವಕ ನೇಣಿಗೆ ಶರಣಾದ ದುರ್ಘಟನೆ ಸಂಭವಿಸಿದೆ. ಒಡಿಶಾದ ತರುಣ್​ ಕುಮಾರ್ ಮಂಡಲ್ (24) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತರುಣ್​ ಹಿರೇಹಳ್ಳಿಯ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಗದಗ: ಭಿಷ್ಮ ಕೆರೆಗೆ ಹಾರಿದ್ದ ಮಹಿಳೆ ರಕ್ಷಣೆ ಸೊಸೆಯ ಕಿರುಕುಳಕ್ಕೆ ಬೇಸತ್ತು ಕೆರೆಗೆ ಹಾರಿದ ಅತ್ತೆಯನ್ನು ರಕ್ಷಣೆ ಮಾಡಿದ ಘಟನೆ ಗದಗದಲ್ಲಿ ನಡೆದಿದೆ. ಗದಗದ ಮಸಾರಿ ಕಾಲೋನಿಯ ನಿವಾಸಿ ಶಾಂತಕ್ಕ ಭಿಷ್ಮ ಕೆರೆಗೆ ಹಾರಿದ್ದರು. ಶಾಂತಕ್ಕ ಹಿರೇಮಠ (70) ಎಂಬವರನ್ನು ಬಳಿಕ ರಕ್ಷಣೆ ಮಾಡಲಾಗಿದೆ. ಅತ್ತೆ ಶಾಂತಕ್ಕಗೆ ಊಟ, ಮಲಗುವುದಕ್ಕೆ ಬೆಡ್‌ಶೀಟ್, ಚೇರ್ ಮೇಲೆ ಕೂರುವುದಕ್ಕೂ ಬಿಡದ ಆರೋಪ ಕೇಳಿಬಂದಿದೆ. ಇದರಿಂದ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಅತ್ತೆಯನ್ನು ಕಾಪಾಡಲಾಗಿದೆ. ಗದಗ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 188 ಜನರಿಗೆ ಕೊರೊನಾ ದೃಢ; 2 ಮಂದಿ ಸಾವು

ಇದನ್ನೂ ಓದಿ: ಅಡೆನ್​ನಲ್ಲಿ ಮತ್ತೆ ಸ್ಫೋಟ, 6 ಮಂದಿ ಸಾವು; ಈ ಬಾರಿ ಏರ್​​ಪೋರ್ಟ್​​ನಲ್ಲಿ ನಡೆದ ದುರಂತ