ಮಂಗಳೂರಿನಲ್ಲಿ ಸಾರ್ವಜನಿಕರೊಂದಿಗೆ ಮಂಗಳಮುಖಿಯರ ಕಿರಿಕಿರಿ: ವಶಕ್ಕೆ ಪಡೆದ ಪೊಲೀಸರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 30, 2023 | 3:10 PM

ಮಂಗಳೂರು ನಗರದಲ್ಲಿ ನಿನ್ನೆ(ಜು.29) ತಡರಾತ್ರಿ ಮಂಗಳಮುಖಿಯರು ಸಾರ್ವಜನಿಕರಿಗೆ ಕಿರಿಕಿರಿ ನೀಡಿದ್ದಾರೆಂದು ಆರೋಪ ಕೇಳಿಬಂದಿದ್ದು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು 10 ಕ್ಕೂ ಹೆಚ್ಚು ಮಂಗಳ ಮುಖಿಯರನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನಲ್ಲಿ ಸಾರ್ವಜನಿಕರೊಂದಿಗೆ ಮಂಗಳಮುಖಿಯರ ಕಿರಿಕಿರಿ: ವಶಕ್ಕೆ ಪಡೆದ ಪೊಲೀಸರು
ಮಂಗಳೂರಿನಲ್ಲಿ ಮಂಗಳಮುಖಿಯರಿಂದ ಗಲಾಟೆ
Follow us on

ಮಂಗಳೂರು, ಜು.30: ನಗರದಲ್ಲಿ ನಿನ್ನೆ(ಜು.29) ತಡರಾತ್ರಿ ಮಂಗಳಮುಖಿಯರು ಸಾರ್ವಜನಿಕರಿಗೆ ಕಿರಿಕಿರಿ ನೀಡಿದ್ದಾರೆಂದು ಆರೋಪ ಕೇಳಿಬಂದಿದ್ದು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು 10 ಕ್ಕೂ ಹೆಚ್ಚು ಮಂಗಳ ಮುಖಿಯರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಂಗಳೂರು(Mangalore) ಊರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ರಾತ್ರಿ ಮಂಗಳೂರು ನಗರದ ಆಸ್ಪತ್ರೆಯೊಂದರ ಬಳಿ ದಾರಿಯಲ್ಲಿ ಹೋಗುವವರ ಜೊತೆ ಅಸಭ್ಯ ವರ್ತನೆ ತೋರಿದ್ದು, ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಇನ್ಸ್ಪೆಕ್ಟರ್ ಭಾರತಿಯವರ ಜೊತೆ ಮಂಗಳಮುಖಿಯರು ವಾಗ್ವಾದ ನಡೆಸಿದ್ದಾರೆ. ಘಟನೆ ಹಿನ್ನಲೆ ಇದೀಗ ಹತ್ತಕ್ಕೂ ಹೆಚ್ಚು ಮಂಗಳಮುಖಿಯರನ್ನು ವಶಕ್ಕೆ ಪಡೆದಿದ್ದು, ಸಾರ್ವಜನಿಕ ಶಾಂತಿ ಭಂಗದ ಅಡಿಯಲ್ಲಿ ಕೇಸು ದಾಖಲು ಮಾಡಲಾಗಿದೆ.

ಕುಣಿಗಲ್​ನಲ್ಲಿ ದೊಣ್ಣೆಯಿಂದ ಪರಸ್ಪರ ಬಡಿದಾಡಿಕೊಂಡ ಯುವಕರ ಗುಂಪು

ತುಮಕೂರು: ನಿನ್ನೆ(ಜು.30) ರಾತ್ರಿ ಜಿಲ್ಲೆಯ ಕುಣಿಗಲ್ ತಾಲೂಕಿನ ಯಡಿಯೂರಿನಲ್ಲಿ ಯುವಕರ ಗುಂಪುಗಳು ಪರಸ್ಪರ ಬಡಿದಾಡಿಕೊಂಡ ಘಟನೆ ನಡೆದಿದೆ. ನಿನ್ನೆ ಬೆಂಗಳೂರು- ಹಾಸನ ರಸ್ತೆಯಲ್ಲಿರುವ ಡಾಬಾವೊಂದರಲ್ಲಿ ಪಾರ್ಟಿಮಾಡಿಕೊಂಡಿದ್ದ ಗುಂಪು, ಅತಿಯಾಗಿ ಮದ್ಯ ಸೇವನೆ ಮಾಡಿದ್ದರು. ಬಳಿಕ ನಡುರಸ್ತೆಯಲ್ಲೇ‌ ಎಣ್ಣೆ ಗುಂಗಿನಲ್ಲಿ ಹೊಡೆದಾಟ ಮಾಡಿಕೊಂಡಿದ್ದಾರೆ. ಈ ಕುರಿತು ಅಮೃತ್ತೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:ತಿರುಪತಿ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಸೀಟ್​ಗಾಗಿ ಹೊಡೆದಾಟ; ರಾಜ್ಯದ 38 ಪ್ರಯಾಣಿಕರ ಮೇಲೆ ಹಲ್ಲೆ

ಮನೆ ಮುಂದೆ ನಿಲ್ಲಿಸಿದ ವಾಹನಗಳಿಗೆ ಕಿಡಿಗೇಡಿಗಳಿಂದ ಕಲ್ಲೇಟು

ಕೊಪ್ಪಳ: ಮನೆ ಮುಂದೆ ನಿಲ್ಲಿಸಿದ ವಾಹನಗಳಿಗೆ ಕಿಡಿಗೇಡಿಗಳು ಕಲ್ಲೇಟು ನಡೆಸಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ. ಗಂಗಾವತಿ ನಗರದ ವಿವಿಧ ವಾರ್ಡುಗಳಿಗೆ ನುಗ್ಗಿ ದಾಂಧಲೆ ಮಾಡಿದ್ದ ದುಷ್ಕರ್ಮಿಗಳು, 8 ಬೈಕ್, 4 ಕಾರಿನ ಗ್ಲಾಸ್ ಪುಡಿಯಾಗಿದ್ದು, ನಗರದ ಜನತೆ ಬೆಚ್ಚಿ ಬಿಳಿಸಿದೆ. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಕುರಿತು ಗಂಗಾವತಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:09 pm, Sun, 30 July 23