ಮಂಗಳೂರು: ಲವರ್ ಔಟಿಂಗ್ ಬಂದಿಲ್ಲವೆಂದು ಪಿಜಿಗೆ ಕಲ್ಲೆಸೆದ ಯುವಕ, ಸಾರ್ವಜನಿಕರಿಂದ ಧರ್ಮದೇಟು

ತನ್ನ ಪ್ರಿಯತಮೆ ಔಟಿಂಗ್ ಬಂದಿಲ್ಲವೆಂದು ಯುವಕನೊಬ್ಬ ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ತೂರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸೆಂಟ್ ಆಗ್ನೇಸ್ ಕಾಲೇಜು ಬಳಿ ನಡೆದಿದೆ. ಗಾಜು ಪುಡಿಯಾಗಿದ್ದರಿಂದ ಸಾರ್ವಜನಿಕರು ಯುವಕನಿಗೆ ಧರ್ಮದೇಟು ನೀಡಿದ್ದಾರೆ.

ಮಂಗಳೂರು: ಲವರ್ ಔಟಿಂಗ್ ಬಂದಿಲ್ಲವೆಂದು  ಪಿಜಿಗೆ ಕಲ್ಲೆಸೆದ ಯುವಕ, ಸಾರ್ವಜನಿಕರಿಂದ ಧರ್ಮದೇಟು
ಔಟಿಂಗ್ ಬಂದಿಲ್ಲವೆಂದು ಲವರ್ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ತೂರಿದ ಯುವಕನಿಗೆ ಧರ್ಮದೇಟು
Updated By: Rakesh Nayak Manchi

Updated on: Nov 03, 2023 | 9:40 AM

ಮಂಗಳೂರು, ನ.3: ತನ್ನ ಲವರ್ ಔಟಿಂಗ್ ಬರಲಿಲ್ಲ ಅಂತಾ ಆಕೆ ಕೆಲಸ ಮಾಡುತ್ತಿದ್ದ ಕಟ್ಟಡಕ್ಕೆ ಯುವಕನೊಬ್ಬ ಕಲ್ಲು ತೂರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ (Mangaluru) ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗದಲ್ಲಿ ನಡೆದಿದೆ. ಕಲ್ಲೆಸೆತದಿಂದ ಕಟ್ಟಡದ ಗಾಜು ಪುಡಿಯಾಗಿದ್ದರಿಂದ ಸಾರ್ವಜನಿಕರು ಯುವಕನಿಗೆ ಧರ್ಮದೇಟು ನೀಡಿದ್ದಾರೆ.

ಸುಳ್ಯ ನಿವಾಸಿ ವಿವೇಕ್ (18) ಸುರೇಶ್ ಶೆಟ್ಟಿ ಎಂಬುವವರ ಪಿಜಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಅದರಂತೆ ನಿನ್ನೆ (ನವೆಂಬರ್ 3) ಸಂಜೆ ಔಟಿಂಗ್​ಗೆ ಬರುವಂತೆ ಕರೆ ಮಾಡಿದ್ದಾನೆ.

ಇದನ್ನೂ ಓದಿ: ಮಂಗಳೂರು: ತಾಯಿಯ ಮೇಲೆಯೇ ಅತ್ಯಾಚಾರಕ್ಕೆ ಯತ್ನ; ವಿರೋಧಿಸಿದಕ್ಕೆ ಕತ್ತು ಹಿಸುಕಿ ಕೊಂದ ಮಗ

ಆದರೆ, ಯುವತಿ ಔಟಿಂಗ್ ಬರಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪ್ರಿಯಕರ ವಿವೇಕ್, ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ. ಘಟನೆಯಲ್ಲಿ ಕಟ್ಟಡದ ಗಾಜು ಪುಡಿಯಾಗಿದ್ದು, ಸಾರ್ವಜನಿಕರು ವಿವೇಕ್​ನನ್ನು ಹಿಡಿದು ಥಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ